ಅಂಗೈ ಅರಮನೆಯಲ್ಲಿ ರಶ್ಮಿಕಾನೇ ರಾಣಿ; ನ್ಯಾಷನಲ್ ಕ್ರಶ್​ಗೆ ಜೈ ಎಂದ 2 ಕೋಟಿ ಫಾಲೋವರ್ಸ್

ಅಂಗೈ ಅರಮನೆಯಲ್ಲಿ ರಶ್ಮಿಕಾನೇ ರಾಣಿ; ನ್ಯಾಷನಲ್ ಕ್ರಶ್​ಗೆ ಜೈ ಎಂದ 2 ಕೋಟಿ ಫಾಲೋವರ್ಸ್

ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಬಳಗ ದಿನೆ ದಿನೇ ಹೆಚ್ಚಾಗ್ತಾನೇ ಇದೆ. ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಪೂರ್ಣಗೊಳ್ಳುವ ಮೊದಲೇ ಇನ್​​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 2 ಕೋಟಿ ಬೆಂಬಲಿಗರನ್ನು ​ಹೊಂದುವ ಮೂಲಕ ದಕ್ಷಿಣ ಭಾರತದಲ್ಲೇ ಹೆಚ್ಚಿನ ಫಾಲೋವರ್ಸ್​ ಹೊಂದಿದ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗ ಇದೇ ಖುಷಿಯಲ್ಲಿರುವ ರಶ್ಮಿಕಾ ತಮ್ಮ ಫ್ಯಾನ್ಸ್​ಗೆ ತನ್ನ ಜೀವನದಲ್ಲಿ ನಡೆದ ಎಲ್ಲ ಸುಂದರ ಕ್ಷಣಗಳನ್ನು ಇನ್​​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

blank

ಗೂಗಲ್​ನಿಂದಲೇ ನ್ಯಾಷನಲ್ ಕ್ರಶ್ ಎಂದೆನಿಸಿಕೊಂಡ ಸೌಥ್ ಸಿನಿ ದುನಿಯಾದ ನಂಬರ್ ಒನ್ ನಟಿಯಾಗಿರೋ ರಶ್ಮಿಕಾ ಮಂದಣ್ಣ ತನ್ನ ಜೀವನದ ಸವಿ ಸವಿ ನೆನಪನ್ನ ಹಂಚಿ ಸಂಭ್ರಮಿಸಿದ್ದಾರೆ.

ಕನ್ನಡ, ತೆಲುಗು, ತಮಿಳು ಹಿಂದಿ ನಾಲ್ಕು ಭಾಷೆಯಲ್ಲು ರಶ್ಮಿಕಾ ಬಹು ಬೇಡಿಕೆಯ ನಟಿ.. ಅಲ್ಲದೆ ಸೋಷಿಯಲ್​ ಮೀಡಿಯಾ ಎಂಬ ಅಂಗೈ ಅರಮನೆಯಲ್ಲಿ ರಶ್ಮಿಕಾನೆ ರಾಣಿ.. ಸಾಲು ಸಾಲು ಚಿತ್ರಗಳಲ್ಲಿ ಕೊಡಗಿನ ಕುವರಿ ಮೋಡಿ ಮಾಡಿದ್ದು, ಮಿಲಿಯನ್ ಗಟ್ಟಲೇ ಜನ ರಶ್ಮಿಕಾರ ಇನ್​ಸ್ಟಾಗ್ರಾಂ ನಲ್ಲಿ ಫಾಲೋ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಸೌತ್ ಇಂಡಿಯಾದ ಸ್ಟಾರ್​ ನಟಿ ಮಣಿಯರಿಗಿಂತ ಅತೀ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ ಕನ್ನಡದ ಕುವರಿ ರಶ್ಮಿಕಾ.

blank

ರಶ್ಮಿಕಾ ಮಂದಣ್ಣ.. ಅಟ್ ಪ್ರೆಸೆಂಟ್​​​​ ದಕ್ಷಿಣ ಭಾರತದ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್​​. ನಾಲ್ಕೇ ವರ್ಷಕ್ಕೆ ಸೌಥ್ ಸಿನಿ ದುನಿಯಾದ ನಂಬರ್ 1 ನಟಿ ಯಾಗೋದು ಅಂದ್ರೆ ಸುಮ್ನೇನಾ.ಇನ್​​ಸ್ಟಾ ಗ್ರಾಮ್ ಲೋಕದಲ್ಲಿ ಬರೋಬ್ಬರಿ 20 ಮಿಲಿಯನ್ ಅಂದ್ರೆ ಎರಡು ಕೋಟಿ ಫಾಲೋವರ್ಸ್ ಗಳನ್ನ ಹೊಂದಿದ್ದಾರೆ ನ್ಯಾಷನಲ್​​​​​ ಕ್ರಶ್..

blank

ರಶ್ಮಿಕಾ ಇನ್​ಸ್ಟಾಗ್ರಾಂನಲ್ಲಿ ಒಂದಲ್ಲ ಎರಡಲ್ಲ ಬರೋಬರಿ 20.1ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿಷ್ಯ ಅಂದ್ರೆ ಇಷ್ಟು ದೊಡ್ಡ ಪ್ರಮಾಣದ ಫಾಲೋವರ್ಸ್​ ಬೇರೆ ಯಾವುದೇ ನಟಿಯರಿಗೆ ಇಲ್ಲ. ಸಿನಿಮಾಗಳ ಅವಕಾಶ ಹೆಚ್ಚಿದಂತೆ ರಶ್ಮಿಕಾ ಬಳಗವು ಸೋಷಿಯಲ್​ ಮೀಡಿಯಾ ಸಾಮ್ರಾಜ್ಯ ವಿಸ್ತರಿಸುತ್ತ ಹೋಗ್ತಿದೆ.

Source: newsfirstlive.com Source link