ಆಫ್ರಿಕನ್ನರಿಗೆ ಭಾರತವೇ ನೆಚ್ಚಿನ ದೇಶ.. ಅದರಲ್ಲೂ ಬೆಂಗಳೂರಿಗೆ ಯಾಕೆ ಹೆಚ್ಚಾಗಿ ಬರ್ತಾರೆ..?

ಆಫ್ರಿಕನ್ನರಿಗೆ ಭಾರತವೇ ನೆಚ್ಚಿನ ದೇಶ.. ಅದರಲ್ಲೂ ಬೆಂಗಳೂರಿಗೆ ಯಾಕೆ ಹೆಚ್ಚಾಗಿ ಬರ್ತಾರೆ..?

ಪೆಟ್ರೋಲ್ ಅಂದ್ರೆ ಅರಬ್ ರಾಷ್ಟ್ರಗಳು ನೆನಪಾಗ್ತವೆ.. ಖನಿಜ ಅಂದ್ರೆ ಆಸ್ಟ್ರೇಲಿಯಾ ನೆನಪಾಗ್ತದೆ.. ಚಿನ್ನ ಅಂದ್ರೆ ಭಾರತ ಅಂತಾರೆ.. ವಜ್ರ ಅಂದ್ರೆ ಅಗೇನ್ ಆಸ್ಟ್ರೇಲಿಯಾ ಹೆಸರು ಹೇಳ್ತಾರೆ.. ಆದ್ರೆ ನಿಮಗೆ ಗೊತ್ತಾ ಈ ಎಲ್ಲ ಖನಿಜಗಳ ಸಂಪತ್ತು ವಿಶ್ವದಲ್ಲಿ ಅಧಿಕವಾಗಿ ಎಲ್ಲಿದೆ ಅಂತಾ? ಆದ್ರೆ ಆ 54 ರಾಷ್ಟ್ರಗಳು ಮಾತ್ರ ಯಾರಿಗೂ ನೆನಪಾಗಲ್ಲ.. ಇನ್​ಫ್ಯಾಕ್ಟ್​​ ಶಿಕ್ಷಣಕ್ಕಾಗಿಯೂ ಆ ದೇಶದವರು ವಿದೇಶಕ್ಕೆ ಹೋಗುವ ಸ್ಥಿತಿ ಇದೆ. ಅದ್ರಲ್ಲೂ ಆಫ್ರಿಕನ್ಸ್​ ಬೆಂಗಳೂರಿಗೇ ಯಾಕೆ ಬರ್ತಾರೆ ಗೊತ್ತಾ?

ಇವತ್ತು ಆಫ್ರಿಕಾ ಅಂತಾ ಯಾರಾದ್ರೂ ಹೇಳಿದ್ರೆ ಸಾಕು.. ಕಣ್ಣ ಮುಂದೆ ಕಿತ್ತು ತಿನ್ನುವ ಬಡತನ, ಭಯೋತ್ಪಾದನೆ, ಡ್ರಗ್ಸ್​ ಡೀಲಿಂಗ್ ಮುಂತಾದ ಸಂಗತಿಗಳೇ ಕಣ್ಣ ಮುಂದೆ ಬಂದು ಹೋಗುತ್ತವೆ. ಬೋಕೊ ಹರಾಮ್​ನಂಥ ಭಯೋತ್ಪಾದಕ ಸಂಘಟನೆ ಭೀತಿ ಹುಟ್ಟಿಸಿ ಬಿಡುತ್ತೆ. ಅಲ್ಲಿ ಇಲ್ಲಿ ಸಿಕ್ಕಿ ಬೀಳೋ ಸ್ಮಗ್ಲರ್ಸ್.. ಕಡಲಲ್ಲಿ ದಾಳಿ ನಡೆಸೋ ಪೈರೇಟ್ಸ್​​ಗಳ ಕಾರಣದಿಂದಾಗಿ ಇಡೀ ಆಫ್ರಿಕನ್​​ ಸಮುದಾಯವನ್ನೇ ಅನುಮಾನದ ದೃಷ್ಟಿಯಿಂದ ನೋಡೋವಂಥ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಯಾರೋ ಒಬ್ಬರು ಮಾಡೋ ತಪ್ಪಿನಿಂದಾಗಿ ಇಡೀ ಭೌಗೋಳಿಕ ಕ್ಷೇತ್ರವೇ ಶಿಕ್ಷೆ ಅನುಭವಿಸಬೇಕಾದಂಥ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ..

blank

ಬೆಂಗಳೂರು ಅಂದ್ರೆ ಯಾಕೆ ಅಷ್ಟು ಇಷ್ಟ..?
ಆದ್ರೆ ವಾಸ್ತವೇ ಬೇರೆ ಇದೆ.. ಅಲ್ಲಿನ ಪ್ರತಿ ವ್ಯಕ್ತಿಗಳೂ ಶಿಕ್ಷಣಕ್ಕಾಗಿ ಅದೆಷ್ಟು ಹೋರಾಟ ಮಾಡ್ತಾರೆ ಅನ್ನೋದು ಅನುಭವಿಸಿದವರಿಗೇ ಗೊತ್ತು. ಇದೇ ಕಾರಣದಿಂದಾಗಿ ಅವರ ನೆಚ್ಚಿನ ಸ್ಥಳ ಭಾರತವಾಗಿದೆ.. ಅತಿ ಹೆಚ್ಚು ಜನರ ಭಾರತಕ್ಕೆ ಅದ್ರಲ್ಲೂ ಬೆಂಗಳೂರಿಗೇ ಬರಲು ಇಚ್ಛೆ ಪಡ್ತಾರೆ..

ಶತಮಾನಗಳ ದಬ್ಬಾಳಿಕೆ.. ಧಾರ್ಮಿಕ ದಾಳಿ.. ವರ್ಣ ಭೇದ ನೀತಿ.. ಹಿಂಸೆ.. ಆಂತರಿಕ ಕಚ್ಚಾಟ.. ಸ್ಲೇವ್​ಗಳಿಗಾಗಿ ನಡೆದ ಯುದ್ಧ.. ಕಣ್ಣೀರು.. ರಕ್ತ.. ಪರಿಣಾಮ ಕಿತ್ತು ತಿನ್ನುವ ಬಡತನ. ಊಟಕ್ಕಾಗಿ ಒಂದು ಹೋರಾಟ ಆದ್ರೆ.. ಶಿಕ್ಷಣಕ್ಕಾಗಿ ಮತ್ತೊಂದು ಹೋರಾಟ.. ಅದು ಆಫ್ರಿಕಾ.. ಹೌದು ಇಡೀ ವಿಶ್ವದ ಸಂಪತ್ತಿನ

ತಿಜೋರಿಯಾಗಿರುವ ಸಂಪದ್ಭರಿತ ಆಫ್ರಿಕಾ.!
ಶಿಕ್ಷಣ ಇಂದಿಗೂ ಗಗನ ಕುಸುಮ

blank

ಆಫ್ರಿಕಾ ಬಗ್ಗೆ ತಿಳೀಬೇಕು ಅಂದ್ರೆ ಒಂದು ವಿಷಯವನ್ನ ನೆನಪು ಮಾಡಿಕೊಳ್ಳಬೇಕು. ನಾವು ಚಿಕ್ಕವರಿದ್ದಾಗ ಎಲ್ಲ ಒಂದು ಕತೆ ಕೇಳಿರ್ತೀವಿ.. ಅದೆಂದ್ರೆ ಒಂದೇ ಕಡ್ಡಿಯಿದ್ರೆ ಸುಲಭವಾಗಿ ಮುರಿಯಬಹುದು.. ಅದೇ 10 ಕಡ್ಡಿಯಾದ್ರೆ ಒಟ್ಟಿಗೆ ಮುರಿಯಲು ಸ್ವಲ್ಪ ಕಷ್ಟಪಡಬೇಕು. ಅದೇ ಒಂದು ಕಡ್ಡಿಗಳ ಒಂದು ಗುಂಪು ಆದ್ರೆ ಮುರಿಯೋದು ಅಸಾಧ್ಯ.. ಅಂದ್ರೆ ಒಗ್ಗಟ್ಟಿನಲ್ಲಿ ಬಲವಿದೆ.. ಒಗ್ಗಟ್ಟು ಇಲ್ಲ ಅಂದ್ರೆ ಯಾರು ಬೇಕಾದ್ರೂ ಸೋಲಿಸಬಹುದು ಅಂತ ಇದರ ತಾತ್ಪರ್ಯ ಈ ಕತೆ ಆಫ್ರಿಕಾಕ್ಕೆ ಬಹಳ ಅನ್ವಯವಾಗುತ್ತೆ. ಇದೇ ಕಾರಣದಿಂದ ಅಲ್ಲಿ ಬಡತನ ತಾಂಡವವಾಡ್ತಿದ್ರೆ.. ಶಿಕ್ಷಣ ಇಂದಿಗೂ ಗಗನ ಕುಸುಮವಾಗಿದೆ. ಹೀಗಾಗಿಯೇ ಬೆಂಗಳೂರು ಅವರಿಗೆ ಅತ್ಯಂತ ಇಷ್ಟದ ನಗರವೂ ಆಗಿದೆ.

ಇದನ್ನೂ ಓದಿ: ಬದುಕು ಬಂಗಾರ ಮಾಡಿತು ‘ಯಜಮಾನ’ ಚಿತ್ರ.. ವಿಷ್ಣು ದಾದಾ ಅಭಿಮಾನಿಯ ಒಂದು ಸ್ಫೂರ್ತಿಯ ಕಥೆ

ಆಫ್ರಿಕಾ ಅಂದ್ರೆ ಇದೊಂದು ದೇಶವಲ್ಲ.. ಬದಲಿಗೆ ಬರೋಬ್ಬರಿ 54 ರಾಷ್ಟ್ರಗಳ ಸಮೂಹ. ಇಡೀ ವಿಶ್ವದ 121.61 ಕೋಟಿ ಜನಸಂಖ್ಯೆ ಇಲ್ಲಿ ವಾಸಿಸುತ್ತೆ. ಇಲ್ಲಿ ಪ್ರಾಕೃತಿಕ ಸಂಪತ್ತೂ ಹೇರಳ.. ಖನಿಜ ಸಂಪತ್ತೂ ಎಲ್ಲಕ್ಕಿಂತ ಹೆಚ್ಚು.. ಇಲ್ಲಿಯ ಹಲವು ತೊರೆಗಳಲ್ಲಿ ಚಿನ್ನ ಹರಿಯುತ್ತೆ.. ಅದನ್ನು ಹುಡುಕುವುದೇ ಹಲವರ ಕಾಯಕ.. ಇಲ್ಲಿ ವಜ್ರ ಅತ್ಯಧಿಕ ಪ್ರಮಾಣದಲ್ಲಿ ದೊರಕುತ್ತೆ.. ಕಲ್ಲಿದ್ದಲು, ಕಬ್ಬಿಣದ ಅದಿರು, ತಾಮ್ರ ಸೇರಿದಂತೆ ಎಲ್ಲ ಖನಿಜ ನಿಕ್ಷೇಪಕಗಳೂ ಅತ್ಯಧಿಕ. ಅಷ್ಟೇ ಅಲ್ಲ ಚೆರಿ ಆನ್​ದಿ ಕೇಕ್ ಅನ್ನೋ ಹಾಗೆ ಅರಬ್​ ರಾಷ್ಟ್ರಗಳಿಗಿಂತ ಬೃಹತ್ತಾದ ತೈಲ ಸಂಪತ್ತೂ ಇಲ್ಲಿರೋದು ಪತ್ತೆಯಾಗಿದೆ. ಇಷ್ಟೆಲ್ಲ ಇದ್ರೂ ಇದು ಬಡ ರಾಷ್ಟ್ರಗಳ ಸಮೂಹ ಅಂದ್ರೆ ನಂಬಲೇ ಬೇಕು. ಇಲ್ಲಿಯ 54 ರಾಷ್ಟ್ರಗಳಲ್ಲಿ ಒಂದೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಲ್ಲ.. ಇದ್ದುದರಲ್ಲಿಯೇ ಸೌಥ್ ಆಫ್ರಿಕಾ ಹಾಗೂ ರವಾಂಡಾ ಅನ್ನೋ ದೇಶಗಳು ಕೊಂಚ ಶಾಂತಿಯಿಂದ ಇವೆ.. ಸ್ವಲ್ಪ ಅಭಿವೃದ್ಧಿಯನ್ನೂ ಹೊಂದುತ್ತಿವೆ. ಇಷ್ಟೆಲ್ಲ ಸಂಪತ್ತು ಇದ್ರೂ ಈ ರಾಷ್ಟ್ರಗಳು ಯಾಕೆ ಬಡವಾಗಿವೆ? ಇಲ್ಲಿ ಯಾಕೆ ಶಿಕ್ಷಣ ಇಲ್ಲ? ಇವಱಕೆ ಭಾರತಕ್ಕೆ ಬರ್ತಾರೆ? ಅನ್ನೋದು ಸಹಜ ಪ್ರಶ್ನೆ ಎಲ್ಲರಿಗೂ ಮೂಡಿಯೇ ಮೂಡುತ್ತೆ..
ಆಫ್ರಿಕದಲ್ಲಿ ಏನಾಗ್ತಿದೆ..?

blank

ಜನಾಂಗೀಯ ಕಲಹಗಳು.. ಲೋಕಲ್​ ಡಾನ್​ಗಳ ಹಾವಳಿ.. ಮಿತಿ ಮೀರಿದ ಭ್ರಷ್ಟಾಚಾರ.. ಧಾರ್ಮಿಕ ಕಲಹ.. ಭಯೋತ್ಪಾದನೆ.. ಸ್ಥಳೀಯ ಸಂಸ್ಕೃತಿ ಮೇಲೆ ಧರ್ಮಾಂತರದ ಪ್ರಹಾರ.. ಜೊತೆಗೆ ಕೌಶಲ್ಯದ ಕೊರತೆ.. ನಾಯಕತ್ವದ ಖಾಲಿತನ.. ಇಲ್ಲಿನ ಸಂಪತ್ತಿಗಾಗಿ ಹೊರಗಿನವರ ಹುನ್ನಾರ.. ಒಳಗಿನವರ ಸ್ವಾರ್ಥ.. ಜೊತೆಗೆ ಚೀನಾದಂಥ ರಾಷ್ಟ್ರದ ವಕ್ರದೃಷ್ಟಿ ಇಂದು ಆಫ್ರಿಕಾವನ್ನ ಕಡು ಬಡತನಕ್ಕೆ ದೂಡಿದೆ. ಕೆಲ ಆಫ್ರಕನ್​ ರಾಷ್ಟ್ರಗಳಿಗಂತೂ ಆದಾಯ ಅಂದ್ರೆ ಕಡಲ್ಗಳ್ಳತನ.. ಮಾದಕ ವಸ್ತು ಕಳ್ಳಸಾಗಾಣಿಕೆಯೇ ಆಗಿದೆ ಎನ್ನುವಂಥ ಆರೋಪಗಳ ಆಫ್ರಿಕನ್ನರನ್ನು ಸಂಶಯದಿಂದ ನೋಡೋವಂಥ ವಾತಾವರಣವನ್ನು ನಿರ್ಮಿಸಿ ಬಿಟ್ಟಿವೆ.
ಇಂಥ ಕರಳುತಿನ್ನುವಂಥ ಪರಿಸ್ಥಿತಿಯ ಹೊರತಾಗಿಯೂ ಇಲ್ಲಿಯ ಬಹುದೊಡ್ಡ ವರ್ಗಕ್ಕೆ ತಮ್ಮ ಭವಿಷ್ಯದ ಪೀಳಿಗೆಗೆ ಉತ್ತಮವಾದ ರಾಷ್ಟ್ರ ನೀಡಬೇಕು ಅನ್ನೋ ಕನಸಿದೆ. ತಾವು ಅನುಭವಿಸಿದಂಥ ಅವಮಾನ ಆಗಬಾರದು ಅನ್ನೋ ಕಳಕಳಿ ಇದೆ.. ಜೊತೆಗೆ ತಮ್ಮ ರಾಷ್ಟ್ರವನ್ನ ಬಡತನದ ಕೂಪದಿಂದ ಹೊರತಂದು ಅಭಿವೃಧ್ಧಿ ಮಾಡಬೇಕು ಅನ್ನೋ ಮಹತ್ವಾಕಾಂಕ್ಷೆ ಕೂಡ ಇದೆ. ಆದ್ರೆ, ಅದಕ್ಕೆ ಬೇಕಾದಂಥ ಪರಿಸರ ಅಲ್ಲಿಲ್ಲ.. ಶೈಕ್ಷಣಿಕ ವ್ಯವಸ್ಥೆ ಕೂಡ ಇಲ್ಲ.. ಸಾಮಾನ್ಯ ಶಿಕ್ಷಣ ಸಿಗೋದೂ ಗಗನ ಕುಸುಮ ಅನ್ನೋಹಾಗೆ ಆಗಿದೆ. ಇದೇ ಕಾರಣದಿಂದಾಗಿ ಆ ದೇಶಗಳ ನಿವಾಸಿಗಳು ಅನಿವಾರ್ಯವಾಗಿ ಇತರ ದೇಶಗಳತ್ತ ನೋಡ್ತಾರೆ. ಅಂಧಕಾರದಲ್ಲಿ ಬೆಳಕಾಗಿ ಅವರಿಗೇ ಭಾರತ ಕಾಣುತ್ತೆ.. ಅದ್ರಲ್ಲೂ ಭಾರತದಲ್ಲಿ ಬೆಂಗಳೂರಿಗೆ ಬರಬೇಕು ಅನ್ನೋದು ಅವರ ಕನಸಾಗಿರುತ್ತೆ..!

blank

ಭಾರತವೇ ಬಹುತೇಕ ಆಫ್ರಿಕನ್ನರ ನೆಚ್ಚಿನ ದೇಶ
ಬೆಂಗಳೂರೇ ಭಾರತದಲ್ಲಿ ಫೆವರಿಟ್ ನಗರ

ಆಫ್ರಿಕಾದ ವಿದ್ಯಾರ್ಥಿಗಳು ಭಾರತಕ್ಕೆ ಹೆಚ್ಚಾಗಿ ಬರ್ತಾರೆ ಅನ್ನೋ ಪ್ರಶ್ನೆ ಹಲವರಿಗೆ ಮೂಡ್ತಾ ಇರುತ್ತೆ.. ಇದಕ್ಕೆ ಆಫ್ರಿಕನ್ನರೇ ಕಾರಣ ನೀಡ್ತಾರೆ. ಅವರೇ ಹೇಳುವಂತೆ ಯಾವುದೇ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಶಿಕ್ಷಣ ಪಡೆಯಬೇಕು ಅಂದ್ರೆ ಅದು ಅವರಿಗೆ ಅಸಾಧ್ಯದ ಮಾತಾಗಿರುತ್ತೆ. ಯಾಕಂದ್ರೆ ಅಲ್ಲಿ ಶಿಕ್ಷಣ ಬಲು ತುಟ್ಟಿ. ಅಲ್ಲಿ ಇರೋದು ಇನ್ನೂ ತುಟ್ಟಿ.. ಅದನ್ನ ಅಫರ್ಡ್ ಮಾಡೋದು ಬಹುತೇಕು ಆಫ್ರಿಕನ್ನರಿಗೆ ಸಾಧ್ಯವಾಗಲ್ಲ.. ಇದೆಲ್ಲಕ್ಕಿಂತ ಹೆಚ್ಚಾಗಿ ಮಿತಿ ಮೀರಿದ ವರ್ಣ ಭೇದ ನೀತಿ ಭೀತಿ ಅವರನ್ನ ಕಾಡುತ್ತೆ..

ಇದನ್ನೂ ಓದಿ:‘ಈ’ ಮುದ್ದಾದ ಪ್ರಾಣಿ ಕೊಲ್ಲುಲು ಬ್ರಿಟನ್ ವಾರಂಟ್! ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಜನ.. ಅಷ್ಟಕ್ಕೂ ಆಗಿದ್ದು ಏನು?

ಅದೇ ಇನ್ನೊಂದು ಕಡೆ ಭಾರತಕ್ಕೆ ಆಫ್ರಿಕನ್ ಸ್ಟೂಡೆಂಟ್ಸ್​ ಕರೆತರಲು ಇಲ್ಲಿನ ಸಾಕಷ್ಟು ಶಿಕ್ಷಣ ಸಂಸ್ಥೆಗಳೂ ಸಾಕಷ್ಟು ಪ್ರಚಾರವನ್ನ ಆಯಾ ದೇಶಗಳಲ್ಲಿ ಮಾಡುತ್ತವೆ. ಪಾಶ್ಚ್ಯಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಶಿಕ್ಷಣವೂ ಅಗ್ಗ.. ಇಲ್ಲಿ ಅವರಿಗೆ ವರ್ಣ ಭೇದ ನೀತಿ ಅನುಭವ ಆಗದೇ ಇರಲ್ಲ ಅಂತ ಅವರು ಹೇಳಲ್ಲ.. ಬದಲಿಗೆ ಬೇರೆ ದೇಶಗಳಿಗೆ ಹೋಲಿಸಿದ್ರೆ ಕಮ್ಮಿ ಅಂತಾರೆ.. ಅದ್ರಲ್ಲೂ ಇಡೀ ದೇಶದಲ್ಲಿ ಬೆಂಗಳೂರೇ ಬೆಸ್ಟ್ ಅನ್ನೋದು ಅವರ ಅನುಭವ..

ಮೋದಿ ಸರ್ಕಾರದಿಂದಲೂ ಇದೆ ಸ್ಕಾಲರ್​ಶಿಪ್
ಆರ್ಥಿಕ ಸಹಾಯ ನೀಡೋದ್ರಲ್ಲೂ ಭಾರತವೇ ಮುಂದೆ

2016ರಲ್ಲಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಫ್ರಿಕನ್​ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯಲು ವಾರ್ಷಿಕ 50 ಸಾವಿರ ರೂಪಾಯಿಗಳಷ್ಟು ಸ್ಕಾಲರ್​ಶಿಪ್ ನೀಡೋದಾಗಿ ಘೋಷಿಸಿದ್ರು. ಇದರಂತೆ 2019ರ ಸಾಲಿನಲ್ಲಿ ಬರೋಬ್ಬರಿ 15 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡೋದಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಆಗಿರೋ ತಿರುಮೂರ್ತಿ ಅವರು ಘೋಷಿಸಿದ್ರು.

blank

ಭಾರತದ ಸರ್ಕಾರದ ಈ ಕ್ರಮಗಳಿಂದಾಗಿ ಇಂದು ದೇಶದಲ್ಲಿ ಸುಮಾರು 40 ರಿಂದ 50 ಸಾವಿರ ಆಫ್ರಿಕನ್​ ವಿದ್ಯಾರ್ಥಿಗಳು ವಿವಿಧ ನಗರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದ್ರಲ್ಲೂ ಐಟಿಯಲ್ಲಿ ಶಿಕ್ಷಣ ಪಡೆಯೋಕೆ ಹೆಚ್ಚಿನ ವಿದ್ಯಾರ್ಥಿಗಳು ಬೆಂಗಳೂರನ್ನ ಆಯ್ಕೆ ಮಾಡಿಕೊಂಡಿದ್ರೆ.. ಗುರುಗ್ರಾಂ, ಗೋವಾ, ಚೆನ್ನೈ, ನವದೆಹಲಿ ಮುಂತಾದ ನಗರಗಳಲ್ಲಿಯೂ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಮೊದಿ ಸರ್ಕಾರ ಸ್ಕಾಲರ್​ ಶಿಪ್ ಘೋಷಿಸಿದ್ದು ಯಾಕೆ?
ಇದರಿಂದ ದೇಶಕ್ಕೆ ಹೇಗೆ ಉಪಯೋಗವಾಗುತ್ತೆ ಗೊತ್ತಾ?

ಸಂಪದ್ಭರಿತವಾಗಿರೋ ಆಫ್ರಿಕಾದಲ್ಲಿ ಇಂದು ಚೀನಾದ ಕಂಪನಿಗಳೂ ಪಾರುಪತ್ಯ ಸಾಧಿಸಿವೆ. ಸಾಲಕೊಟ್ಟು ದೇಶಗಳನ್ನ ಸಾಲದ ಕೂಪದಲ್ಲಿ ಸಿಲುಕಿಸುತ್ತಿವೆ. ಈ ಮೂಲಕ ತಮ್ಮ ಹಿಡಿತ ಸಾಧಿಸುತ್ತಿದೆ. ಆ ಚೀನಾಕ್ಕೆ ಭಾರತ ಕೆಲಕಡೆ ತಕ್ಕ ಮಟ್ಟಿನ ಠಕ್ಕರ್ ನೀಡ್ತಿದೆ. ವಿಶ್ವಾಸ ಮತ್ತು ಸಹಾಯದ ಮೂಲಕ ಆಫ್ರಿಕನ್ನರ ಮನಸ್ಸನ್ನು ಗೆಲ್ಲಲು ಭಾರತ ಯತ್ನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿಯೇ ಆಫ್ರಿಕನ್​ ವಿದ್ಯಾರ್ಥಿಗಳಿಗೆ ಶಿಕ್ಷಣದ ಹೆಬ್ಬಾಗಿಲನ್ನ ಭಾರತ ತೆರೆಯುತ್ತಿದೆ. ಈ ಮೂಲಕವಾಗಿ ಅವರಲ್ಲಿ ಭಾರತದ ಬಗ್ಗೆ ಉತ್ತಮ ಭಾವನೆ ಮೂಡಿಸೋದು.. ಆಫ್ರಿಕದಲ್ಲಿ ಅವರೇ ಮುಂದೆ ಭಾರತಕ್ಕೆ ಗುಡ್​ವಿಲ್ ಅಂಬಾಸಿಡರ್ ಆಗ್ತಾರೆ ಅನ್ನೋದು ಕೇಂದ್ರದ ಭಾವನೆ.

ಸಮಸ್ಯೆ ಆಗ್ತಿರೋದು ಎಲ್ಲಿ?
ಆಫ್ರಿಕನ್​ ವಿದ್ಯಾರ್ಥಿಗಳಿಗೆ ಆಗ್ತಿದೆಯಾ ತಾರತಮ್ಯ?

ಹಲವಾರು ಆಫ್ರಿಕನ್ ವಿದ್ಯಾರ್ಥಿಗಳು ತಮಗೆ ಭಾರತದಲ್ಲಿ ತಾರತಮ್ಯ ವಾಗ್ತಿದೆ ಅಂತಾ ಆರೋಪಿಸ್ತಾರೆ. ಅದರಂತೆ ಗೋವಾದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಅಲ್ಲಿನ ಪೊಲೀಸರಿಗೂ, ಆಫ್ರಿಕನ್ಸ್​ ಸ್ಟೂಡೆಂಟ್ಸ್​ಗೂ ದೊಡ್ಡ ಜಟಾಪಟಿ ಏರ್ಪಟ್ಟಿತ್ತು. ಗುರುಗ್ರಾಂದಲ್ಲಿ ಒಬ್ಬ ಯುವಕನ ಸಾವಿನ ಬಳಿಕ ನಡೆದ ಪ್ರತಿಭಟನೆಯಲ್ಲಿ ನೈಜಿರಿಯಾ ಪ್ರಜೆಗಳ ಮೇಲೆ ಹಲ್ಲೆ ಮಾಡಲಾಗಿತ್ತು.. ಇನ್ನು ಮೊನ್ನೆ ತಾನೆ ಬೆಂಗಳೂರಿನಲ್ಲಿ ಕೂಡ ಆಫ್ರಿಕನ್​ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ ಮಾಡಲಾಗಿತ್ತು.. ಆದ್ರೆ ಇದನ್ನ ಒಂದೇ ಬದಿಯಿಂದ ನೋಡೋಕೆ ಸಾಧ್ಯವಾಗೋದಿಲ್ಲ.. ಇದ್ರಲ್ಲಿ ಆಫ್ರಿಕನ್​ ರಾಷ್ಟ್ರಗಳ ಜವಾಬ್ದಾರಿ ಕೂಡ ಬಹಳ ದೊಡ್ಡದೇ ಇದೆ..

ಇದನ್ನೂ ಓದಿ: ಸಾವಿರಾರು ಕೋಟಿ ಆಸ್ತಿ ಇದ್ರೂ ಪುಟ್ಟ ಗೂಡಲ್ಲಿ ವಾಸ; ₹37 ಲಕ್ಷದ ಎಲಾನ್ ಮಸ್ಕ್ ಮನೆಗೆ ಜಗತ್ತೇ ಫಿದಾ

 

ಹೌದು ಸಮಸ್ಯೆ ಆಗ್ತಿರೋದು ಎಲ್ಲಿ? ಅಂತ ನೋಡೋದಾದ್ರೆ.. ಯಾರೇ ಆಗಲಿ ಇನ್ನೊಂದು ದೇಶಕ್ಕೆ ಬಂದಾಗ ಅಲ್ಲಿನ ಸಂಸ್ಕೃತಿ ಬಗ್ಗೆ ಪ್ರಾಥಮಿಕ ಮಾಹಿತಿ ಹೊಂದಿರಬೇಕು. ಅಲ್ಲಿನ ಸಮಾಜದ ಬಗ್ಗೆ ತಿಳುವಳಿಕೆ ಇರಬೇಕು.. ಅಷ್ಟೇ ಅಲ್ಲ ತಮ್ಮ ವೀಸಾ ಮುಗಿದ ತಕ್ಷಣ ತಮ್ಮ ತಮ್ಮ ದೇಶಕ್ಕೆ ಮರಳಬೇಕು.. ಒಂದು ವೇಳೆ ತಮ್ಮ ಸಹಪಾಠಿ ಯಾರೋ ವೀಸಾ ನಿಯಮ ಉಲ್ಲಂಘಿಸುತ್ತಿದ್ದಾರೆ ಅಂದ್ರೆ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.. ಆಯಾ ಆಫ್ರಿಕನ್​ ದೇಶಗಳು ಸಹ ತಮ್ಮ ವಿದ್ಯಾರ್ಥಿಗಳಿಗೆ ಈ ನಿಯಮಗಳ ಬಗ್ಗೆ ಕಿವಿ ಮಾತು ಹೇಳಬೇಕು.. ಜೊತೆಗೆ, ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮುಂತಾದ ವಿಚಾರ ಬಂದಾಗ.. ಯಾರೇ ಆಗಿರಲಿ ಆಯಾ ವಿದ್ಯಾರ್ಥಿಗಳ ಸಂಘಟನೆಗಳೇ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು.. ಯಾರೇ ತಪ್ಪು ಮಾಡಿದ್ರೂ ಅವರ ಬಗ್ಗೆ ಮುಚ್ಚಿಡಬಾರದು.. ಹೀಗಾದಾಗ ಸಹಜವಾಗಿ ಸ್ಥಳೀಯರಿಗೆ ಅವರ ಬಗ್ಗೆ ವಿಶ್ವಾಸ ಮೂಡುತ್ತೆ.. ಯಾರೂ ಸಂಶಯದಿಂದ ನೋಡೋವಂಥ ಪ್ರಮೇಯವೇ ಬರೋದಿಲ್ಲ..

blank

ಈ ನಿಟ್ಟಿನಲ್ಲಿ ಭಾರತದ ಸರ್ಕಾರದೊಂದಿಗೆ ಆಯಾ ಆಫ್ರಿಕನ್​ ರಾಷ್ಟ್ರಗಳು, ಅಲ್ಲಿನ ಸಮುದಾಯ ನಾಯಕರು, ವಿದ್ಯಾರ್ಥಿಗಳ ಕುಟುಂಬಸ್ಥರು ಎಲ್ಲರೂ ಕೈಜೋಡಿಸಬೇಕು.. ಆಗ ಖಂಡಿತ ತಪ್ಪು ಕಲ್ಪನೆ ದೂರಾಗಿ.. ಉತ್ತಮ ಶಿಕ್ಷಣ ಜೊತೆಗೆ ಉತ್ತಮ ಅನುಭವ ಕೂಡ ಪಡೆಯಲು ಸಾಧ್ಯವಾಗುತ್ತೆ. ಒಟ್ಟಿನಲ್ಲಿ ಯಾವುದೇ ದೇಶವಿರಲಿ.. ಯಾವುದೇ ಸಮುದಾಯವಿರಲಿ.. ಸ್ಥಳೀಯರೊಂದಿಗೆ ಹೊಂದಿಕೊಂಡಾ.. ಆ ದೇಶಗಳ ಕಾನೂನಿಗೆ ಬದ್ಧರಾಗಿದ್ದಾಗ ಮತ್ತು ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಅದೆಷ್ಟೋ ಸಮಸ್ಯೆಗಳು ಹುಟ್ಟೋದೇ ಇಲ್ಲ.. ಈ ವಿಷಯದಲ್ಲಿ ಆಫ್ರಿಕಾ ಕೂಡ ಹೊರತಲ್ಲ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ

Source: newsfirstlive.com Source link