ಪ್ರೇಮ್-ಧ್ರುವ ಸಿನಿಮಾಕ್ಕೆ ‘ಆ’ ಟೈಟಲ್ ಸಿಗ್ತಿಲ್ಲವಂತೆ ಯಾಕೆ?

ಪ್ರೇಮ್-ಧ್ರುವ ಸಿನಿಮಾಕ್ಕೆ ‘ಆ’ ಟೈಟಲ್ ಸಿಗ್ತಿಲ್ಲವಂತೆ ಯಾಕೆ?

ಸ್ಯಾಂಡಲ್​ವುಡ್ ಶೋ ಮ್ಯಾನ್ ಜೋಗಿ ಪ್ರೇಮ್ ಯಾವುದೇ ಸಿನಿಮಾ ಮಾಡಿದ್ರು ಟೈಟಲ್ ವಿಚಾರದಲ್ಲಿ ಬೇಜಾನ್ ಸೌಂಡ್ ಮಾಡೇ ಮಾಡ್ತಾರೆ. ಜನರ ಬಾಯಲ್ಲಿ ಟೈಟಲ್ ಬಗ್ಗೆ ಟಾಕ್ ಕ್ರಿಯೇಟ್ ಆಗಬೇಕು ಹಂಗೆ ಮಾಡ್ತಾರೆ. ಆದ್ರೆ ಜೋಗಯ್ಯನ ಸೂತ್ರಧಾರನಿಗೆ ಆ ಟೈಟಲ್ ಸಿಕ್ತಿಲ್ವಂತೆ.

ಜೋಗಿ ಪ್ರೇಮ್.. ಸ್ಯಾಂಡಲ್​ವುಡ್​ನ ಟ್ರೆಂಡಿಂಗ್ ನಿರ್ದೇಶಕ.. ಸಿನಿಮಾ ಸೋಲಲಿ ಗೆಲ್ಲಲಿ ಸೌಂಡ್ ಅಂತು ಮಾಡ್ತವೆ ಒಳ್ಳೆ ಹಣವನ್ನ ಸಂಪಾದಿಸುತ್ತವೆ. ಇದು ಪ್ರೇಮ್ ಸಿನಿಮಾಗಳಿಗೆ ಇರೋ ತಾಕತ್ತು ಘಮ್ಮತ್ತು. ಈಗ ತನ್ನ ಸಿನಿ ಕರಿಯರನ್ 9ನೇ ಸಿನಿಮಾ ಧ್ರುವ ಸರ್ಜಾ ಜೊತೆ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿರೋ ಟೈಟಲ್ ಬಗ್ಗೆ ಪುಕಾರ್ ಪುಕಾರ್ ಹಬ್ಬಿದೆ.

ಕರಿಯ, ಎಕ್ಸ್​​​ಕ್ಯೂಸ್​ ಮೀ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ರಾಜ್, ಜೋಗಯ್ಯ, ಕಲಿ, ದಿ ವಿಲನ್ ಈಗ ಏಕ್​ ಲವ್ ಯಾ.. ಒಂದಕ್ಕಿಂತ ಒಂದು ಟೈಟಲ್ ಕರ್ನಾಟಕ ಫೇಮಸ್ ಆಗಿವೇ. ಈಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡ್ತಿರುವ ಶೋ ಮ್ಯಾನ್​​ಗೆ ಆ ಒಂದು ಟೈಟಲೇ ಸಿಕ್ತಿಲ್ವಂತೆ.

ಆ ಟೈಟಲ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಜೋಗಿ ಪ್ರೇಮ್..!
ಹೌದು ಅದೊಂದು ಟೈಟಲ್ ಸಿಕ್ತಿಲ್ವಂತೆ. ಆ ಟೈಟಲ್ ಸಿಕ್ಕಿದ್ರೆ ಧ್ರುವ ಮತ್ತು ಪ್ರೇಮ್ ಸಿನಿಮಾ ಭಾರಿ ಸೌಂಡ್ ಮಾಡ್ತಿತ್ತು ಅನ್ನೋದು ಚಿತ್ರತಂಡದ ಚಿಂತೆ. ಹಾಗಾದ್ರೆ ಯಾವುದು ಆ ಟೈಟಲ್ ಅನ್ನೋದಕ್ಕೆ ಉತ್ತರ ‘ಕೇಡಿ’.

‘ಕೇಡಿ’.. ಈ ಟೈಟಲ್ ಮೇಲೆ ಕಣ್ಣಿಟ್ಟಿದ್ರು ಪ್ರೇಮ್. ಆದರೆ ಈ ಟೈಟಲ್​​ನಲ್ಲಿ ಬೇರೆ ಯಾವುದೋ ಒಂದು ಕನ್ನಡ ಸಿನಿಮಾ ಸೆಟ್ಟೇರಿ ಈಗಾಗಲೇ ಶೂಟಿಂಗ್ ಮಾಡುತ್ತಿದೆ. ಈ ಕಾರಣದಿಂದಾಗಿ ‘ಕೇಡಿ’ ಟೈಟಲ್ ಪ್ರೇಮ್ ಅವರ 9ನೇ ಸಿನಿಮಾಕ್ಕೆ ಸಿಕ್ತಿಲ್ವಂತೆ.

ಇನ್ನು ನಟ ಧ್ರುವ ಮತ್ತು ಅದ್ಧೂರಿ ಖ್ಯಾತಿಯ ನಿರ್ದೇಶಕ ಎ.ಪಿ.ಅರ್ಜುನ್ ಕಲ್ಪನೆಯ ಸಿನಿಮಾ ಈ ತಿಂಗಳ 15ನೇ ತಾರೀಖ್ ಲಾಂಚ್ ಆಗುತ್ತಿದೆ. ಟೈಟಲ್ ಟೀಸರ್ ಮೂಲಕ ಎ.ಪಿ.ಅರ್ಜುನ್ ನಿರ್ದೇಶನದ ಸಿನಿಮಾ ಸೌಂಡ್ ಮಾಡಲಿದೆ. ಮಾರ್ಟಿನ್ ಅನ್ನೋ ಹೆಸರನ್ನ ಚಿತ್ರತಂಡ ಫೈನಲ್ ಮಾಡಿದೆ ಎನ್ನುತ್ತಿದೆ ಮೂಲಗಳು. ಲಹರಿ ಆಡಿಯೋ ಮ್ಯೂಸಿಕ್ ಕಂಪನಿಯಲ್ಲಿ ಹಾಡುಗಳು ಹೊರಬರಲಿವೆ. ಧ್ರುವ ಅವರ ಒಂದು ಸಿನಿಮಾಕ್ಕೆ ಟೈಟಲ್ ಸಿಕ್ಕಿದೆ ಮತ್ತೊಂದು ಚಿತ್ರಕ್ಕೆ ಟೈಟಲ್ ಸಿಕಿಲ್ಲ. ಟೈಟಲ್ ಇಲ್ಲದೆ ಶೀಘ್ರದಲ್ಲೇ ಹೊಸ ಸಿನಿಮಾದ.

Source: newsfirstlive.com Source link