ಕಾಂತಿಯುತ ತ್ವಚೆಗಾಗಿ ಸಾಸಿವೆ ಫೇಸ್ ಪ್ಯಾಕ್ ಒಮ್ಮೆ ಟ್ರೈ ಮಾಡಿ

ಹಿಳೆಯರು ಸೌಂದರ್ಯಪ್ರಿಯರು ಟ್ಯಾನಿಂಗ್, ಸನ್ ಬರ್ನ್, ಒಣ ಚರ್ಮದಿಂದ ಮುಕ್ತಿ ಪಡೆದು ಮೃದು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಜನರು ವಿವಿಧ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್‍ಗಳನ್ನು ತಯಾರಿಸಿ ಮುಖಕ್ಕೆ ಹಚ್ಚಿ ತ್ವಚೆಯನ್ನು ಹೊಳೆಯುವಂತೆ ಮಾಡಬಹುದಾಗಿದೆ.

* ಎರಡು ಚಮಚ ಸಾಸಿವೆಯನ್ನು ಮೊದಲಿಗೆ ಪುಡಿ ಮಾಡಿಕೊಳ್ಳಿ. ನಂತರ ಪುಡಿಗೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಹಾಕಿ ನಂತರ ಎರಡನ್ನು ಹೊಂದಿಕೊಳ್ಳುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

* ಸಾಸಿವೆ ಪೌಡರ್ ಗೆ 1  ಚಮಚ ಮೊಸರನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ ಹಾಗೂ ಒಣಗಲು ಬಿಡಿ. ಒಣಗಿದ ನಂತರ ಸ್ಕ್ರಬ್ ಮಾಡಿ, 5 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದು ಟ್ಯಾನಾದ ಚರ್ಮವನ್ನು ಹಾಗೂ ಮೃತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

blank

* ಸಾಸಿವೆ ಪುಡಿಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಕೆಲವು ಚಮಚ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ನೀರಿನಿಂದ ತೊಳಿಯಿರಿ. ಇದು ಚರ್ಮದ ಶುಷ್ಕತೆಯನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ. ಹಾಗೂ ಈ ಪ್ಯಾಕ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚುಸುತ್ತದೆ.

blank

* ಎರಡು ಚಮಚ ಸಾಸಿವೆ ಬೀಜಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದರಲ್ಲಿ ಎರಡು ಚಮಚ ಕಡಳೆ ಹಿಟ್ಟು ಬೆರೆಸಿ ಎರಡು ಚಮಚ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡಿ. ಇದರ ನಂತರ, ನೀರಿನಿಂದ ಮುಖವನ್ನು ತೊಳೆಯಬೇಕು.

blank

ಮನೆಯಲ್ಲಿ ಇರುವ ಸಾಸಿವೆ ಬೀಜಗಳನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಸಾಕು. ಇದು ಟ್ಯಾನಿಂಗ್ ಹಾಗೂ ಶುಷ್ಕತೆಯಂತಹ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ನಿಮಗೆ ಬೇಕಾದ ಹೊಳಪನ್ನು ನೀಡುತ್ತದೆ.

Source: publictv.in Source link