ಪತ್ನಿಯ ಸಾವಿನ ಸುದ್ದಿ ಕೇಳುತ್ತಿದಂತೆ ಪತಿಯೂ ಸಾವು -ಸಾವಿನಲ್ಲೂ ಒಂದಾದ ವೃದ್ಧ ರೈತ ದಂಪತಿ

ಪತ್ನಿಯ ಸಾವಿನ ಸುದ್ದಿ ಕೇಳುತ್ತಿದಂತೆ ಪತಿಯೂ ಸಾವು -ಸಾವಿನಲ್ಲೂ ಒಂದಾದ ವೃದ್ಧ ರೈತ ದಂಪತಿ

ಹಾವೇರಿ: ಪತ್ನಿಯ ಸಾವಿನ ಸುದ್ದಿ ಕೇಳಿದ ಬಳಿಕ ಪತಿಯೂ ಸಾವನ್ನಪ್ಪಿರುವ ಮನಕಲಕುವ ಘಟನೆ ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಸಾವನ್ನಪ್ಪಿರುವ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ವೃದ್ಧೆ ಹೊನ್ನಮ್ಮ ಶೇಖರಗೌಡ ಹುಳ್ಯಾಳ (60) ಬೆಳಿಗ್ಗೆ ನಿಧನರಾಗಿದ್ದರು. ಮಡದಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಸಿದು ಬಿದ್ದ ಪತಿ ಶೇಖರಗೌಡ ಹುಳ್ಯಾಳ (65) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬದುಕಿನ ಪಯಣದಲಿ ಸುಖ ದುಃಖ ಸರಿಸಮವಾಗಿ ಹಂಚಿಕೊಂಡು ಜೀವನ ಮಾಡಿದ್ದ ದಂಪತಿ ಸುತ್ತಮುತ್ತಲಿನ ಗ್ರಾಮಗಳಿಗೂ ದೊಡ್ಡ ಮನೆತನದವರು ಎಂದೇ ಖ್ಯಾತಿ ಪಡೆದಿದ್ದರು. ಮೃತ ದಂಪತಿಯನ್ನ ಒಟ್ಟಿಗೆ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ವೃದ್ಧ ದಂಪತಿ ಸಾವಿಗೆ ಸ್ಥಳೀಯರು ಹಾಗೂ ಮಠಾಧೀಶರು, ಜನ ಪ್ರತಿನಿಧಿಗಳಿಂದ ಸಂತಾಪ ಸೂಚಿಸಿದ್ದಾರೆ. ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Source: newsfirstlive.com Source link