ಮೇಕೆದಾಟು ವಿಚಾರದಲ್ಲಿ ಬೊಮ್ಮಾಯಿಗೆ ಅಗ್ರೆಸಿವ್ ಇಮೇಜ್ -ಬಿಜೆಪಿ ಆಡ್ತಿದ್ಯಾ ಡಬಲ್ ಗೇಮ್?

ಮೇಕೆದಾಟು ವಿಚಾರದಲ್ಲಿ ಬೊಮ್ಮಾಯಿಗೆ ಅಗ್ರೆಸಿವ್ ಇಮೇಜ್ -ಬಿಜೆಪಿ ಆಡ್ತಿದ್ಯಾ ಡಬಲ್ ಗೇಮ್?

ಬೆಂಗಳೂರು: ಮೇಕೆದಾಟು ಯೋಜನೆಯನ್ನ ಮಾಡಿಯೇ ತೀರುತ್ತೇವೆ ಅಂತಾ ಸಿಎಂ ಬೊಮ್ಮಾಯಿ ಅವರು ಸಂಕಲ್ಪ ಮಾಡಿದ್ದಾರೆ. ಇತ್ತ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಶಪಥ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ ‘ಡಬಲ್ ಗೇಮ್’ ಆಡುತ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.

ಬೊಮ್ಮಾಯಿ ಹೇಳಿದ್ದೇನು..?
ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆ ವಿರುದ್ಧ ಎಷ್ಟೇ ಪ್ರತಿಭಟನೆ ನಡೆಯಲಿ. ಅದಕ್ಕೆ ನಾನು ಕೇರ್ ಮಾಡಲ್ಲ. ಅಣ್ಣಾಮಲೈ ಉಪವಾಸದ ಪ್ರತಿಭಟನೆಗೂ ಐ ಡೋಂಟ್ ಕೇರ್. ಅವನನ್ನು ನೀವು ದೊಡ್ಡ ಮನುಷ್ಯ ಮಾಡಬೇಡಿ, ಮೇಕೆದಾಟು ಯೋಜನೆ ಜಾರಿ ಮಾಡಿಯೇ ಮಾಡ್ತೀವಿ ಎಂದಿದ್ದರು. ಬೊಮ್ಮಾಯಿ ಅವರು ಈ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ತಮಿಳುನಾಡಿನ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯದ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಸಿ.ಟಿ.ರವಿ ಅವರು ಬೊಮ್ಮಾಯಿ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿಕೆ ನೀಡಿ ಅಚ್ಚರಿಗೆ ಕಾರಣವಾಗಿದ್ದಾರೆ.

blank

ಸಿಟಿ ರವಿ ಹೇಳಿದ್ದೇನು..?
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನೀವು ತಮಿಳುನಾಡು ಪರವೋ.. ಕರ್ನಾಟಕದ ಪರವೋ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಭಾರತದ ಪರ ಎಂದಿದ್ದಾರೆ. ನೀವು ನನ್ನ ಹೇಳಿಕೆಯನ್ನ ಹೇಗೆ ವಿಶ್ಲೇಷಿಸುತ್ತೀರಿ ಅನ್ನೋದು ಮುಖ್ಯವಲ್ಲ. ನಾನು ಹೇಳ್ತೇನೆ ಅನ್ನೋದು ಮುಖ್ಯ. ಕಾವೇರಿ ನೀರಿನ ಹಂಚಿಕೆ ಮಾಡಿಯಾಗಿದೆ. ಹಲವು ತೀರ್ಪುಗಳು ಬಂದಿವೆ. ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ಮಾಡಿಕೊಂಡ್ರೆ ಯಾವುದೇ ಅಡ್ಡಿಯಿಲ್ಲ. ತೀರ್ಪಿನಂತೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದ್ದರೆ ಯಾವುದೇ ಅಡ್ಡಿಬರೋದಿಲ್ಲ.. ನೀರು ಎಲ್ಲರಿಗೂ ಅತ್ಯವಶ್ಯಕ.. ಕುಡಿಯೋ ನೀರಿಗೆ ಗಡಿಯಿಲ್ಲ.. ನೀರಿಗೆ ರಾಜಕೀಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

ಅಲ್ಲೊಂದು ಇಲ್ಲೊಂದು ನಿಲುವು ಯಾಕೆ..?
ಈ ಮೂಲಕ ಬಿಜೆಪಿ ಒಂದೇ ವಿಚಾರವನ್ನ ಇಟ್ಟುಕೊಂಡು ಬಿಜೆಪಿ ಡಬಲ್ ಗೇಮ್ ಆಡುತ್ತ, ಎರಡೆರಡು ಲಾಭ ಪಡೆಯಲು ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಕರ್ನಾಟಕದಲ್ಲಿ ಒಂದು ಸ್ಟ್ಯಾಂಡ್ ಆದರೆ ಅತ್ತ ತಮಿಳ್ನಾಡಿನಲ್ಲಿ ಬಿಜೆಪಿ ಇನ್ನೊಂದು ಸ್ಟ್ಯಾಂಡ್ ಹೊಂದಿದೆ. ಭಾರತೀಯ ಜನತಾ ಪಕ್ಷದಲ್ಲಿ ಅಲ್ಲೊಂದು, ಇಲ್ಲೊಂದು ನಿಲುವು ಏಕೆ? ಇದರ ಹಿಂದೆ ಡಬ್ಬಲ್ ಬೆನಿಫಿಟ್ ಪಡೆಯೋ ಪ್ಲಾನ್ ನಡೀತಿದ್ಯಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ನಮ್ಮ ನೀರು, ನಮ್ಮ ಹಕ್ಕು, ಮೇಕೆದಾಟು ಮಾಡೇ ಮಾಡ್ತೀವಿ -ಸಿಎಂ ಬೊಮ್ಮಾಯಿ ಸಂಕಲ್ಪ

ಬೊಮ್ಮಾಯಿಗೆ ಅಗ್ರೆಸಿವ್ ಇಮೇಜ್
ಅಂದರೆ ಮೇಕೆದಾಟು ಯೋಜನೆ ವಿವಾದವಾದಷ್ಟೂ ಬಿಜೆಪಿಗೆ ಅಲ್ಲೂ ಲಾಭ ಇಲ್ಲೂ ಲಾಭ ಇದೆ. ಯೋಜನೆ ವಿಚಾರವಾಗಿ ವಿರೋಧಿಗಳು ಸಿಡಿದೆದ್ದಷ್ಟೂ ಬಿಜೆಪಿಗೆ ರಾಜಕೀಯ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರ ಬಿಜೆಪಿಯಲ್ಲಿದೆ ಎನ್ನಲಾಗ್ತಿದೆ. ಈ ಯೋಜನೆಯನ್ನ ಮುಂದಿಟ್ಟುಕೊಂಡೇ ಅಗ್ರೆಸ್ಸಿವ್ ಇಮೇಜ್ ಬೆಳೆಸಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರಟಿದ್ದಾರೆ ಎನ್ನಲಾಗಿದೆ.

blank

ಜೊತೆಗೆ ಈ ವಿವಾದದ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿದಾಗಲೆಲ್ಲ ಯೋಜನೆ ಪರ ಗಟ್ಟಿಯಾದ ನಿಲುವು ಪ್ರದರ್ಶನ ಪಡೆಯುವುದು. ಬಿಜೆಪಿ ಪಾಲಿಗೆ ಕಳೆದುಕೊಳ್ಳಲು ಏನೂ ಇಲ್ಲ, ಹಳೇ ಮೈಸೂರು ಭಾಗದಲ್ಲಿ ಈ ಯೋಜನೆಯನ್ನೇ ಮುಂದಿಟ್ಟುಕೊಂಡು ಜನರ ಮನಸಲ್ಲಿ ನೆಲೆಯೂರಲು ಪ್ರಯತ್ನ ಮಾಡುವುದು ರಾಜ್ಯ ಬಿಜೆಪಿಯ ಪ್ಲಾನ್ ಅಂತಾ ಹೇಳಲಾಗಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಿ ಇಲ್ಲ; ಅಣ್ಣಾಮಲೈಗೆ ತಪರಾಕಿ ಹಾಕಿದ ಸಿಎಂ

ಅತ್ತ ತಮಿಳುನಾಡಿನಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಈ ಯೋಜನೆ ವಿರೋಧಿಸುವುದೇ ದೊಡ್ಡ ಅಸ್ತ್ರವಾಗಿದೆ. ಬಿಜೆಪಿ ಸಂಘಟನೆ ಬಹಳ ದುರ್ಬಲವಾಗಿರೋ ತಮಿಳುನಾಡಿನಲ್ಲಿ ಸಂಘಟನೆಯತ್ತ ಜನರ ಸೆಳೆಯಲು ಇದೇ ಅಜೆಂಡಾ ಆಗಿದೆ. ಈ ಮೂಲಕ ಮೇಕೆದಾಟು ಮೂಲಕವೇ ಬಿಜೆಪಿ ತಮಿಳುನಾಡು-ಕರ್ನಾಟಕ ಎರಡೂ ರಾಜ್ಯದಲ್ಲೂ ಬಿಜೆಪಿ ಸಂಘಟನೆಯ ಅಜೆಂಡಾ ಹಾರಿಸುತ್ತಿದೆ ಅನ್ನೋ ಚರ್ಚೆ ಶುರುವಾಗಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link