ಬದುಕು ಬಂಗಾರ ಮಾಡಿತು ‘ಯಜಮಾನ’ ಚಿತ್ರ.. ವಿಷ್ಣು ದಾದಾ ಅಭಿಮಾನಿಯ ಒಂದು ಸ್ಫೂರ್ತಿಯ ಕಥೆ

ಬದುಕು ಬಂಗಾರ ಮಾಡಿತು ‘ಯಜಮಾನ’ ಚಿತ್ರ.. ವಿಷ್ಣು ದಾದಾ ಅಭಿಮಾನಿಯ ಒಂದು ಸ್ಫೂರ್ತಿಯ ಕಥೆ

ಸಿನಿಮಾಕ್ಕೆ ಎಂತವರನ್ನೂ ಸೆಳೆಯುವ ಸ್ಫೂರ್ತಿಯಿಂದ ಬದಲಾಯಿವ ಶಕ್ತಿ ಭಕ್ತಿ ಇದೆ.. ಇದಕ್ಕೆ ಒಂದೊಳ್ಳೆ ಉದಾಹಾರಣೆ ಇವತ್ತಿನ ಈ ಹೌದಾ ಹೌದಾ ಸ್ಟೋರಿ! ಅಭಿನವ ಭಾರ್ವಗ ಡಾ.ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ವ್ಯಕ್ತಿಯೊಬ್ಬರ ಬದುಕನ್ನ ಬಂಗಾರವನ್ನಾಗಿಸಿದ ಕಥೆ ಇದು.

ಸಾಹಸ ಸಿಂಹ ಡಾ.ವಿಷ್ಣು ವರ್ಧನ್ ಒಂದು ಹೊಸ ಕಂಪನಿಯ ಉದ್ಘಾಟನೆಯನ್ನ ಮಾಡಿದ್ದಾರೆ. ಇದ್ಯಾವ ಕಂಪನಿಯನ್ನ ವಿಷ್ಣುದಾದಾ ಅತಿ ಪ್ರೀತಿಯಿಂದ ಉದ್ಘಾಟನೆ ಮಾಡಿದ್ರು.. ಈ ರಹಸ್ಯವನ್ನ ಪತ್ತೆ ಹಚ್ಚಲು ಹೋದ ನಮಗೆ ಸಿಕ್ಕಿದ್ದು ಉಪ್ಪಿನ ಕಾಯಿ.. ಉಪ್ಪಿನ ಕಾಯಿ ಫ್ಯಾಕ್ಟ್ರಿ.. ಬರಿ ಉಪ್ಪಿಯನ ಕಾಯಿ ಫ್ಯಾಕ್ಟ್ರಿಯಲ್ಲ; ಯಜಮಾನ ಉಪ್ಪಿನ ಕಾಯಿ ಫ್ಯಾಕ್ಟ್ರಿ..

blank

ಸಿನಿಮಾ ನೋಡಿ; ಅದರಲ್ಲಿರುವ ಒಂದೊಳ್ಳೆ ಸಂದೇಶವನ್ನು ಆಯ್ದುಕೊಂಡು ಸಿನಿಮಾದಲ್ಲಿ ಬರೋ ನೆಚ್ಚಿನ ನಾಯಕನಂತೆ ನಿಜ ಜೀವನದಲ್ಲಿ ಯಶಸ್ವಿಯಾಗೋದು ಬಹಳ ಕಷ್ಟ.. ಆದ್ರೆ ಡಾ.ವಿಷ್ಣುವರ್ಧನ್​ ಅವರ ಅಪ್ಪಟ ಅಭಿಮಾನಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವರದರಾಜ್​ ಪೈ ಅವರು ಮಾತ್ರ ವಿಷ್ಣುವರ್ಧನ್ ಮಾಡಿದ್ದ ಯಜಮಾಣ ಸಿನಿಮಾವನ್ನ ನೋಡಿ ಒಂದು ಉಪ್ಪಿನ ಕಾಯಿ ಫ್ಯಾಕ್ಟರಿಯನ್ನೇ ತೆಗೆಯುತ್ತಾರೆ.

ವಿಷ್ಣುವರ್ಧನ್​ ಅವರನ್ನ ಚಿಕ್ಕಂದಿನಿಂದಲೂ ಬಹಳ ಇಷ್ಟ ಪಡ್ತಾಯಿದ್ದ, ಅವರ ನಟನೆಯನ್ನು ನೋಡಿ ಆರಾಧಿಸುತ್ತಾ ಬೆಳಿದಿದ್ದ ವರದರಾಜ ಪೈ ಅವರಿಗೆ ಯಜಮಾನ ಸಿನಿಮಾ ತುಂಬಾ ಇಷ್ಟವಾಗಿತ್ತು.. ಯಜಮಾನ ಸಿನಿಮಾ ನೋಡಿದ ಮೇಲೆ ಅದರಲ್ಲಿ ಡಾ.ವಿಷ್ಣುವರ್ಧನ್ ಒಂದು ಉಪ್ಪಿನ ಕಾಯಿ ವ್ಯಾಪಾರ ಮಾಡಿ ಹೊಸ ಜಿವನವನ್ನು ಕಟ್ಟಿಕೊಳ್ತಾರೆ.. ಅದರಂತೆ ಅವರ ಅಭಿಮಾನಿಯೂ ಕೂಡ ಉಪ್ಪಿನ ಕಾಯಿ ವ್ಯಾಪಾರ ಶುರು ಮಾಡಿದ್ರು. ಡಾ.ವಿಷ್ಣುವರ್ಧನ್​ ಅಭಿನಯದ ಯಜಮಾನ ಸಿನಿಮಾ ನೋಡಿದ ವರದಾರಾಜ ಪೈ ಅವರಿಗೆ ಹೊಸ ಪ್ಯಾಕ್ಟರಿಯನ್ನ ಕಟ್ಟೋಕೆ ಕನಸು ಹುಟ್ಟುತ್ತದೆ.

blank

ಅಂದು ವಿಷ್ಣುವರ್ಧನ್ ನನ್ನ ಯಜಮಾನ ಸಿನಿಮಾ ನೋಡಿ ಒಬ್ಬ ವಿಶೇಷ ಅಭಿಮಾನಿ ಫ್ಯಾಕ್ಟರಿಯನ್ನ ಕಟ್ಟಿರೋದು ನನಗೆ ತುಂಬಾ ಖುಷಿ ಮತ್ತು ಹೆಮ್ಮೆ ಎನ್ನಿಸುತ್ತದೆ ಎಂದು ಅಂದು ಮಾತನಾಡಿದ್ರು.. ಅಂದು ವಿಷ್ಣುದಾದಾ ಒಂದು ಮಾತನ್ನ ಹೇಳಿದ್ರು.. ಅಪ್ಪಟ ಅಭಿಮಾನಿಯ ಮಾತಿಗೆ ಬೆಲೆ ಕೊಟ್ಟು ನಾನು ಬಂದಿದ್ದೀನಿ ನಾನು ನನ್ನ ಮಾತನ್ನ ನಡೆಸಿಕೊಟ್ಟಿದ್ದೀನಿ. ಅದೇ ರೀತಿ ಅವರೂ ನನಗೆ ಒಂದು ಮಾತು ನಡೆಸಿಕೊಡ ಬೇಕು ಅಂತ ಅಭಿಮಾನಿಯ ಹತ್ತಿರ ಕೇಳಿದ್ರು.

blank

ಒಬ್ಬ ನಟನ ಸಿನಿಮಾ ನೋಡಿ ನಾನು ಅವರಂತೆ ಬಾಳಬೇಕು ಅನ್ನೂ ವರದರಾಜ್ ಪೈ ಒಂದು ಕಡೆಯಾದ್ರೆ, ಅಭಿಮಾನಿಯ ಬೆಳವಣಿಗೆಗೆ ತಾವೆ ಖುದ್ದಾಗಿ ಬಂದು ಉದ್ಘಾಟನೆ ಮಾಡಿ ಅವರ ಬಳಿಯೇ ಒಂದು ಅಭಿಮಾನ ಬೇಡಿಕೆ ಇಟ್ಟಿದ್ದು ನಿಜಕ್ಕೂ ಶ್ಲಾಘನಿಯ ವಿಚಾರ. ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಎಂದಿಗೂ ಮರೆಯಲಾಗದ ಮಾಣಿಕ್ಯ.

blank

Source: newsfirstlive.com Source link