ಅನಿಲ್ ಕಪೂರ್ ಮನೆಯಲ್ಲಿ ಮದುವೆಯ ಸಂಭ್ರಮ

ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಕುಟುಂಬದಲ್ಲೀಗ ಮದುವೆಯ ಸಂಭ್ರಮ ಮನೆಮಾಡಿದೆ. ಎಷ್ಟೇ ವಯಸ್ಸಾದರೂ ಇಂದಿಗೂ ಯುವಕರಂತೆ ಕಾಣುವ ಅನಿಲ್ ಕಪೂರ್‌ರವರ ಎರಡನೇ ಪುತ್ರಿ ರಿಯಾ ಕಪೂರ್‍ಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಆಗಸ್ಟ್ 14ರಂದು ಶನಿವಾರದಿಂದ ಎರಡ್ಮೂರು ದಿನಗಳ ಕಾಲ ರಿಯಾ ಕಪೂರ್ ವಿವಾಹ ಮಹೋತ್ಸವ ನಡೆಯಲಿದ್ದು. ರಿಯಾ ಕಪೂರ್ ತಮ್ಮ ಬಹುಕಾಲದ ಗೆಳೆಯ ಕರಣ್ ಬೂಲಾನಿ ಕೈ ಹಿಡಿಯಲಿದ್ದಾರೆ. ಈ ವಿವಾಹ ಸಮಾರಂಭವನ್ನು ಮುಂಬೈನ ಜುಹಾ ನಿವಾಸದಲ್ಲಿ ನೆರವೇರಿಸಲು ಗುರು-ಹಿರಿಯರು ನಿಶ್ಚಯಿಸಿದ್ದು, ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

ರಿಯಾ ಕಪೂರ್ ಹಾಗೂ ಕರಣ್ ಬೂಲಾನಿ ಮದುವೆಗೆ ಈಗಾಗಲೇ ಭರ್ಜರಿ ತಯಾರಿ ನಡೆಸಲಾಗಿದ್ದು, ಇಬ್ಬರ ಮನೆಯ ಮುಂದೆ ಕಲರ್ ಫುಲ್ ಆಗಿ ಲೈಟಿಂಗ್ಸ್ ಹಾಕಲಾಗಿದೆ. ಸದ್ಯ ಎರಡು ಕುಟುಂಬದಲ್ಲಿಯೂ ಹಬ್ಬದ ಸಂಭ್ರಮ ಮನೆಮಾಡಿದೆ. ಅಲ್ಲದೇ ಇತ್ತೀಚೆಗಷ್ಟೇ ಸೋನಂ ಕಪೂರ್ ಪತಿಯೊಂದಿಗೆ ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಈ ವೇಳೆ ಅನಿಲ್ ಕಪೂರ್ ವಿಮಾನ ನಿಲ್ದಾಣಕ್ಕೆ ತೆರಳಿ ಪುತ್ರಿಗೆ ವೆಲ್‍ಕಮ್ ಮಾಡಿದ್ದರು. ಅಷ್ಟಕ್ಕೂ ಸೋನಂ ಮುಂಬೈಗೆ ಭೇಟಿ ನೀಡಿದ್ದು, ಸಹೋದರಿಯ ಮದುವೆಗಾಗಿ ಎಂದು ಇದೀಗ ಹೇಳಲಾಗುತ್ತಿದೆ.

blank

ರಿಯಾ ಕಪೂರ್ ಮತ್ತು ಕರಣ್ ಬುಲಾನಿ ಸುಮಾರು 13 ವರ್ಷಗಳಿಂದ ಸ್ನೇಹ ಹೊಂದಿದ್ದು, 2010ರಲ್ಲಿ ಬಿಡುಗಡೆಯಾದ ಆಯಿಶಾ ಸಿನಿಮಾಕ್ಕೆ ರಿಯಾ ಮೊದಲ ಬಾರಿಗೆ ಬಂಡವಾಳ ಹೂಡಿದ್ದರು ಮತ್ತು ಈ ಸಿನಿಮಾದಲ್ಲಿ ಕರಣ್ ಬುಲಾನಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾಕ್ಕಾಗಿ 15 ಕೆ.ಜಿ ತೂಕ ಇಳಿಸಿಕೊಂಡ ಕಾಲಿವುಡ್ ನಟ ಸಿಂಬು

Source: publictv.in Source link