ಬೆಳ್ಳಂಬೆಳಗ್ಗೆ ಮತ್ತೆ ಕಾಡಾನೆ ಪ್ರತ್ಯಕ್ಷ: ಸಲಗದ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕಮಗಳೂರು

ಬೆಳ್ಳಂಬೆಳಗ್ಗೆ ಮತ್ತೆ ಕಾಡಾನೆ ಪ್ರತ್ಯಕ್ಷ: ಸಲಗದ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕಮಗಳೂರು

ಚಿಕ್ಕಮಗಳೂರು: ಒಂಟಿ ಸಲಗವೊಂದು ನಗರದೊಳಗೆ ಬೆಳ್ಳಂಬೆಳಗ್ಗೆ ಎಂಟ್ರಿ ಕೊಟ್ಟಿದ್ದು ಹಾಯಾಗಿ ಮಲಗಿದ್ದ ಜನರಿಗೆ ಶಾಕ್​ ನೀಡಿದೆ. ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಮುಂಜಾನೆ ಓಡಾಟ ನಡೆಸಿದ ಕಾಡಾನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

blank

ಮೂಡಿಗೆರೆ ಪಟ್ಟಣದಲ್ಲಿ ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ಸುತ್ತಾಟ ನಡೆಸಿದ ಕಾಡಾನೆ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂಟಿ ಸಲಗ ಸಂಚಾರ ನಡೆಸಿದೆ ಎನ್ನಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿ ಸಲಗವನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ.

blank

ಇದನ್ನೂ ಓದಿ: ಚಿಕ್ಕಮಗಳೂರು: ಗ್ರಾಮದೊಳಗೆ ನುಗ್ಗಿದ ಕಾಡಾನೆ.. ಆತಂಕದಲ್ಲಿ ಗ್ರಾಮಸ್ಥರು

ಇನ್ನು ಸಲಗದ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಒಂಟಿ ಸಲಗ ಮೂಡಿಗೆರೆ ಪಟ್ಟಣದಲ್ಲಿ ಸಂಚಾರ ನಡೆಸಿ ಹಳಸೆ ಗ್ರಾಮದ ಕಡೆ ಮುಖ ಮಾಡಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link