‘ಯೋಗ್ಯತೆಗಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತಿಯಾ’ -ಗುಬ್ಬಿ ಶಾಸಕ, ಬಿಜೆಪಿ ಸಂಸದರ ಮಧ್ಯೆ ವಾಕ್​ ಸಮರ

‘ಯೋಗ್ಯತೆಗಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತಿಯಾ’ -ಗುಬ್ಬಿ ಶಾಸಕ, ಬಿಜೆಪಿ ಸಂಸದರ ಮಧ್ಯೆ ವಾಕ್​ ಸಮರ

ತುಮಕೂರು: ಜಿಲ್ಲೆಯ ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಸಭೆಯಲ್ಲಿ ಸಭೆಯಲ್ಲಿ ಗುಬ್ಬಿ ಜೆಡಿಎಸ್​ ಶಾಸಕ ಶ್ರೀನಿವಾಸ್​ ಹಾಗೂ ತುಮಕೂರು ಸಂಸದ ಜಿ.ಎಸ್​​.ಬಸವರಾಜು ಪರಸ್ಪರ ಏಕವಚನದಲ್ಲೇ ಜಟಾಪಟಿ ನಡೆಸಿರುವ ಘಟನೆ ನಡೆದಿದೆ.

blank

ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪದ ಸಿ‌. ನಂದಿಹಳ್ಳಿ ಗ್ರಾಮದ ಬೆಸ್ಕಾಂ ವಿದ್ಯುತ್ ಸ್ಟೇಷನ್​​ನಲ್ಲಿ ನಡೆದ ಸಭೆಯಲ್ಲಿ ಇಬ್ಬರು ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಅಧಿಕಾರಿಗಳು ಸೇರಿದಂತೆ ಆ ಭಾಗದ ರೈತರು, ಸಾರ್ವಜನಿಕರು ಹಾಜರಿದ್ದರು. ಈ ವೇಳೆ ಜಿಲ್ಲೆಯ ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 550 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಂಸದ ಜಿ.ಎಸ್.ಬಸವರಾಜು ಸಭೆಯಲ್ಲಿ ಮಾಹಿತಿ ನೀಡಿದ್ದರು. ಸಂಸದರ ಹೇಳಿಕೆ ಕೇಳುತ್ತಿದಂತೆ ಗರಂ ಆದ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ರೈತರಿಗೆ ಸುಳ್ಳು ಯಾಕ್ ಹೇಳ್ತಿಯಾ? ನಿಜ ಹೇಳಿ ಅಂತಾ ಹೇಳಿದ್ರು..

blank

ಶಾಸಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು ನಾನು ಜೀವನದಲ್ಲೇ ಸುಳ್ಳು ಹೇಳಿಲ್ಲ. ಇವನ ಮಾತು ನಂಬಬೇಡಿ ಎಂದು ಸಭಿಕರಿಗೆ ಹೇಳಿದ್ರು. ಇದರಿಂದ ಮತ್ತಷ್ಟು ಕೆರಳಿದ ಶಾಸಕರು, ನಿನ್ನ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯ. ವಯಸ್ಸಾಗಿದೆ ಈಗ್ಲಾದ್ರೂ ಸುಳ್ಳು ಹೇಳೋದುನ್ನ ನಿಲ್ಲಿಸು ಎಂದು ಸಂಸದ ಜಿ.ಎಸ್ ಬಸವರಾಜುಗೆ ಜನರ ಮುಂದೆಯೇ ಲೆಫ್ಟ್ ರೈಟ್ ತಗೊಂಡರು.

blank

ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಂಸದರು, ಇಲ್ಲದ ವಿಚಾರವನ್ನು ಮಾತಾಡ್ಬೇಡ ನೀನು. ನೀನು ಆಯೋಗ್ಯ ನನ್ಮಗ. 550 ಕೋಟಿ ರೂಪಾಯಿ ಅನುದಾನ ತಂದಿದ್ದೀನಿ ಎಂದರು. ಇದಕ್ಕೆ ತಿರುಗೇಟು ಕೊಟ್ಟ ಶಾಸಕರು, 550 ಕೋಟಿ ರೂಪಾಯಿ ನಿನ್ ತಾತ ತಂದಿದ್ನಾ‌.. 550 ಕೋಟಿ ಎಲ್ಲಿ ತಂದಿದ್ದೀರ ತೋರಿಸ್ರಿ ಎಂದು ಗರಂ ಆದರು. ಒಂದು ಹಂತದಲ್ಲಿ ಎದ್ದು ನಿಂತ ಇಬ್ಬರು ನಾಯಕರು ಪರಸ್ಪರ ಕೈ ಕೈ ಮೀಲಾಯಿಸುವ ಹಂತಕ್ಕೂ ತಲುಪಿದರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಎಚ್ಚೆತ್ತುಕೊಂಡ ಅಧಿಕಾರಿಗಳು ಇಬ್ಬರು ನಾಯಕರನ್ನು ಸಮಧಾನ ಪಡಿಸಿರುವ ಕಾರ್ಯ ಮಾಡಿದರು.

Source: newsfirstlive.com Source link