ಧ್ವಜಸ್ತಂಭಕ್ಕೆ ಬಾವುಟ ಕಟ್ಟುವಾಗ ಕ್ರೇನ್ ಪಲ್ಟಿ.. ಮೂವರು ಸಾವು.. ಓರ್ವನ ಸ್ಥಿತಿ ಗಂಭೀರ

ಧ್ವಜಸ್ತಂಭಕ್ಕೆ ಬಾವುಟ ಕಟ್ಟುವಾಗ ಕ್ರೇನ್ ಪಲ್ಟಿ.. ಮೂವರು ಸಾವು.. ಓರ್ವನ ಸ್ಥಿತಿ ಗಂಭೀರ

ಭೋಪಾಲ್: ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಂದು ಧ್ವಜಸ್ತಂಭಕ್ಕೆ ಬಾವುಟ ಕಟ್ಟಲು ಕ್ರೇನ್ ಮೂಲಕ ಕಂಬ ಏರಿದ್ದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಕ್ರೇನ್​ನಲ್ಲಿ ಹೈಡ್ರಾಲಿಕ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಕ್ರೇನ್​ನ ಒಂದು ಭಾಗ ಮೇಲೆದ್ದಿದೆ. ಇದರಿಂದ ಬಾವುಟ ಕಟ್ಟಲು ಮೇಲೇರಿದ್ದ ಮೂವರು ಕೆಳಗೆ ಬಿದ್ದು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದಾನೆ.

ಇದನ್ನೂ ಓದಿ: ಇನ್ಮುಂದೆ ಆಗಸ್ಟ್​​ 14 ರಂದು ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಣೆ- ಮೋದಿ ಘೋಷಣೆ

ಭೋಪಾಲ್ ಬಳಿಯ ಪೋಸ್ಟ್ ಆಫೀಸ್​ ಆವರಣದಲ್ಲಿ ಪೋಲ್​​ಗೆ ಬಾವುಟ ಕಟ್ಟುವ ಸಮಯದಲ್ಲಿ ಈ ದುರಂತ ನಡೆದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೌಶ್​ಲೇಂದ್ರ ವಿಕ್ರಮ್ ಸಿಂಗ್.. ತನಿಖೆಗೆ ಆದೇಶ ಹೊರಡಿಸಲಾಗಿದೆ.. ಕ್ರೇನ್ ಅಲೈನ್​ಮೆಂಟ್​ನಲ್ಲಿ ಸಮಸ್ಯೆ ಇದ್ದುದರಿಂದ ಈ ದುರ್ಘಟನೆ ನಡೆದಿದೆ.. ಮೂವರು ಸಾವನ್ನಪ್ಪಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಇನ್ನು ಗಾಯಗೊಂಡವರನ್ನ ಕಾರ್ಪೋರೇಷನ್ ಉದ್ಯೋಗಿಗಳು ಎನ್ನಲಾಗಿದೆ.

ಇದನ್ನೂ ಓದಿ: ‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

ಘಟನೆಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ.. ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ವಾಲಿಯರ್ ಮುನಿಸಿಪಲ್ ಕಮಿಷನರ್ ಮುಕುಲ್ ಗುಪ್ತ ಆಗಮಿಸಿದ್ದಾರೆ. ಇನ್ನು ಗ್ವಾಲಿಯರ್ ಪ್ರವಾಸದಲ್ಲಿದ್ದ ಬಿಜೆಪಿ ಸಚಿವ ತುಳಸಿ ಸಿಲಾವತ್ ಕೂಡ ಘಟನಾ ಸ್ಥಳಕ್ಕೆ ಭಟಿ ನೀಡಿದ್ದಾರೆ ಎಂಬ ಮಾಹಿತಿ ಇದೆ.

Source: newsfirstlive.com Source link