ಸಾರ್ವಜನಿಕರಿಗೆ ದೇವಾಲಯದ ಬಾಗಿಲಿನಲ್ಲೇ ಪೂಜೆ -ಆದೇಶ ಉಲ್ಲಂಘಿಸಿ ಡಿಕೆಎಸ್​​ ದಂಪತಿಗೆ ವಿಶೇಷ ದರ್ಶನ

ಸಾರ್ವಜನಿಕರಿಗೆ ದೇವಾಲಯದ ಬಾಗಿಲಿನಲ್ಲೇ ಪೂಜೆ -ಆದೇಶ ಉಲ್ಲಂಘಿಸಿ ಡಿಕೆಎಸ್​​ ದಂಪತಿಗೆ ವಿಶೇಷ ದರ್ಶನ

ಬೆಂಗಳೂರು: ಕೊರೊನಾ ಕಾರಣದಿಂದ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮದುರೆ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

blank

ಭಕ್ತರ ದರ್ಶನಕ್ಕೆ ಅವಕಾಶ ನೀಡದಿರುವ ಕಾರಣ ದೇವಾಲಯ ಮುಚ್ಚಿದ್ದರೂ ಸಾರ್ವಜನಿಕರು ಬಾಗಿಲಿಗೆ ಪೂಜೆ ಸಲ್ಲಿಸಿ ಹಿಂದಿರುಗಿದ್ದರು. ದೇವಾಲಯಗಳ ಬಳಿ ಜನ ಸೇರಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದೇಶ ಉಲ್ಲಂಘನೆ ಮಾಡಿ ನೂರಾರು ಸಂಖ್ಯೆಯಲ್ಲಿ ಜನರು ದೇವಾಲಯದ ಬಳಿ ದೇವರ ದರ್ಶನಕ್ಕೆ ಆಗಮಿಸಿದ್ದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಭೀತಿಯ ನಡುವೆಯೂ ಸುಮಾರು 200 ರಿಂದ 300ಕ್ಕೂ ಹೆಚ್ಚು ಮಂದಿ ಸಾಮಾಜಿಕ ಅಂತರ ಮಾಸ್ಕ್ ಇಲ್ಲದೆ ಕ್ಯೂ ನಲ್ಲಿ ನಿಂತು ದೇವರ ದರ್ಶನಕ್ಕೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂತು.

blank

blank

Source: newsfirstlive.com Source link