ರಾಜ್ಯದಲ್ಲಿ ಕೊರೊನಾ ನಿಯಮ ಮತ್ತಷ್ಟು ಟಫ್ -ಸಿಎಂ ಕೊಟ್ಟ ಸುಳಿವು ಏನು..?

ರಾಜ್ಯದಲ್ಲಿ ಕೊರೊನಾ ನಿಯಮ ಮತ್ತಷ್ಟು ಟಫ್ -ಸಿಎಂ ಕೊಟ್ಟ ಸುಳಿವು ಏನು..?

ಬೆಂಗಳೂರು: ನಾಳೆ 75ನೇ ವರ್ಷದ ಸ್ವತಂತ್ರ್ಯ ದಿನಾಚರಣೆ ಆಚರಣೆ ಮಾಡಲಿದ್ದೇವೆ. ಕಳೆದ 75 ವರ್ಷದಲ್ಲಿ ದೇಶ ಹಲವು ಸವಾಲುಗಳನ್ನು ಎದುರಿಸಿದ್ದು, ದೇಶ ಸವಾಲುಗಳಲ್ಲಿ ಕರ್ನಾಟಕ ಮಾದರಿಯಾಗಿದೆ. ಇವತ್ತು ಕೋವಿಡ್ ಸಂದರ್ಭ ಇದ್ದು, ಕೋವಿಡ್​ ನಿಯಮಗಳ ಅನ್ವಯ ಕಾರ್ಯಕ್ರಮ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆ ಮಾಡುವ ಚಿಂತನೆ ಇದೆ. ಸೋಂಕು ಬಂದ ಮೇಲೆ ಗುಣಪಡಿಸುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಆದ್ದರಿಂದ ಕೋವಿಡ್ ನಿಯಂತ್ರಣ ‌ಮಾಡಲು ಅನೇಕ ತಜ್ಞರು ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ, ಮೋದಿಯವರು, ಐಸಿಎಂಆರ್ ಸಲಹೆ ನೀಡಿದ್ದಾರೆ. ಇಂದು ಸಂಜೆ ಸಭೆ ನಡೆಯಲಿದ್ದು, ವೈಜ್ಞಾನಿಕವಾಗಿ ಚಿಂತನೆ ಮಾಡಿ ಚರ್ಚೆ ಮಾಡುತ್ತೇವೆ. ಜನರಿಗೆ ತೊಂದರೆ ಕೊಡೋದು ನಮ್ಮ ಉದ್ದೇಶ ಅಲ್ಲ.. ಆದರೆ ಕೋವಿಡ್ ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಸಂಜೆ ಸಭೆಯ ನಂತರ ಉಳಿದ ವಿಚಾರ ತಿಳಿಸುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 75ನೇ ಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಶಾ ಪರೇಡ್ ಗ್ರೌಂಡ್ ಸುತ್ತ ಕಟ್ಟೆಚ್ಚರ

Source: newsfirstlive.com Source link