‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

ಕಲಬುರಗಿ: ಮಾಜಿ ಪ್ರಧಾನಿ ನೆಹರು ಅವರ ವಿರುದ್ಧ ಟೀಕೆ ಮಾಡಿ ಕಾಂಗ್ರೆಸ್​​ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಮಾಜಿ ಪ್ರಧಾನಿ ವಾಜಪೇಯಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ತಿರುಗೇಟು ನೀಡಿರುವ ಭರದಲ್ಲಿ ಪ್ರಿಯಾಂಕ್​ ಖರ್ಗೆ ಅವರು ವಾಜಪೇಯಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಕಲುಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್​ ಖರ್ಗೆ ಅವರು, ಸಿಗರೇಟ್​ ಸೇದುವುದು ಕಾನೂನು ಬಾಹಿರನಾ..? ವಾಜಪೇಯಿವರು ಹೆವಿ ಡ್ರಿಂಕರ್ ಅಂತೆ.. ಅವರಿಗೆ ಸಂಜೆಗೆ ಒತ್ತು ಎರಡು ಗ್ಲಾಸ್​ ವಿಸ್ಕಿ ಇರಲೇ ಬೇಕಿತ್ತಂತೆ.. 2007ರಲ್ಲಿ ಟೈಮ್ಸ್​​ನಲ್ಲಿ ಒಂದು ವರದಿ ಬಂದಿತ್ತು. ಯಾಕೆ ದೇಶ ಸರಿಯಾದ ವ್ಯವಸ್ಥೆಯಲ್ಲಿ ಮುನ್ನಡೆಯುತ್ತಲ್ಲ ಅಂತಾ.. ಆ ವರದಿಯಲ್ಲಿ ಅವರ ವೈಯುಕ್ತಿಕ ಜೀವನದ ಬಗ್ಗೆ ಚರ್ಚೆ ಮಾಡಿದ್ರು.. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಅಂತಾ ಹಾಕ್ತಿರಾ?

ಬಿಜೆಪಿಯವರು ಎಲ್ಲರು ಸಾಚಾಗಳೆ ಅಂತಾ ನಾವು ಭಾವಿಸಬೇಕು. ಸಿ.ಡಿ ಪ್ರಕರಣದಿಂದ ದೇಶದಲ್ಲಿ ಮರ್ಯಾದೆ ಹೋಗಿದೆ. ಸಿ.ಡಿ ಪ್ರಕರಣದಲ್ಲಿ ಇಡೀ ದೇಶದ ಎದುರು ಕರ್ನಾಟಕದ ಎಂಪಿಗಳು ತಲೆ ತಗ್ಗಿಸುವಂತೆ ಮಾಡಿದ್ರು. ಆಗಾದ್ರೆ ಇವರು ಎಂತಾ ಬಿಸಿನೆಸ್​ ಮಾಡ್ತಿದ್ರು..?

ನೆಹರೂ ಬಗ್ಗೆ ರವಿ ಮಾತಾಡೋದ್ರಿಂದ ಅವರ ಘನತೆ ಏನು ಕಡಿಮೆ ಆಗೋದಿಲ್ಲ. ನಾನು ವಾಜಪೇಯಿ ಅವರ ಬಗ್ಗೆ ಮಾತಾಡೋದ್ರಿಂದ ವಾಜಪೇಯಿ ಬಗ್ಗೆ ಏನು ಘನತೆ ಕಡಿಮೆ ಆಗಲ್ಲ. ಸಾವರ್ಕರ್ ಏನು ಕೊಡುಗೆ ಇದೆ ಅಂತಾ ಸಾವರ್ಕರ್ ಫ್ಲೈ ಓವರ್ ಹೆಸರು ಇಡ್ತಾರೆ. ಗೋಡ್ಸೆಯನ್ನು ನಂಬುತ್ತಾರೆ, ಗಾಂಧಿಯವರು ನಂಬೋದಿಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದ್ರೆ ಹಿಂಗೆ ಮಾತಾಡೋದು. ಇವರು ಅವಿವೇಕಿಗಳು, ಅವಿವೇಕಿತನದ ಪರಮಾವಧಿ ಇದು. ಕಳೆದ 7 ವರ್ಷದಲ್ಲಿ ಮೋದಿ ಸರ್ಕಾರ ಎಂತಹ ಸಾಧನೆ ಮಾಡಿದೆ ಅಂತಾ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಹೆಸರುಗಳನ್ನು ಬದಲಿಸಲು ಮುಂದಾಗಿದೆ. ಇವರ ಕೊಡುಗೆಗಳು ಏನೂ ಅಂತಾ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಎಸೆದರು.

Source: newsfirstlive.com Source link