ಸಿಎಂಗೆ ನೀಡಲಾಗುವ ಝೀರೋ ಟ್ರಾಫಿಕ್ ವ್ಯವಸ್ಥೆ ರದ್ದು ಮಾಡಿದ ಬೊಮ್ಮಾಯಿ

ಸಿಎಂಗೆ ನೀಡಲಾಗುವ ಝೀರೋ ಟ್ರಾಫಿಕ್ ವ್ಯವಸ್ಥೆ ರದ್ದು ಮಾಡಿದ ಬೊಮ್ಮಾಯಿ

ಬೆಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮಗೆ ಝೀರೋ ಟ್ರಾಫಿಕ್​​ ಬೇಡ ಎಂದು ರದ್ದು ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ತಮಗೂ ಕೂಡ ಝೀರೋ ಟ್ರಾಫಿಕ್ ಬೇಡ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ನಿರಾಕರಿಸಿರಿವ ಸಿಎಂ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸಂಚಾರದ ವೇಳೆ ಸಿಗ್ನಲ್ ಮಾತ್ರ ಫ್ರೀ ಮಾಡಿಕೊಡಲು ಸೂಚನೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಸಂಚಾರ ವೇಳೆಯೂ ಆ್ಯಂಬುಲೆನ್ಸ್​ಗೆ ಮೊದಲು ಅನುವು ಮಾಡಿಕೊಡಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಚಾರಿ ಕಂಟ್ರೋಲ್‌ನಲ್ಲಿ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಆದೇಶದ ಆಡಿಯೋ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ: ‘ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವು ಹಾಕಿ’ -ಮಾದರಿಯಾದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗೆ ಬ್ರೇಕ್.. ಕನ್ನಡ ಪುಸ್ತಕ ನೀಡಲು ಸಿಎಂ ಆದೇಶ

Source: newsfirstlive.com Source link