ಲಾರ್ಡ್ಸ್​ ಅಂಗಳದಲ್ಲಿ ಹಿಡಿತ ಸಾಧಿಸಿದ ಕೋಹ್ಲಿ ಸೇನೆ; ಭಾರತಕ್ಕೆ 245 ರನ್​​​ಗಳ ಮುನ್ನಡೆ

ಲಾರ್ಡ್ಸ್​ ಅಂಗಳದಲ್ಲಿ ಹಿಡಿತ ಸಾಧಿಸಿದ ಕೋಹ್ಲಿ ಸೇನೆ; ಭಾರತಕ್ಕೆ 245 ರನ್​​​ಗಳ ಮುನ್ನಡೆ

ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಇನ್ನಿಂಗ್ಸ್ ಆರಂಭಿಸಿ ಅದ್ಭುತ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್​ ಬೌಲರ್​ಗಳ ಬಿಗಿ ದಾಳಿಯಿಂದ ಭಾರತ ಇಂದು 7 ವಿಕೆಟ್​ ಕಳೆದುಕೊಂಡು ಕೇವಲ 88 ರನ್​ ಅಷ್ಟೇ ಕಲೆಹಾಕಿತು. ಆ ಮೂಲಕ ವಿರಾಟ್​ ಸೇನೆ ಮೊದಲ ಇನ್ನಿಂಗ್ಸ್​​ನಲ್ಲಿ 364 ರನ್​​ಗಳಿಗೆ ಆಲೌಟ್​ ಆಗಿದೆ.

ಇದನ್ನೂ ಓದಿ: ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ವಿದಾಯ? -ಟೀಂ ಇಂಡಿಯಾ ಕೋಚ್​​ ಸ್ಥಾನಕ್ಕೆ 6 ಮಂದಿ ಕ್ಯೂ..!

ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 119ರನ್ ​ಗಳಿಸಿದೆ. ಇನ್ನು ಇಂಗ್ಲೆಂಡ್ 245 ರನ್​ಗಳ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ಪರ ರೋರ್ರಿ ಬರ್ನ್ಸ್ 49, ಡೋಮ್ ಸಿಬ್ಲೇ 11, ಜೋ ರೂಟ್ ಅಜೇಯ 48 ಮತ್ತು ಜಾನಿ ಬೈರ್ಸ್ಟೋವ್ ಅಜೇಯ 6 ರನ್ ಗಳಿಸಿ ಮೂರನೇ ದಿನದಾಟವನ್ನ ಇಂದು ಆರಂಭಿಸಲಿದ್ದಾರೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯರ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ; ‘ನನಗೂ ಬೇಕು’ ಅಂತಿದ್ದಾರೆ ಫ್ಯಾನ್ಸ್​

2 ವಿಕೆಟ್ ಪಡೆದ ಸಿರಾಜ್
ಇನ್ನು ಭಾರತದ ಪರ ಮೊಹಮ್ಮದ್ ಸಿರಾಜ್ ಅವರು 2 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ ಮಹಮ್ಮದ್ ಶಮಿ ಒಂದು ವಿಕೆಟ್ ಪಡೆದು ಇಂಗ್ಲೆಂಡ್​ಗೆ ಆಘಾತವನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ: ಪ್ರೇಮ್-ಧ್ರುವ ಸಿನಿಮಾಕ್ಕೆ ‘ಆ’ ಟೈಟಲ್ ಸಿಗ್ತಿಲ್ಲವಂತೆ ಯಾಕೆ?

ಇದನ್ನೂ ಓದಿ: ಇಂಡೋ-ಇಂಗ್ಲೆಂಡ್​ 2ನೇ ಟೆಸ್ಟ್​: ಮೊದಲ ಇನ್ನಿಂಗ್ಸ್​​​ನಲ್ಲಿ ಭಾರತ 364ರನ್​​ಗೆ ಆಲೌಟ್​

Source: newsfirstlive.com Source link