ಮತ್ತೆ ಪೂಜಾರ ವೈಫಲ್ಯ.. ಸೆಕೆಂಡ್​ ಇನ್ನಿಂಗ್ಸ್​​ನಲ್ಲೂ ಫೇಲ್ ಆದ್ರೆ ಟೆಸ್ಟ್​ ಸ್ಪೆಷಲಿಸ್ಟ್​ ಕರಿಯರ್​ಗೆ ಕುತ್ತು ಪಕ್ಕಾ

ಮತ್ತೆ ಪೂಜಾರ ವೈಫಲ್ಯ.. ಸೆಕೆಂಡ್​ ಇನ್ನಿಂಗ್ಸ್​​ನಲ್ಲೂ ಫೇಲ್ ಆದ್ರೆ ಟೆಸ್ಟ್​ ಸ್ಪೆಷಲಿಸ್ಟ್​ ಕರಿಯರ್​ಗೆ ಕುತ್ತು ಪಕ್ಕಾ

ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ಪರದಾಟ ಮುಂದುವರಿತಿದೆ. ಪಂದ್ಯದಿಂದ ಪಂದ್ಯಕ್ಕೆ ಇನ್ನಿಂಗ್ಸ್​ನಿಂದ ಇನ್ನಿಂಗ್ಸ್​​ಗೆ ಚೇತೇಶ್ವರ್​ರನ್ನ ಕೈಬಿಟ್ಟು, ಇತರರಿಗೆ ಚಾನ್ಸ್​ ನೀಡುವಂತ ಒತ್ತಾಯಗಳು ಕೇಳಿ ಬರ್ತಲೇ ಇವೆ. ಜೊತೆಗೆ ಪೂಜಾರ ವೈಫಲ್ಯ ನಮಗೆ ಅವಕಾಶ ನೀಡಬಹುದು ಎಂದು ಇಬ್ಬರು ಕಾದು ಕುಳಿತಿದ್ದಾರೆ ಕೂಡ.

blank

ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರರ ಫ್ಲಾಪ್ ಶೋ ಮುಂದುವರಿದಿದೆ. ಲಾರ್ಡ್ಸ್​ನಲ್ಲಿ ಕಮ್​ಬ್ಯಾಕ್ ಮಾಡ್ತಾರೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. 2019ರ ಆಸಿಸ್ ಸರಣಿ ಬಳಿಕ ಸತತ ವೈಫಲ್ಯ ಅನುಭವಿಸ್ತಿರುವ ಪೂಜಾರ, ಡು ಆರ್​​ ಡೈ ಸರಣಿಯಲ್ಲೂ ಫ್ಲಾಪ್ ಶೋ ನೀಡ್ತಿದ್ದಾರೆ. ನ್ಯಾಟಿಂಗ್​ಹ್ಯಾಮ್ ಟೆಸ್ಟ್​​ನಲ್ಲಿ ಕೇವಲ 4 ಹಾಗೂ 12 ರನ್ ಗಳಿಸಿದ್ದ ಪೂಜಾರ, ಕ್ರಿಕೆಟ್​ ಕಾಶಿಯಲ್ಲಿ ನಡೆದ 2ನೇ ಟೆಸ್ಟ್​​ನಲ್ಲಿ 9 ರನ್​​ಗಳಿಸಿ ಔಟ್​ ಆಗಿದ್ದಾರೆ. ಮುಂದುವರೆದ ಈ ಕಳಪೆ ಪ್ರದರ್ಶನವೇ ಟೆಸ್ಟ್​ ಸ್ಪೆಷಲಿಸ್ಟ್​ ಕರಿಯರ್​ಗೆ ಕುತ್ತು ತಂದಿದೆ.

2ನೇ ಇನ್ನಿಂಗ್ಸ್​ನಲ್ಲಿ ಕಮಾಲ್ ಮಾಡದಿದ್ದರೆ ಬೆಂಚ್ ಗ್ಯಾರಂಟಿ..!
ಕಳೆದ್ಮೂರು ವರ್ಷಗಳಿಂದ ಕಳಪೆ ಫಾರ್ಮ್​ಗೆ ಸಿಲುಕಿರುವ ಪೂಜಾರ, ಇಂಗ್ಲೆಂಡ್​ನಲ್ಲೂ ವೈಫಲ್ಯ ಅನುಭವಿಸ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ವಿಫಲರಾಗ್ತಿರುವ ಟೆಸ್ಟ್​ ಸ್ಪೆಷಲಿಸ್ಟ್​ಗೆ ಕ್ರಿಕೆಟ್​ ಕಾಶಿಯ ಸೆಕೆಂಡ್ ಇನ್ನಿಂಗ್ಸ್​ ಮಾಡು ಇಲ್ಲವೆ ಮಡಿ ಇನ್ನಿಂಗ್ಸ್​​ ಆಗಿದೆ. ಹೀಗಾಗಿ ಈ ಅಗ್ನಿಪರೀಕ್ಷೆಯಲ್ಲಿ ಪೂಜಾರ ಕಮಾಲ್ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

blank

ಟೆಸ್ಟ್​ ಸ್ಪೆಷಲಿಸ್ಟ್​ ಸ್ಥಾನ ಕಸಿಯಲು ಕಾಯ್ತಿದ್ದಾರೆ ಮೂವರು..!

ಈಗಾಗಲೇ ಬೆಂಚ್ ಬಿಸಿ ಮಾಡ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್, ಮತ್ತೊರ್ವ ಟೆಸ್ಟ್ ಸ್ಪೆಷ್ಟಲಿಸ್ಟ್​ ವಿಹಾರಿ ಚಾನ್ಸ್​ಗಾಗಿ ಪರಿತಪಿಸ್ತಿದ್ದಾರೆ. ಒಂದೇ ಒಂದು ಅವಕಾಶ ಸಿಕ್ಕಿದ್ರೆ, ಸ್ಥಾನ ಭದ್ರಪಡಿಸಿಕೊಳ್ಳುವ ಲೆಕ್ಕಚಾರ ಇವರದ್ದಾಗಿದೆ. ಅಷ್ಟೇ ಅಲ್ಲ..! ಟೆಸ್ಟ್ ಕ್ರಿಕೆಟ್​ನಲ್ಲಿ ಆಡಿದ ಅನುಭವವೂ ಇವರ ಬೆನ್ನಿಗಿದೆ, ಇಂಥಹ ವೇಳೆ ಪೂಜಾರ ಫ್ಲಾಪ್ ಶೋ ಮುಂದುವರಿದರೆ, ಮಯಾಂಕ್ ಅಗರ್ವಾಲ್​ಗೆ ಎದುರಾಗುವ ಪರಿಸ್ಥಿತಿ ಪೂಜಾರಗೆ ಎದುರಾದರೂ ಅಚ್ಚರಿ ಇಲ್ಲ..!

blank

ಮಯಾಂಕ್, ವಿಹಾರಿ ಮಾತ್ರವೇ ಪೂಜಾರ ಸ್ಥಾನದ ಆಕಾಂಕ್ಷಿಗಳಲ್ಲ..! ಸದ್ಯ ಕ್ವಾರಂಟೀನ್​ನಲ್ಲಿರೋ, ಮುಂದಿನ ಪಂದ್ಯದ ವೇಳೆ ತಂಡ ಕೂಡಿಕೊಳ್ಳಲಿರೋ ಮುಂಬೈಕರ್ ಸೂರ್ಯಕುಮಾರ್ ಯಾದವ್ ಕೂಡ ರೇಸ್​​ನಲ್ಲಿದ್ದಾರೆ. ಸಿಕ್ಕ ಅವಕಾಶಗಳಲ್ಲಿ ಸಾಮರ್ಥ್ಯ ಸಾಬೀತು ಪಡಿಸಿರುವ ಸೂರ್ಯ ಭರವಸೆಯನ್ನೂ ಮೂಡಿಸಿದ್ದಾರೆ. ಹೀಗಾಗಿ ಪೂಜಾರ ಫ್ಲಾಪ್ ಶೋ ಸೆಕೆಂಡ್​​ ಇನ್ನಿಂಗ್ಸ್​ನಲ್ಲೂ ಮುಂದುವರಿದರೆ, ಮುಂದಿನ ಮೂರನೇ ಟೆಸ್ಟ್​ಗೆ ಈ ಮೂವರಲ್ಲಿ ಒಬ್ಬರು ಪೂಜಾರ ಸ್ಥಾನ ಕಸಿದುಕೊಳ್ಳೊದು ಪಕ್ಕಾ..!

blank

Source: newsfirstlive.com Source link