ನಾಳೆ ರೈತ ಸಂಘಟನೆಗಳಿಂದ ‘ತಿರಂಗಾ ಱಲಿ’ -ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್

ನಾಳೆ ರೈತ ಸಂಘಟನೆಗಳಿಂದ ‘ತಿರಂಗಾ ಱಲಿ’ -ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್​ ಸಭೆ

blank
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಹಿನ್ನೆಲೆ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್​ ಸಭೆ ನಡೆಯಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ‌.ರವಿಕುಮಾರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿ ಹಲವು ಸಚಿವರು ಭಾಗಿಯಾಗಲಿದ್ದಾರೆ. ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಹಿನ್ನೆಲೆ ಗಡಿಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಏರುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ರೂಲ್ಸ್​​ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ: ನಿನ್ನೆ ಒಂದೇ ದಿನ ರಾಜ್ಯದಲ್ಲಿ 1669 ಕೇಸ್​; ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್​ ಜಾರಿ..?

‘ಕೊರೊನಾ ಲಸಿಕೆ 3ನೇ ಡೋಸ್‌ ಪಡೆದ್ರೆ ಅತ್ಯುತ್ತಮ’

blankಸೀರಂ ಇನ್ಸ್‌ಸ್ಟಿಟ್ಯೂಟ್‌ ಅಧ್ಯಕ್ಷ ಸೈರಸ್ ಪೂನಾವಾಲಾ, ಕೋವಿಶೀಲ್ಡ್‌ ಲಸಿಕೆಯ ಮೂರನೇ ಡೋಸ್​ಪಡೆದಿದ್ದಾರೆ. ಎರಡು ಡೋಸ್‌ ಜೊತೆಗೆ ಮೂರನೇ ಡೋಸ್‌ ಲಸಿಕೆ ಪಡೆದ್ರೆ ಮತ್ತಷ್ಟು ಲಾಭವಾಗಲಿದೆ ಅಂತ ಪೂನಾವಾಲಾ ಎಂದಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದ 6 ತಿಂಗಳ ಬಳಿಕ ಆ್ಯಂಟಿಬಾಡೀಸ್‌ ಕಡಿಮೆಯಾಗುತ್ತವೆ. ಹೀಗಾಗಿ ನಾನು ಕೋವಿಶೀಲ್ಡ್ ಲಸಿಕೆಯ 3ನೇ ಡೋಸ್‌ ಪಡೆದಿದ್ದೇನೆ. ಅಲ್ಲದೇ ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಏಳರಿಂದ ಎಂಟು ಸಾವಿರ ಉದ್ಯೋಗಿಗಳಿಗೆ ಮೂರನೇ ಡೋಸ್‌ ಲಸಿಕೆ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: 3 ಡೋಸ್​​​ ಲಸಿಕೆ ಪಡೆದ ಸೀರಂ ಸಂಸ್ಥೆ ಮುಖ್ಯಸ್ಥ..! ಅವರು ಕೊಟ್ಟ ‘ಪಾಸಿಟಿವ್’ ಕಾರಣ ಏನು ಗೊತ್ತಾ..?

ರೋಗನಿರೋಧಕ ಶಕ್ತಿ ಕಮ್ಮಿಯಿದ್ರೆ 3ನೇ ಡೋಸ್
ಅಮೆರಿಕಾದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು ಸೋಂಕಿನ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದೆ. ಹೀಗಾಗಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ 3ನೇ ಡೋಸ್ ಕೊರೊನಾ ಲಸಿಕೆ ನೀಡಲು ಅಮೆರಿಕ ಅನುಮೋದನೆ ನೀಡಿದೆ. ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಮತ್ತೊಂದು ಡೋಸ್ ಲಸಿಕೆ ನೀಡುವುದು ಅವಶ್ಯಕ ಎಂದು ಅಮೆರಿಕಾದ ವೈದ್ಯರೊಬ್ಬರು ತಿಳಿಸಿದ್ದಾರೆ. ಇನ್ನು ಅಪಾಯಕಾರಿ ಡೆಲ್ಟಾ ರೂಪಾಂತರಿ ವಿಶ್ವವ್ಯಾಪಿ ಹರಡುತ್ತಿರುವುದರಿಂದ ವೈದ್ಯರು ಮೂರನೇ ಡೋಸ್​ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜು

blank
ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮ ಈಗಾಗಲೇ ಮನೆಮಾಡಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 2 ದಿನಗಳಿಂದಲೂ ದೇಶದ ಎಲ್ಲಾ ಆಡಳಿತ ಕಚೇರಿಗಳು ಬಣ್ಣದ ಲೈಟ್​ಗಳಿಂದ ಝಗಮಗಿಸುತ್ತಿವೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಮತ್ತು ಮುಂಬೈನ ಬೃಹತ್​ ಮುನ್ಸಿಪಾಲ್​ ಕಾರ್ಪೋರೇಷನ್​ ಕಟ್ಟಡಗಳು ಕೇಸರಿ, ಬಿಳಿ, ಹಸಿರು ಲೈಟ್​ಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡು ಮಿಂಚುತ್ತಿವೆ. ಇನ್ನು 75ನೇ ಸ್ವಾತಂತ್ರ್ಯ ದಿನಾಚರಣೆಗೆ ಅಂಗವಾಗಿ ಇಂದು ಸಂಜೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​​ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: 75ನೇ ಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಶಾ ಪರೇಡ್ ಗ್ರೌಂಡ್ ಸುತ್ತ ಕಟ್ಟೆಚ್ಚರ

ನಾಳೆ ರೈತ ಸಂಘಟನೆಯಿಂದ ‘ತಿರಂಗಾ ಱಲಿ’
ವಿವಾದಿತ ಕೃಷಿ ಮಸೂದೆಗಳನ್ನ ವಿರೋಧಿಸಿ ರೈತರು ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ. 75ನೇ ಸ್ವಾತಂತ್ರ ದಿನಾಚರಣೆಯನ್ನ ರೈತರು, ಕಿಸಾನ್ ಮಝ್ದೂರ್ ಆಜಾದಿ ಸಂಗ್ರಾಮ್ ದಿವಸ್ ಆಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ರೈತರು ಸ್ವಾತಂತ್ರ್ಯ ದಿನಾಚರಣೆಯಂದು ತೆಹ್ಸಿಲ್ ಹಾಗೂ ಬ್ಲಾಕ್ ಮಟ್ಟದಲ್ಲಿ ತಿರಂಗಾ ಱಲಿ ನಡೆಸಲಿದ್ದಾರೆ. ಆದರೆ, ಱಲಿ ದೆಹಲಿ ಪ್ರವೇಶಿಸುವುದಿಲ್ಲ ಎಂದು ಹೇಳಿದೆ. ನಾಳೆ ರೈತರು ಟ್ರಾಕ್ಟರ್, ಬೈಕ್​ ಹಾಗೂ ಎತ್ತಿನಗಾಡಿಗಳೊಂದಿಗೆ ಜಿಲ್ಲೆಯ ಕೇಂದ್ರ ಕಚೇರಿವರೆಗೆ ತಿರಂಗಾ ಱಲಿ ನಡೆಸಲಿದ್ದಾರೆ.

ಜಾನುವಾರು ಸಂರಕ್ಷಣೆ ಕಾಯ್ದೆಗೆ ಅಸ್ಸಾಂ ಅಂಗೀಕಾರ
ಅಸ್ಸಾಂ ವಿಧಾನಸಭೆಯಲ್ಲಿ ಜಾನುವಾರು ಸಂರಕ್ಷಣೆ ಮಸೂದೆ ಅಂಗೀಕಾರವಾಗಿದೆ. ಈ ಮಸೂದೆ ಪ್ರಕಾರ ಯಾವುದೇ ದೇವಾಲಯದ 5 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಐಯುಡಿಎಫ್, ಸಿಪಿಐ ಸಾಕಷ್ಟು ವಿರೋಧದ ನಡುವೆಯೂ ಆಡಳಿತ ರೂಢ ಹಿಮಂತ್ ಬಿಸ್ವ ಶರ್ಮಾ ಸರ್ಕಾರ ಜಾನುವಾರು ಸಂರಕ್ಷಣೆ ಮಸೂದೆಯನ್ನು ಅಂಗೀಕರಿಸಿದೆ.

ಇಲ್ಲಿ ಕೋವಿಡ್ ಲಸಿಕೆ ಹಾಕುವಂತಿಲ್ಲ!

blank
ಜಗತ್ತಿನಾದ್ಯಂತ ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಲಸಿಕೆ ವಿತರಿಸಲಾಗುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಕೊವಿಡ್ ಲಸಿಕೆ ವಿತರಣೆಯನ್ನು ನಿರ್ಬಂಧಿಸಲಾಗಿದೆ. ಅಫ್ಘಾನಿಸ್ತಾನದ ಪಕ್ತಿಯಾ ನಗರದ ಮೇಲೆ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿದ್ದು ಈ ಪ್ರದೇಶದ ವ್ಯಾಪ್ತಿಯಲ್ಲಿ ಲಸಿಕೆ ವಿತರಣೆಯನ್ನು ನಿಷೇಧಿಸಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 175 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ.

ಜನರನ್ನ ಮನೆಯಲ್ಲೇ ಲಾಕ್ ಮಾಡ್ತಿರುವ ಚೀನಾ!
ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಜನರು ಹೊರಬರದಂತೆ ಮನೆ ಒಳಗೆ ಕೂಡಿ ಹಾಕುತ್ತಿದ್ದಾರೆ. ಕೋವಿಡ್ 19 ಡೆಲ್ಟಾ ತಳಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಆರಂಭದಲ್ಲಿಯೇ ಎಚ್ಚೆತ್ತುಕೊಂಡಿರುವ ಚೀನಾ, ಕಠಿಣ ಕ್ರಮಗಳಿಗೆ ಮುಂದಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ: ದಿನಕ್ಕೆ 3 ಬಾರಿ ಬಾಗಿಲು ತೆರೆದ್ರೆ ಇಡೀ ಮನೆಯೇ ಲಾಕ್

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 245 ರನ್ ಮುನ್ನಡೆ blank

ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಇನ್ನಿಂಗ್ಸ್ ಆರಂಭಿಸಿ ಅದ್ಭುತ ಪ್ರದರ್ಶನ ನೀಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 119 ರನ್ ​ಗಳಿಸಿದೆ. ಇನ್ನು ಇಂಗ್ಲೆಂಡ್ 245 ರನ್​ಗಳ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ಪರ ರೋರ್ರಿ ಬರ್ನ್ಸ್ 49, ಡೋಮ್ ಸಿಬ್ಲೇ 11, ಜೋ ರೂಟ್ ಅಜೇಯ 48 ಮತ್ತು ಜಾನಿ ಬೈರ್ಸ್ಟೋವ್ ಅಜೇಯ 6 ರನ್ ಗಳಿಸಿ ಮೂರನೇ ದಿನದಾಟ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಲಾರ್ಡ್ಸ್​ ಅಂಗಳದಲ್ಲಿ ಹಿಡಿತ ಸಾಧಿಸಿದ ಕೋಹ್ಲಿ ಸೇನೆ; ಭಾರತಕ್ಕೆ 245 ರನ್​​​ಗಳ ಮುನ್ನಡೆ

ಇನ್​ಸ್ಟಾಗ್ರಾಂನಲ್ಲಿ ನಟಿ ರಶ್ಮಿಕಾ ಮಂದಣ್ಣ ದಾಖಲೆ

blank
ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಬಳಗ ದಿನೆ ದಿನೇ ಹೆಚ್ಚಾಗ್ತಾನೇ ಇದೆ. ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಪೂರ್ಣಗೊಳ್ಳುವ ಮೊದಲೇ ಇನ್​​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 2 ಕೋಟಿ ಬೆಂಬಲಿಗರನ್ನು ​ಹೊಂದುವ ಮೂಲಕ ದಕ್ಷಿಣ ಭಾರತದಲ್ಲೇ ಹೆಚ್ಚಿನ ಬೆಂಬಲಿಗರನ್ನು ಹೊಂದಿದ ನಟಿ ಅನ್ನೋ ದಾಖಲೆ ಮಾಡಿದ್ದಾರೆ. ಈಗ ಇದೇ ಖುಷಿಯಲ್ಲಿರುವ ರಶ್ಮಿಕಾ ತಮ್ಮ ಫ್ಯಾನ್ಸ್​ಗೆ ತನ್ನ ಜೀವನದಲ್ಲಿ ನಡೆದ ಎಲ್ಲ ಮೊದಲ 20 ಸುಂದರ ಕ್ಷಣಗಳನ್ನು ಇನ್​​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೀವನದ 20 ಸವಿ ನೆನಪುಗಳನ್ನ ಹಂಚಿಕೊಂಡ ರಶ್ಮಿಕಾ

Source: newsfirstlive.com Source link