ಹುಲಿಗಳ ಮಧ್ಯೆ ರಣಭೀಕರ ಕಾದಾಟ; ಒಂದು ವ್ಯಾಘ್ರ ಸಾವು

ಹುಲಿಗಳ ಮಧ್ಯೆ ರಣಭೀಕರ ಕಾದಾಟ; ಒಂದು ವ್ಯಾಘ್ರ ಸಾವು

ಚಾಮರಾಜನಗರ: ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿದೆ.

ಹುಲಿಗಳ ಕಾದಾಟದಲ್ಲಿ ಅಂದಾಜು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಹುಲಿಗಳ ನಡುವಿನ ಸರಹದ್ದಿನ ಕಾದಾಟದಲ್ಲಿ ಸತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೃತ ಹುಲಿ ಮೈಮೇಲೆ ತೀವ್ರತರವಾದ ಗಾಯಗಳಾಗಿವೆ. ಕುಂದುಕೆರೆ ವಲಯದ ಎಲೆಚೆಟ್ಟಿ ಗಸ್ತಿನ ಆಲದಮರದಹಳ್ಳ ಬಳಿ‌ ಮೃತ ಹುಲಿ ಕಳೇಬರ ಪತ್ತೆ ಆಗಿದೆ.

 

ಇದನ್ನೂ ಓದಿ: 8 ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ; ದೇವಸ್ಥಾನ, ಪ್ರವಾಸಿ ಮಂದಿರಗಳು ಕ್ಲೋಸ್

ಇನ್ನು ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ವಾಸೀಂ ಮಿರ್ಜಾ, ಹುಲಿಯ ಜೊತೆಗಿನ ಕಾದಾಟದಿಂದ ಸಾವಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ.

blank

Source: newsfirstlive.com Source link