ಇನ್ಮುಂದೆ ಆಗಸ್ಟ್​​ 14 ರಂದು ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಣೆ- ಮೋದಿ ಘೋಷಣೆ

ಇನ್ಮುಂದೆ ಆಗಸ್ಟ್​​ 14 ರಂದು ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಣೆ- ಮೋದಿ ಘೋಷಣೆ

ನವದೆಹಲಿ: ಆಗಸ್ಟ್​ 14 ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನ (Partition Horrors Remembrance Day) ವನ್ನಾಗಿ ಆಚರಿಸಲಾಗುತ್ತದೆ ಅಂತಾ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ #PartitionHorrorsRemembranceDay.. ಅಂದಿನ ವಿಭಜನೆಯ ನೋವನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ತಿಳಿಗೇಡಿಗಳ ದ್ವೇಷ, ಹಿಂಸಾಚಾರದ ಪರಿಣಾಮವಾಗಿ ನಮ್ಮ ಲಕ್ಷಾಂತರ ಸಹೋದರ, ಸೋದರಿಯರು ಸ್ಥಳಾಂತರಗೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಅನೇಕರ ಜೀವಗಳು ಹೋದವು. ಅಂದಿನ ಹೋರಾಟದ ಕಹಿ ನೆನಪು ಮತ್ತು ನಮ್ಮವರ ತ್ಯಾಗಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತಿವರ್ಷವೂ ಆಗಸ್ಟ್​ 14ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಆಚರಿಸಲಾಗುವುದು ಎಂದಿದ್ದಾರೆ.

ಆಗಸ್ಟ್ 14, 1947 ರಂದು ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸಲಾಯಿತು. ಪಾಕಿಸ್ತಾನ ಆಗಸ್ಟ್ 14 ಅನ್ನು ತನ್ನ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಿದೆ.

Source: newsfirstlive.com Source link