ವಿಶ್ವಕಪ್​ ಬಳಿಕ ಅಲ್ಲ, ಇಂಗ್ಲೆಂಡ್​ನಲ್ಲೇ ನಿರ್ಧಾರವಾಗುತ್ತೆ ‘ಶಾಸ್ತ್ರಿ ಭವಿಷ್ಯ’..!?

ವಿಶ್ವಕಪ್​ ಬಳಿಕ ಅಲ್ಲ, ಇಂಗ್ಲೆಂಡ್​ನಲ್ಲೇ ನಿರ್ಧಾರವಾಗುತ್ತೆ ‘ಶಾಸ್ತ್ರಿ ಭವಿಷ್ಯ’..!?

ಒಂದೆಡೆ ಟೀಮ್ ಇಂಡಿಯಾ ಲಾರ್ಡ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮತ್ತೊಂದೆಡೆ ಆಫ್​ ದಿ ಫೀಲ್ಡ್​ನಲ್ಲಿ ಕೋಚ್ ರವಿಶಾಸ್ತ್ರಿಯ ಭವಿಷ್ಯ ಏನು ಎಂಬ ಚರ್ಚೆ ಶುರುವಾಗಿದೆ. ಇನ್​ಫ್ಯಾಕ್ಟ್​​ ಕ್ರಿಕೆಟ್​​ ಕಾಶಿಯಲ್ಲೇ ಶಾಸ್ತ್ರಿ ಭವಿಷ್ಯವೂ ನಿರ್ಧಾರವಾಗಲಿದೆ ಅನ್ನೋದು ಮೂಲದ ಮಾಹಿತಿಯಾಗಿದೆ.

blank

ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ನಡೀತಾ ಇರುವ ಇಂಡೋ-ಇಂಗ್ಲೆಂಡ್​ ಕದನದ 2 ದಿನದಾಟ ಮುಗಿದಿದೆ. 7 ವರ್ಷಗಳ ಬಳಿಕ ಕ್ರಿಕೆಟ್ ಮೆಕ್ಕಾದಲ್ಲಿ ಗೆಲ್ಲೋ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ನಿರೀಕ್ಷೆಗೂ ಮೀರಿದ ಪ್ರದರ್ಶನದಿಂದ ಗಮನ ಸೆಳೆಯುತ್ತಿದೆ. ಇದೇ ಕ್ರಿಕೆಟ್​ ಕಾಶಿಯಲ್ಲೇ ಟೀಮ್ ಇಂಡಿಯಾ ಹೆಡ್ ಕೋಚ್​ ರವಿಶಾಸ್ತ್ರಿಯ ಭವಿಷ್ಯದ ಬಗೆಗಿನ ಚರ್ಚೆಗೂ ವೇದಿಕೆ ಒದಗಿಸಿದೆ.

2017ರಲ್ಲಿ ಅನಿಲ್ ಕುಂಬ್ಳೆ ಕೆಳಗಿಳಿದ ಬಳಿಕ ಹೆಡ್​​ ಕೋಚ್ ಹುದ್ದೆಗೇರಿದ್ದ ರವಿಶಾಸ್ತ್ರಿ ಅವಧಿ ವಿಶ್ವಕಪ್​ ಬಳಿಕ ಅಂತ್ಯವಾಗಲಿದೆ. ಆದ್ರೆ, ರವಿಶಾಸ್ತ್ರಿಯ ಯಶಸ್ಸಿನ ಹೊರತಾಗಿಯೂ ಒಪ್ಪಂದ ನವೀಕರಣ ಅಸಾಧ್ಯದ ಮಾತು ಎನ್ನಲಾಗ್ತಿದೆ. ಒಂದೆಡೆ ಶಾಸ್ತ್ರಿಗೆ ಮುಂದುವರೆಯುವ ಇಚ್ಚೇ ಇಲ್ಲ ಎಂಬುದರ ಜೊತೆಗೆ ಬಿಸಿಸಿಐಗೂ ರವಿಶಾಸ್ತ್ರಿಯನ್ನ ಮುಂದುವರೆಸಲು ಒಲವಿಲ್ಲ ಎಂಬ ಸುದ್ದಿಯೂ ಹೊರ ಬಿದ್ದಿದೆ. ಹೀಗಾಗಿಯೇ ಲಾರ್ಡ್ಸ್​​ನಲ್ಲಿ ಬೀಡು ಬಿಟ್ಟಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಇದೀಗ ಶಾಸ್ತ್ರಿ ಜೊತೆ ಒಂದು ಸುತ್ತಿನ ಚರ್ಚೆಗೆ ಮುಂದಾಗಿದ್ದಾರಂತೆ.

blank

ಇಂಗ್ಲೆಂಡ್​ನಲ್ಲೇ ನಿರ್ಧಾರವಾಗುತ್ತೆ ಶಾಸ್ತ್ರಿ ಭವಿಷ್ಯ..!
ಸದ್ಯ ಐಪಿಎಲ್, ಟಿ20 ಸಿದ್ಧತೆ ಒತ್ತಡದ ನಡುವೆಯೂ ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ಬಿಗ್​ಬಾಸ್​ಗಳು, ಲಾರ್ಡ್ಸ್​ನಲ್ಲಿ ಹೆಡ್​ಕೋಚ್ ರವಿಶಾಸ್ತ್ರಿ ಜೊತೆ ಮಹತ್ವದ ಮಾತುಕತೆಗೆ ಮುಂದಾಗಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಟೀಮ್ ಇಂಡಿಯಾದ ಭವಿಷ್ಯ, ಹೆಡ್​ ಕೋಚ್​ ವಿಚಾರದಲ್ಲಿ ಬಿಸಿಸಿಐನ ನಿಲುವು ಚರ್ಚೆಯ ಅಜೆಂಡಾ ಎನ್ನಲಾಗ್ತಿದೆ. ಹೀಗಾಗಿ ಇಂಗ್ಲೆಂಡ್ ಸರಣಿಯ ಅಂತ್ಯದೊಳಗೆ ಕೋಚ್​ ರವಿಶಾಸ್ತ್ರಿ ಭವಿಷ್ಯವೂ ನಿರ್ಧಾರವಾಗಲಿದೆ ಎನ್ನಲಾಗ್ತಿದೆ.

ಒಂದೆಡೆ 14ನೇ ಆವೃತ್ತಿಯ ಐಪಿಎಲ್ ​​​​​​​​ಸಕೆಂಡ್ ಫೇಸ್​ಗೆ ಸಿದ್ಧತೆ, ಮತ್ತೊಂದೆಡೆ ಟಿ-20 ವಿಶ್ವಕಪ್ ಆಯೋಜನೆಯ ಹೊಣೆ ಬಿಸಿಸಿಐ ಮೇಲಿದೆ. ಹೀಗಾಗಿ ಕೊರೊನಾ ಕಾಲಘಟ್ಟದಲ್ಲಿ ಟೂರ್ನಿ ಆಯೋಜಿಸಿ ಯಶಸ್ಸು ಕಾಣುವ ಮಹತ್ವದ ಹೊಣೆ ಹೊತ್ತಿರುವ ಬಿಸಿಸಿಐ ಅಧಿಕಾರಿಗಳು ಮುಂದಿನ 3 ತಿಂಗಳ ಕಾಲ ಫುಲ್​ ಬ್ಯುಸಿ. ಹೀಗಾಗಿಯೇ ಹೆಡ್​ ಕೋಚ್​ ಭವಿಷ್ಯದ ನಿರ್ಧಾರವನ್ನ ಲಾರ್ಡ್ಸ್​ನಲ್ಲೇ ನಿರ್ಧರಿಸೋಕೆ ಬಿಗ್​ಬಾಸ್​ಗಳು ಒಲವು ತೋರಿದ್ದಾರೆ.

ಶಾಸ್ತ್ರಿ ಮಾರ್ಗದರ್ಶನದಲ್ಲಿ​​ ಟೆಸ್ಟ್​ನಲ್ಲಿ ಭಾರತ

 • ಪಂದ್ಯ 40
 • ಗೆಲುವು 23
 • ಸೋಲು 12
 • ಡ್ರಾ 05

ಶಾಸ್ತ್ರಿ ಮಾರ್ಗದರ್ಶನದಲ್ಲಿ​​ ODI​ನಲ್ಲಿ ಭಾರತ

 • ಪಂದ್ಯ 84
 • ಗೆಲುವು 56
 • ಸೋಲು 24
 • N/R 04

ಶಾಸ್ತ್ರಿ ಮಾರ್ಗದರ್ಶನದಲ್ಲಿ​​ T20ಯಲ್ಲಿ ಭಾರತ

 • ಪಂದ್ಯ 64
 • ಗೆಲುವು 41
 • ಸೋಲು 19
 • N/R 04

Source: newsfirstlive.com Source link