ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ‘ಸ್ಪೆಷಲ್ ಫುಡ್’..!

ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ‘ಸ್ಪೆಷಲ್ ಫುಡ್’..!

ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿಯ 2ನೇ ಪಂದ್ಯ ಭರದಿಂದ ಸಾಗಿದೆ. ಕ್ರಿಕೆಟ್ ಕಾಶಿಯಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲೆರೆಡು ದಿನದಾಟ ಮುಕ್ತಾಯಗೊಂಡಿದ್ದು, ಮೂರನೇ ದಿನದಾಟದ ಆರಂಭಕ್ಕೆ ಕೆಲ ಗಂಟೆಗಳು ಮಾತ್ರವೇ ಬಾಕಿಯಿದೆ. ಮೂರನೇ ದಿನದಾಟ ಆರಂಭಕ್ಕೂ ಮುನ್ನ ಲಾರ್ಡ್ಸ್​ ಕ್ರಿಕೆಟ್​​​ ಗ್ರೌಂಡ್ ತನ್ನ ಟ್ವಿಟರ್​ನಲ್ಲಿ, ಆಟಗಾರರ ಊಟದ ಮೆನು ಪ್ರಕಟಿಸಿದೆ. ವಿವಿಧ ರೀತಿಯ ಆಯ್ಕೆ ಆಟಗಾರರಿಗೆ ನೀಡಲಾಗಿದೆ.

ಊಟದ ಮೆನುವನ್ನು ಇಂಗ್ಲಿಷ್ ಮತ್ತು ಅರೆ ಭಾರತೀಯ ಖಾದ್ಯಗಳಿವೆ. ಜೇನು ತುಪ್ಪ ಮತ್ತು ಯುಕೆನ ಚಿಕನ್ ಖಾದ್ಯ, ಕ್ಯಾರೆಟ್ ಪೂರಿ, ಪೆಸ್ಟೋ ಬಟರ್​​ಬಿನ್ಸ್, ಬ್ರೊಕೊಲಿ, ಅವರೆ ಕಾಳು, ಟೋಫು ಮತ್ತು ವೆಜಿಟೇಬಲ್ ಸ್ಟಿರ್ ಫ್ರೈ, ವೆಜಿಟೇಬಲ್ ಆ್ಯಂಡ್ ಫ್ರೂಟ್ಸ್​​ ಸಾಲಡ್​ಗನ್ನ ನೀಡಲಾಗ್ತಿದೆ. ಮಾಂಸಾಹಾರಿ ಮೆನುವಿನಲ್ಲಿ ಸೀಗಡಿ ಮೀನು, ಕುರಿ ಮಾಂಸ, ಚಿಕನ್ ಸೇರಿದಂತೆ ಹಲವು ವಿಶೇಷ ಖಾದ್ಯಗಳು ಈ ಮೆನುವಿನಲ್ಲಿವೆ.

 

Source: newsfirstlive.com Source link