ಶಾಲೆ ಆರಂಭಿಸಲು ಖಾಸಗಿ ಶಾಲಾ ಒಕ್ಕೂಟ ರೆಡಿ.. ಮಾರ್ಗಸೂಚಿ ಔಟ್

ಶಾಲೆ ಆರಂಭಿಸಲು ಖಾಸಗಿ ಶಾಲಾ ಒಕ್ಕೂಟ ರೆಡಿ.. ಮಾರ್ಗಸೂಚಿ ಔಟ್

ಬೆಂಗಳೂರು: ಕೊರೊನಾ ‌ಮೂರನೇ ಅಲೆ ಅತಂಕದ ನಡುವೆಯೇ ಶಾಲೆ ಓಪನ್ ಮಾಡಲು ಖಾಸಗಿ ಶಾಲಾ ಒಕ್ಕೂಟ ನಿರ್ಧಾರ ಮಾಡಿದೆ. ಭೌತಿಕ ತರಗತಿ ಪ್ರಾರಂಭಕ್ಕೆ ರುಪ್ಸಾ (ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ) ‌ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆಗಸ್ಟ್ ‌23 ರಿಂದ ‌ಭೌತಿಕ ತರಗತಿಗಳು ಓಪನ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಕುರಿತು ಶಿಕ್ಷಣ ಇಲಾಖೆಗೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆ ಮಾರ್ಗಸೂಚಿ ಕುರಿತು ಸಲಹೆ ಪಡೆದಿದೆ.

ಇದನ್ನೂ ಓದಿ: ರಾಜ್ಯದ ಕ್ರೀಡಾ ಪಟುಗಳಿಗೆ & KSRP ಸಿಬ್ಬಂದಿಗೆ ಸಿಹಿಸುದ್ದಿ ಕೊಟ್ಟ ಪ್ರವೀಣ್​ ಸೂದ್​

9.10 .11 ಹಾಗೂ ‌12 ನೇ ತರಗತಿಗಳಿಗೆ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿದ್ದು, ರುಪ್ಸಾ ಒಕ್ಕೂಟದ ಅಡಿಯಲ್ಲಿ ಬರುವ ಸುಮಾರು 6000 ಸಾವಿರಕ್ಕೂ ಹೆಚ್ಚು ಶಾಲೆಗಳಿಗೆ SOP ಅಡಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ರುಪ್ಸಾ ಮಾರ್ಗಸೂಚಿ

 1. ಪ್ರತಿ ಕೊಠಡಿಯಲ್ಲಿ 10 ರಿಂದ 15 ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದು
 2. ಒಂದು ತರಗತಿಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇದ್ದಲ್ಲಿ 50:50 ಅನುಪಾತದಲ್ಲಿ ದಿನ ಬಿಟ್ಟು ದಿನ ತರಗತಿ ನಡೆಸುವುದು
 3. ಪಾಳಿ ಪದ್ಧತಿಯಲ್ಲಿ ಭೌತಿಕ ತರಗತಿ
 4. ಮಕ್ಕಳ ಸಂಪರ್ಕಕ್ಕೆ ಬರುವ ಪೋಷಕರು ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಿಕೊಂಡಿರುವ ಕುರಿತು ಖಚಿತ ಪಡಿಸಿಕೊಳ್ಳಬೇಕು
 5. ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ವ್ಯಾಕ್ಸಿನ್ ಕಡ್ಡಾಯ
 6. ಮಕ್ಕಳಿಗೆ ‌ಮಾಸ್ಕ್ ಕಡ್ಡಾಯವಾಗಿ ಧರಿಸಿರುವಂತೆ ನೋಡಿಕೊಳ್ಳಬೇಕು
 7. ಶಾಲೆಯ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು
 8. ತರಗತಿ ಮುಗಿದ ತಕ್ಷಣ ಕೊಠಡಿಗೆ ಸ್ಯಾನಿಟೈಸ್ ಮಾಡಿಸಬೇಕು
 9. ಕನಿಷ್ಠ ವಾರಕ್ಕೊಮ್ಮೆ ಮಕ್ಕಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು
 10. ಶಾಲೆಯ ಮಕ್ಕಳಿಗೆ ಅಥವಾ ಸಿಬ್ಬಂದಿಗೆ ಕೋವಿಡ್ ಇರುವ ಲಕ್ಷಣ ಕಂಡುಬಂದಲ್ಲಿ ತಕ್ಷಣ ಶಾಲೆಗೆ ರಜೆ ನೀಡಬೇಕು
 11. ಪ್ರತಿದಿನ ಶಾಲೆ ಪ್ರಾರಂಭವಾಗುವ ಮುನ್ನ ಕೋವಿಡ್ ಕುರಿತು ‌ಮಕ್ಕಳಿಗೆ ಜಾಗೃತಿ ಮೂಡಿಸಬೇಕು

Source: newsfirstlive.com Source link