ಕೋಚ್ ಆಗಲು ರೆಡಿಯಾದ್ರಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್..?

ಕೋಚ್ ಆಗಲು ರೆಡಿಯಾದ್ರಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್..?

ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಹೈಬ್ರಿಡ್ ಲೆವೆಲ್ -2 ಕೋಚ್‌ಗಳ ಕೋರ್ಸ್ ಯಶಸ್ವಿಯಾಗಿ ಮುಗಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಗಸ್ಟ್ 09ರಿಂದ ಆಗಸ್ಟ್​ 12ರವರೆಗೆ ಅಂತರಾಷ್ಟ್ರೀಯ ಕ್ರಿಕೆಟರ್ಸ್​ಗೆ ಹೈಬ್ರಿಡ್ ಲೆವೆಲ್ -2 ಕೋಚಿಂಗ್​​​ ಕೋರ್ಸ್ ಆಯೋಜಿಸಲಾಗಿತ್ತು. 8 ದಿನಗಳ ಕಾಲ ನಡೆದ ಈ ಕೋರ್ಸ್​ನಲ್ಲಿ, ಮಾಜಿ ಆಟಗಾರರಾದ ಯೂಸುಫ್ ಪಠಾಣ್, ನಮನ್ ಓಜಾ, ಅಭಿಷೇಕ್ ನಾಯರ್, ಅಶೋಕ್ ದಿಂಡಾ, ವಿ.ಆರ್‌.ವಿ ಸಿಂಗ್ ಮತ್ತು ಫರ್ವೇಜ್ ರಸೂಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ವೇಳೆ ಮಾರ್ಗದರ್ಶನ ನೀಡಿದ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಹಾಗೂ ಇತರೆ ಅಧಿಕಾರಿಗಳಿಗೆ, ಇರ್ಫಾನ್ ಪಠಾಣ್ ಧನ್ಯವಾದ ಸಲ್ಲಿಸಿದ್ದಾರೆ. ನಾನು NCA BCCIಯ ಹಂತ 2 ಹೈಬ್ರಿಡ್ ಕೋರ್ಸ್ ಮುಗಿಸಿದ್ದೇನೆ ಎಂದು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಸಂತೋಷವಾಗಿದೆ. ಈ ಅದ್ಭುತ 8 ದಿನಗಳ ಉತ್ತಮ ಕಲಿಕೆಗಾಗಿ ರಾಹುಲ್ ಭಾಯಿ ಮತ್ತು ಅಧ್ಯಾಪಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಯುವ ಆಟಗಾರರು, ಭಾರತೀಯ ಕ್ರಿಕೆಟ್ ಅನೇಕ ರೀತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತಿದ್ದೀರಿ, ನಿಮಗೆ ವಿಶೇಷ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link