ಬ್ಯಾಡ್​ಲಕ್: ಇಲ್ಲಿ ಕೋವಿಡ್ ಲಸಿಕೆ ಹಾಕುವಂತಿಲ್ಲ..!

ಬ್ಯಾಡ್​ಲಕ್: ಇಲ್ಲಿ ಕೋವಿಡ್ ಲಸಿಕೆ ಹಾಕುವಂತಿಲ್ಲ..!

ಕಾಬೂಲ್: ಜಗತ್ತಿನಾದ್ಯಂತ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಲಸಿಕೆ ವಿತರಿಸಲಾಗುತ್ತಿದೆ. ಆದರೆ ಅಫ್ಘಾನಿಸ್ತಾನದಲ್ಲಿ ಅದೇ ಕೊವಿಡ್-19 ಲಸಿಕೆ ವಿತರಣೆಯನ್ನು ನಿರ್ಬಂಧಿಸಲಾಗಿದೆ.

ಹೌದು ಅಫ್ಘಾನಿಸ್ತಾನದ ತಾಲಿಬಾನ್​ ಉಗ್ರ ಅಟ್ಟಹಾಸ ಮುಂದುವರೆದಿದ್ದು, ಪಕ್ತಿಯಾ ನಗರದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರ ಸಂಘಟನೆಯು ಈ ಪ್ರದೇಶದ ವ್ಯಾಪ್ತಿಯಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆಫ್ಘಾನ್​ನ ಶೇ.65ರಷ್ಟು ಭೂಪ್ರದೇಶವನ್ನು ತಾಲಿಬಾನ್​ ವಶಪಡಿಸಿಕೊಂಡು ವಿಕೃತಿ ಮೆರೆಯುತ್ತಿದೆ.

ಇದನ್ನೂ ಓದಿ: ಆಫ್ಘಾನ್​​ನಲ್ಲಿ ಮುಂದುವರಿದ ತಾಲಿಬಾನಿಗಳ ವಿಕೃತಿ; ಕಂದಹಾರ್ ಆಯ್ತು.. ಕಾಬೂಲ್​ ಮೇಲೆ ಕಣ್ಣಿಟ್ಟ ಉಗ್ರರು

ಲಸಿಕೆಯನ್ನು ನಿರ್ಬಂಧಿಸಿದ ಪರಿಣಾಮ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 175 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿಗಳಲ್ಲಿ ಪಕ್ತಿಯಾ ನಗರ ವಿಶ್ವದ ಕೋವಿಡ್​ ಹಾಟ್​ಸ್ಪಾಟ್​ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋ ಮಾತುಗಳು ಕೇಳಿಬಂದಿವೆ.

Source: newsfirstlive.com Source link