ಲಾಕ್ ಆಗಿದ್ದ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಓಪನ್.. ‘ಸತ್ಯಮೇವ ಜಯತೆ’ ಎಂದ ಕಾಂಗ್ರೆಸ್

ಲಾಕ್ ಆಗಿದ್ದ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಓಪನ್.. ‘ಸತ್ಯಮೇವ ಜಯತೆ’ ಎಂದ ಕಾಂಗ್ರೆಸ್

ನವದೆಹಲಿ: ಕೆಲವು ದಿನಗಳ ಹಿಂದೆ ಲಾಕ್ ಮಾಡಲಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್​ನ್ನ ಟ್ವಿಟರ್ ಇದೀಗ ಓಪನ್ ಮಾಡಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸತ್ಯಮೇವ ಜಯತೆ ಎಂದಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಲಾಕ್ ಆಗಿದ್ದೇಕೆ..?

ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಜೊತೆಗೆ ಆ ಫೋಟೋಗಳನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ಫೋಟೋಗಳಲ್ಲಿ ಸಂತ್ರಸ್ತೆಯ ಪೋಷಕರ ಐಡೆಂಟಿಟಿ ರಿವೀಲ್ ಮಾಡಲಾಗಿದೆ ಎಂದು ಮಕ್ಕಳು ಹಕ್ಕು ರಕ್ಷಣಾ ಆಯೋಗ ಟ್ವಿಟರ್​ಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ: ಧಂ ಇದ್ರೆ ನಮ್​​ ಅಕೌಂಟೂ​ ಲಾಕ್ ಮಾಡಿ ಎಂದ ‘ಕೈ’ ನಾಯಕರ ಟ್ವಿಟರ್ ಅಕೌಂಟ್ ಲಾಕ್; ಮುಂದ?

ರೂಲ್ಸ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟ್ವಿಟರ್ ರಾಹುಲ್ ಗಾಂಧಿಯವರ ಖಾತೆಯನ್ನ ಲಾಕ್ ಮಾಡಿ ಯಾವುದೇ ಟ್ವೀಟ್​ಗಳನ್ನು ಮಾಡಲಾಗದಂತೆ ನಿರ್ಬಂಧಿಸಿತ್ತು. ರಾಹುಲ್ ಗಾಂಧಿ ಮಾತ್ರವಲ್ಲದೇ ಕಾಂಗ್ರೆಸ್​​ನ ಹಲವು ನಾಯಕರ ಟ್ವಿಟರ್ ಅಕೌಂಟ್​ಗಳನ್ನು ಲಾಕ್ ಮಾಡಲಾಗಿತ್ತು. ಇದರಿಂದ ಕಾಂಗ್ರೆಸ್ ಬೇಸರಗೊಂಡು ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿತ್ತು.

ಇದನ್ನೂ ಓದಿ: ರಾಹುಲ್​ ಗಾಂಧಿ ಟ್ವಿಟರ್ ಅಮಾನತು: ‘ನಮ್ಮ ನಾಯಕ ರಾಹುಲ್​’ ಹೆಸರಿನಲ್ಲಿ ಅಭಿಯಾನ ಶುರು

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರ ಫೋಟೋಗಳನ್ನ ತಮ್ಮ ಪ್ರೊಫೈಲ್ ಪಿಕ್ಚರ್ ಮಾಡಿಕೊಳ್ಳುವ ಮೂಲಕ ನಮ್ಮ ನಾಯಕ ರಾಹುಲ್ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದರು. ರಾಹುಲ್ ಗಾಂಧಿ ಟ್ವಿಟರ್ ಕಂಪನಿ ಭಾರತದ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಟ್ವಿಟರ್ ರಾಹುಲ್ ಗಾಂಧಿ ಅವರ ಅಕೌಂಟ್​ನ್ನು ಅನ್​ಲಾಕ್ ಮಾಡಿದೆ.

Source: newsfirstlive.com Source link