ಅಯ್ಯರ್ ಮಾಡಿದ ತಪ್ಪಿಗೆ ಟೀಮ್​ ಇಂಡಿಯಾ ಆಟಗಾರರಿಗೆ NCA ಖಡಕ್ ವಾರ್ನಿಂಗ್​..!

ಅಯ್ಯರ್ ಮಾಡಿದ ತಪ್ಪಿಗೆ ಟೀಮ್​ ಇಂಡಿಯಾ ಆಟಗಾರರಿಗೆ NCA ಖಡಕ್ ವಾರ್ನಿಂಗ್​..!

ಕ್ರಿಕೆಟ್​ಗೆ ಕಮ್​​​​ಬ್ಯಾಕ್​ ಮಾಡೋಕೆ ಶ್ರೇಯಸ್​ ಅಯ್ಯರ್​​​ ದಾರಿ ಸುಗಮವಾಗಿದೆ. ಆದರೆ ಅಯ್ಯರ್​ ನಡೆದು ರೀತಿಗೆ ಬಿಸಿಸಿಐ ಮತ್ತು ಎನ್​ಸಿಎ ಎರಡೂ ಗರಂ ಆಗಿದೆ. ಅಷ್ಟೇ ಅಲ್ಲ.. ಇನ್ನು ಮುಂದೆ ಹೀಗೆ ಯಾರೂ ಕೂಡ ನಡೆದುಕೊಳ್ಳಬಾರದು ಅಂತ ಇತರ ಆಟಗಾರರಿಗೂ ವಾರ್ನಿಂಗ್​ ಕೊಟ್ಟಿವೆ. ಅಷ್ಟಕ್ಕೂ ಅಯ್ಯರ್​ ಮಾಡಿದ್ದೇನು.?

ಟೀಮ್ ಇಂಡಿಯಾದ ಭರವಸೆಯ ಆಟಗಾರ​​ ಶ್ರೇಯಸ್​ ಅಯ್ಯರ್, ಇಂಜುರಿಯಿಂದ ಸಂಪೂರ್ಣ ಫಿಟ್​ ಆಗಿದ್ದಾರೆ. ಈ ಕುರಿತು ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯಿಂದ ಕ್ಲಿಯರೆನ್ಸ್​​ ಸರ್ಟಿಫಿಕೇಟ್​ ಕೂಡ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳಲು ಅಯ್ಯರ್ ಗೆ ಗ್ರೀನ್​ ಸಿಗ್ನಲ್​ ನೀಡಿದೆ. ಜೊತೆಗೆ ಇದೇ ವಿಚಾರಕ್ಕೆ ಸಂಬಂಧಿಸದಂತೆ ಅಯ್ಯರ್​​ಗೆ ಮತ್ತು ಆಟಗಾರರಿಗೆ ಬಿಸಿಸಿಐ ಮತ್ತು NCA ಪರೋಕ್ಷವಾಗಿ ವಾರ್ನಿಂಗ್​ ಕೊಟ್ಟಿವೆ.

blank

ಯೆಸ್​.​.! ಆಟಗಾರರು ಇಂಜುರಿಯಿಂದ ಗುಣವಾದ ಬಳಿಕ ಮೊದಲು NCAಗೆ ಮಾಹಿತಿ ನೀಡಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಬೇಕು. ಜೊತೆಗೆ ಸಂಪೂರ್ಣ ಮ್ಯಾಚ್​​ ಫಿಟ್​ ಆಗೋವರೆಗೂ ಅಕಾಡೆಮಿಯಲ್ಲೇ ಉಳಿದುಕೊಳ್ಳಬೇಕು. ಈ ವೇಳೆ ಪ್ರಗತಿಯನ್ನು ದಿನದಿಂದ ದಿನಕ್ಕೆ ಫಿಸಿಯೊ ಮೇಲ್ವಿಚಾರಣೆ ನಡೆಸಲಿದ್ದಾರೆ. ಆ ಬಳಿಕವಷ್ಟೇ ಫಿಟ್​​ನೆಸ್​ ಪ್ಲಿಯರೆನ್ಸ್​ ಸರ್ಟಿಫಿಕೇಟ್​ ಸಿಗೋದು. ಇದಿಷ್ಟು ಸದ್ಯ ಇರುವ ನಿಯಮಾವಳಿ. ಆದ್ರೆ ಅಯ್ಯರ್​ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿಯೇ ಬಿಸಿಸಿಐ ಮತ್ತು ಎನ್​​ಸಿಎ ಗರಂ ಆಗಿರೋದು.

blank

ಇಂಗ್ಲೆಂಡ್​ ಸರಣಿಯಲ್ಲಿ ಇಂಜುರಿಗೆ ಒಳಗಾದ ಅಯ್ಯರ್, ಆ ಬಳಿಕ ಒಂದು ಸಲವೂ NCAಗೆ ಭೇಟಿ ನೀಡೋದಿರಲಿ ಸರಿಯಾಗಿ ಮಾಹಿತಿಯನ್ನೇ ನೀಡಿಲ್ಲವಂತೆ. ಮುಂಬೈನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಫಿಸಿಯೋ ಬಳಿ ಸಲಹೆ ಪಡೆದು ರಿಹಾಬ್​ ಕ್ಯಾಂಪ್​ ಮುಗಿಸಿದ್ದಾರೆ. ಇದಾದ ಬಳಿಕ ಫಿಟ್​ನೆಸ್​ ಕ್ಲಿಯರೆನ್ಸ್​ ಪತ್ರಕ್ಕಾಗಿ ಮಾತ್ರ ಬೆಂಗಳೂರಿನ NCAಗೆ ಬಂದಿದ್ದಾರೆ. ಹೀಗಾಗಿಯೇ BCCI ಮತ್ತು NCA ಖಡಕ್​ ವಾರ್ನಿಂಗ್​ ನೀಡಿರೋದು.

ಆಟಗಾರರಿಗೆ BCCI, NCA ಕೊಟ್ಟ ಸಂದೇಶವೇನು?
ಅಯ್ಯರ್​ ಮಾತ್ರವಲ್ಲ.. ಉಳಿದ ಆಟಗಾರರಿಗೂ ಇಂಜುರಿಗೆ ಒಳಪಟ್ಟಾಗ, NCAಗೆ ತಿಳಿಸೋದ್ರ ಜೊತೆಗೆ ಕಡ್ಡಾಯವಾಗಿ ಇಲ್ಲೇ ರಿಹಾಬ್​ಗೆ ಹಾಜರಾಗಲೇಬೇಕು ಎಂದು ಇದೀಗ ವಾರ್ನಿಂಗ್​ ನೀಡಲಾಗಿದೆ. ಜೊತೆಗೆ ನಿಯಮಗಳನ್ನ ಅನುಸರಿಸಿದ್ರೆ ಮಾತ್ರವೇ ಫಿಟ್​ನೆಸ್​​ ಪತ್ರ ಎಂಬ ಎಚ್ಚರಿಕೆಯನ್ನೂ ನೀಡಿದೆ. ಇಲ್ಲಿದೆ ಈ ಪ್ರಕರಣ ಸುಖಾಂತ್ಯ ಕಂಡರೂ, ಅಯ್ಯರ್​ ನಿಯಮಾವಳಿಗಳನ್ನ ಗಾಳಿಗೆ ತೂರಿದ್ದು ಎಷ್ಟು ಸರಿ ಅನ್ನೋದು ಚರ್ಚೆಗೆ ಕಾರಣವಾಗಿದೆ.

Source: newsfirstlive.com Source link