ನಾನು ಮೆರಿಟ್ ವಿದ್ಯಾರ್ಥಿ ನನಗೆ ಮ್ಯಾನೇಜ್ಮೆಂಟ್ ಸೀಟ್ ಬೇಡ -ರಾಮ್​ದಾಸ್

ನಾನು ಮೆರಿಟ್ ವಿದ್ಯಾರ್ಥಿ ನನಗೆ ಮ್ಯಾನೇಜ್ಮೆಂಟ್ ಸೀಟ್ ಬೇಡ -ರಾಮ್​ದಾಸ್

ಬೆಂಗಳೂರು: ಸಂಪುಟ ರಚನೆ ಬಳಿಕ ಸಚಿವ ಸ್ಥಾನ ಸಿಗದೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಮೈಸೂರು ಕೆ.ಆರ್ ಕ್ಷೇತ್ರದ ಶಾಸಕ ಎಸ್​​​.ಎ ರಾಮ್​ದಾಸ್​ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಮ್​​ದಾಸ್​​, ನಾನು ಇವತ್ತು‌ ಸಿಎಂ ಭೇಟಿ ಮಾಡಿದ್ದೇನೆ. ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಯಾಕೆ ಭೇಟಿ ಮಾಡಿಲ್ಲ ಅಂತ ಸೀಲ್ಡ್ ಕವರ್ ನಲ್ಲಿ ಪತ್ರದ ಮೂಲಕ ಕಾರಣ ಕೊಡ್ತೇನೆ ಅಂದಿದ್ದೆ. ಅದರಂತೆ ಇವತ್ತು ಸಿಎಂ ಭೇಟಿ ಮಾಡಿ ಸೀಲ್ಡ್ ಕವರ್ ಕೊಟ್ಟಿದ್ದೇನೆ.

ಸೀಲ್ಡ್ ಕವರ್ ನಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಫ್ರೀ ಆದಾಗ ಓದಿ ಅಂತ ಸಿಎಂಗೆ ಹೇಳಿದ್ದೀನಿ. ನಾನೊಬ್ಬ ಸ್ವಯಂಸೇವಕ, ಪಕ್ಷ ಕಟ್ಟುವ ಕಷ್ಟದ ಅನುಭವ ಇದೆ. ಜೀವನದಲ್ಲಿ ನಾನು ಮೆರಿಟ್ ವಿದ್ಯಾರ್ಥಿ, ನನಗೆ ಮ್ಯಾನೇಜ್ಮೆಂಟ್ ಸೀಟ್ ಬೇಡ ಎಂದು ಮೊದಲೇ ಅವರಿಗೆ ಹೇಳಿದ್ದೆ. ಪಕ್ಷದ ವಿರುದ್ಧ ಅಭಿಪ್ರಾಯ, ನನ್ನ ಅಸಮಾಧಾನ ಹೇಳಿಕೊಂಡಿಲ್ಲ. ಸಿಎಂ ಬೇಸರವಾಗಿಲ್ಲ, ಅವರು ನನ್ನ ಕ್ಲೋಸ್ ಫ್ರೆಂಡ್. ಸಿಎಂ ಒಬ್ಬ ಮಾಜಿ ಸಿಎಂ ಮಗ, ಪರಿಸ್ಥಿತಿಗಳು ಅವರಿಗೆ ಗೊತ್ತಿದೆ ಎಂದರು.

ಇದನ್ನೂ ಓದಿ:‘ನನ್ನದು ಅವರದ್ದು ಪ್ರೇಮಾ’ ಸಚಿವ ಸ್ಥಾನ ತಪ್ಪಿದ್ದರ ಬಗ್ಗೆ ರಾಮದಾಸ್ ಹೇಳಿಕೆ

Source: newsfirstlive.com Source link