ಮಗುವಿನ ನಿರೀಕ್ಷೆಯಲ್ಲಿ ಮಿಸ್ಟರ್​ ಆ್ಯಂಡ್​ ಮಿಸಸ್ ರಂಗೇಗೌಡ -ಹೇಗಿದೆ ಗೊತ್ತಾ ಅದ್ದೂರಿ ಸೀಮಂತದ ಕ್ಷಣಗಳು?

ಮಗುವಿನ ನಿರೀಕ್ಷೆಯಲ್ಲಿ ಮಿಸ್ಟರ್​ ಆ್ಯಂಡ್​ ಮಿಸಸ್ ರಂಗೇಗೌಡ -ಹೇಗಿದೆ ಗೊತ್ತಾ ಅದ್ದೂರಿ ಸೀಮಂತದ ಕ್ಷಣಗಳು?

ಕಿರುತೆರೆಯ ಮುದ್ದಾದ ಜೋಡಿ ಅಮೃತಾ ರಾಮಮೂರ್ತಿ ಹಾಗೂ ರಾಘು ಗುಡ್​ ನ್ಯೂಸ್​ ನೀಡಿದ್ದು, ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ. ಬೆಂಗಳೂರಿನಲ್ಲಿ ತುಂಬು ಗರ್ಭಿಣಿ ಅಮೃತಾ ಅವರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಜರುಗಿದೆ.

ಈ ಸಂತೋಷದ ಕ್ಷಣದ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟಿ ಅಮೃತಾ.. ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ. ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು (ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ.. ಮೊದಲಿಗೆ ನನ್ನ ಜೀವ ರಘುಗೆ..ಎಂದು ಬರೆದುಕೊಂಡಿದ್ದಾರೆ.

blank

ಇನ್ನೂ ಅಮೃತಾ ಕುಲವಧು ಸೀರಿಯಲ್​​ ಮೂಲಕ ಮನೆಮಾತಾಗಿದ್ದರು. ನಂತರದ ದಿನಗಳಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಆದ್ರೆ ಮಿಸ್ಟರ್​ ಆ್ಯಂಡ್​ ಮಿಸಸ್ ರಂಗೇಗೌಡ​ ಸೀರಿಯಲ್​ ಅಮೃತಾ ಅವರ ಬದುಕನ್ನೆ ಬದಲಿಸಿತು. ಈ ಧಾರಾವಾಹಿಯಲ್ಲಿ ಲೀಡ್​ ರೋಲ್​ ಮಾಡುತ್ತಿದ್ದ ರಘು ಜೊತೆ 2019ರಲ್ಲಿ ಸಪ್ತಪದಿ ತುಳಿದರು ಅಮೃತಾ.

blank

ಸದ್ಯ ರಘು ನಮ್ಮನೆ ಯುವರಾಣಿ ಸೀರಿಯಲ್​ನಲ್ಲಿ ಸಾಕೇತ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಅಮೃತಾ ಇತ್ತೀಚಿಗೆ ಕಸ್ತೂರಿ ನಿವಾಸ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದರು. ಆದ್ರೆ ತಾಯಿಯಾಗುವ ಭಾಗ್ಯ ಒಲಿದಿದ್ದರಿಂದ ಸೀರಿಯಲ್​ನ್ನು ಅರ್ಧಕ್ಕೆ ನಿಲ್ಲಿಸಿ ತಾಯ್ತನದ ಕ್ಷಣಗಳನ್ನ ಎಂಜಾಯ್​ ಮಾಡ್ತೀದ್ದಾರೆ.

ಆರೆಂಜ್​ ಗ್ರೀನ್​ ಕಾಂಬಿನೇಷನ್​ ಸೀರೆಯಲ್ಲಿ ಅಮೃತಾ ಮುದ್ದಾಗಿ ಕಾಣುತ್ತಿದ್ದರೇ,​ ರೇಷ್ಮೆ ಜುಬ್ಬಾನಲ್ಲಿ ರಘು ಮಿಂಚುತ್ತಿದ್ದರು.

blank

Source: newsfirstlive.com Source link