ರಾಜ್ಯದ ಕ್ರೀಡಾ ಪಟುಗಳಿಗೆ & KSRP ಸಿಬ್ಬಂದಿಗೆ ಸಿಹಿಸುದ್ದಿ ಕೊಟ್ಟ ಪ್ರವೀಣ್​ ಸೂದ್​

ರಾಜ್ಯದ ಕ್ರೀಡಾ ಪಟುಗಳಿಗೆ & KSRP ಸಿಬ್ಬಂದಿಗೆ ಸಿಹಿಸುದ್ದಿ ಕೊಟ್ಟ ಪ್ರವೀಣ್​ ಸೂದ್​

ಬೆಂಗಳೂರು: ಪೊಲೀಸ್​ ಇಲಾಖೆ ಸೇರುವ ಆಕಾಂಕ್ಷೆಯಲ್ಲಿರುವ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಿಹಿ ಸುದ್ದಿ ನೀಡಿದ್ದಾರೆ. ಮುಂದಿನ ವಾರದಲ್ಲಿ ಸ್ಪೋಟ್ಸ್​ಕೋಟಾದಡಿಯಲ್ಲಿ ಪೊಲೀಸ್​ ನೇಮಕಾತಿಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಜೊತೆಗೆ ಮುಂದಿನ ವಾರದಿಂದ ಕೆಎಸ್​ಆರ್​ಪಿ ಸಿಬ್ಬಂದಿಗಳಿಗೂ ಕೂಡ ಸಿವಿಲ್​ ಸೇವೆಗಳಲ್ಲಿ ಅವಕಾಶ ನೀಡಲಾಗುವುದು ಎಂದಿದ್ದಾರೆ.

blank

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಕ್ಯತೆ & ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂಡಿಯಾ ಫ್ರೀ ಆಗಿ 75 ವರ್ಷಗಳೇ ಸಂದಿವೆ. ಆದರೆ ಈಗ ಫಿಟ್ ಇಂಡಿಯಾ ಕಡೆ ದಾಪುಗಾಲು ಹಾಕುತ್ತಿದ್ದೇವೆ. ಅದರ ಬೆನ್ನಲ್ಲೇ ಈ ವರ್ಷ ಅತೀ ಹೆಚ್ಚು ಮೆಡಲ್ ಒಲಂಪಿಕ್​ನಲ್ಲಿ ಬಂದಿದೆ. ಇದನ್ನ ನೋಡಿದ್ರೆ ಆದಷ್ಟು ಬೇಗ ಫಿಟ್ ಇಂಡಿಯಾ ಗುರಿ ಮುಟ್ಟುತ್ತೀವಿ ಅನಿಸುತ್ತದೆ ಎಂದರು.

blank

ಇನ್ನು ರಾಜ್ಯದಲ್ಲಿ ಆರಕ್ಷಕ ಇಲಾಖೆಗೆ ಕ್ರೀಡಾ ಕೋಟಾದಡಿ ಸೇರುವ ಆಕಾಂಕ್ಷಿಗಳ ಬಹುದಿನಗಳ ಕನಸನ್ನು ನನಸು ಮಾಡಿದ ಅವರು, ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಪೋಟ್ಸ್​ ಕೋಟಾದಡಿಯಲ್ಲಿ ಪೊಲೀಸ್​ ನೇಮಕಾತಿಗೆ ಮುಂದಿನ ವಾರದಿಂದಲೇ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಕೊರೊನಾ ವ್ಯಾಕ್ಸಿನೇಷನ್​​ ಮೇಲೂ ಕೆಂಗಣ್ಣು ಬೀರಿದ ತಾಲಿಬಾನಿಗಳು

ಜೊತೆಗೆ ಕೆಎಸ್​ಆರ್​ಪಿ ಯಲ್ಲಿರುವ ಸಿಬ್ಬಂದಿಗೆ ಅವರ ಸಾಮರ್ಥ್ಯಕ್ಕನುಗುಣವಾಗಿ ಸಿವಿಲ್​ ಸೇವೆಗಳಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ ಅವರು, ಕೆಎಸ್​ಆರ್​ಪಿ ಸಿಬ್ಬಂದಿ ಯಾವ ವಿಭಾಗದಲ್ಲಿ ಆಸಕ್ತಿ ಹೊಂದಿದ್ದಾರೊ ಅಲ್ಲಿಗೆ ವರ್ಗಾವಣೆ ಮಾಡಲಾಗುವುದು ಅಂತಾ ತಿಳಿಸಿದ್ದಾರೆ. ಈ ಕುರಿತು ಮುಂದಿನ ತಿಂಗಳಿಂದ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರವೀಣ್ ಸೂದ್ ಹೇಳಿದ್ದಾರೆ..

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಪೊಲೀಸರು ದೈಹಿಕವಾಗಿ ಫಿಟ್ ಇರಬೇಕು. ಈ ದೇಶಕ್ಕೆ ಫಿಟ್ ಇರಬೇಕು ಅನ್ನೋ ತತ್ವ ಇದೆ, ಇವತ್ತಿನ ಹೋರಾಟದ ಹಿಂದೆ ತತ್ವ, ಸಿದ್ಧಾಂತ ಇದೆ. ಈ ಹಾದಿಯಲ್ಲಿ ಸಿಂಹಾಲೋಕನ ಮಾಡಬೇಕಿದೆ ಎಂದರು.

blank

ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು ದೊಡ್ಡ ಸವಾಲಾಗಿ ಪರಿಣಮಿಸಿದೆ, ಇದನ್ನ ನಿರ್ಬಂಧಿಸಲು ಪೊಲೀಸ್​ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಪೊಲೀಸರ ಕೈಬಲ ಪಡಿಸುವ ಬದ್ಧತೆ ಸರ್ಕಾರಕ್ಕಿದ್ದು, ಇಲಾಖೆಯ ಹಿಂದೆ ನಿಂತು ಬಲ ತುಂಬುತ್ತೇನೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಙಾನೇಂದ್ರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

Source: newsfirstlive.com Source link