ಕಾಬೂಲ್ ಸಮೀಪಿಸಿದ ತಾಲಿಬಾನಿಗಳು.. 34 ಪ್ರಾಂತ್ಯಗಳಲ್ಲಿ 18 ಸೀಜ್..!

ಕಾಬೂಲ್ ಸಮೀಪಿಸಿದ ತಾಲಿಬಾನಿಗಳು.. 34 ಪ್ರಾಂತ್ಯಗಳಲ್ಲಿ 18 ಸೀಜ್..!

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಳ ಅಟ್ಟಹಾಸ ಮುಂದುವರಿದಿದ್ದು, ಅಲ್ಲಿನ ಮೂರು ಮಹಾನಗರಗಳನ್ನ ತಮ್ಮ ಸುಪರ್ದಿಗೆ ತೆಗೆದುಕೊಂಡು ವಿಕೃತಿ ಮೆರೆಯುತ್ತಿದ್ದಾರೆ. ರಾಜಧಾನಿ ಕಾಬೂಲಿಗೂ ಉಗ್ರರ ಸೇನೆ ಕಾಲಿಡುವ ಆತಂಕ ಎದುರಾಗಿದೆ.

ಈ ಮೂಲಕ ಅಫ್ಘಾನಿಸ್ತಾನದಲ್ಲಿ ದಿನೇ ದಿನೆ ಒಂದೊಂದು ನಗರ ತಾಲಿಬಾನಿಗಳ ಕೈವಶ ಆಗುತ್ತಿದ್ದು, ಅಲ್ಲಿನ ಸೇನೆ ಸೋತು ಕೈಕಟ್ಟಿ ಕೂತಿದೆ. ಅಲ್ಲಿನ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಆಫ್ಫಾನ್​ನಲ್ಲಿರುವ 34 ಪ್ರಾಂತ್ಯಗಳಲ್ಲಿ 18 ಪ್ರಾಂತ್ಯಗಳನ್ನ ತಾಲಿಬಾನಿ ಸಂಘಟನೆ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಪ್ರತಿಶತ 65 ರಷ್ಟು ಅಫ್ಘಾನಿಸ್ತಾನವನ್ನ ಉಗ್ರರು ನಿಯಂತ್ರಿಸುತ್ತಿದ್ದಾರೆ.

ಇದನ್ನೂ ಓದಿ: ರಾಯಭಾರಿ ಮಗಳನ್ನೇ ಹೊತ್ತೊಯ್ದು ಚಿತ್ರಹಿಂಸೆ; ಆ ವಿಡಿಯೋದಿಂದ ಬಯಲಾಯ್ತು ಪಾಕ್​ ಕೃತ್ಯ

ಕ್ಷಿಪ್ರ ಕೃತ್ಯಕ್ಕೆ ನಲುಗಿದ ಆಫ್ಘಾನ್
ಝರಂಜ್ (ಆಗಸ್ಟ್ 6), ಶೆಬರ್‌ಘನ್ (ಆಗಸ್ಟ್ 7), ಸಾರ್-ಇ-ಪುಲ್ (ಆಗಸ್ಟ್ 8), ಕುಂಡುಜ್ (ಆಗಸ್ಟ್ 8), ತಾಲೂಕಾನ್ (ಆಗಸ್ಟ್ 8), ಐಬಾಕ್ (ಆಗಸ್ಟ್ 9), ಫರಾ (ಆಗಸ್ಟ್) 10 ಆಗಸ್ಟ್) 13), ಫೆರುಜ್ ಕೊಹ್ (ಆಗಸ್ಟ್ 13), ಪುಲ್-ಇ ಆಲಂ (ಆಗಸ್ಟ್ 13), ತೆರಕೋಟ್ (ಆಗಸ್ಟ್ 13), ಖಲಾತ್ (ಆಗಸ್ಟ್ 13) ರಂದು ತಾಲಿಬಾನಿ ಸಂಘಟನೆ ವಶಕ್ಕೆ ಪಡೆದುಕೊಂಡಿವೆ.

ಈ ಸಂಕಷ್ಟದ ಹೊತ್ತಲ್ಲಿ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ತಾಲಿಬಾನ್ ಅಟ್ಟಹಾಸ ನಿರಂತರವಾಗಿ ನಡೆಯುತ್ತಿರೋದ್ರಿಂದ ಇದು ಅಲ್ಲಿನ ಸರ್ಕಾರ ಹಾಗೂ ಸೇನೆ ಮೇಲೆ ಒತ್ತಡ ಹೆಚ್ಚಾಗಿದೆ. ಇದರ ಹೊರತಾಗಿಯೂ ತಾಲಿಬಾನ್​​ಗಳು ಮತ್ತು ಪಾಕಿಸ್ತಾನ ಘನಿ ರಾಜೀನಾಮೆಗೆ ಒತ್ತಾಯಿಸಿವೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕೊರೊನಾ ವ್ಯಾಕ್ಸಿನೇಷನ್​​ ಮೇಲೂ ಕೆಂಗಣ್ಣು ಬೀರಿದ ತಾಲಿಬಾನಿಗಳು

Source: newsfirstlive.com Source link