ಅರಮನೆ ನಗರಿಯಾಗಲಿದೆ ವಿಜಯೇಂದ್ರರ ನಿವಾಸ.. ಹಳೇ ಮೈಸೂರಿನ ಹಿಡಿತಕ್ಕಾಗಿ ಪ್ರವಾಸ!

ಅರಮನೆ ನಗರಿಯಾಗಲಿದೆ ವಿಜಯೇಂದ್ರರ ನಿವಾಸ.. ಹಳೇ ಮೈಸೂರಿನ ಹಿಡಿತಕ್ಕಾಗಿ ಪ್ರವಾಸ!

ಬೆಂಗಳೂರು: ಮೈಸೂರಿನಲ್ಲಿ ಮನೆ ಮಾಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮುಂದಾಗಿದ್ದಾರಂತೆ. ಈ ಮೂಲಕ ಹಳೇ ಮೈಸೂರಿನ ಮೇಲೆ ಹಿಡಿತ ಸಾಧಿಸುವ ಮೂಲಕ ತಮ್ಮ ಗುರಿ ಸಾಧಿಸಲು ವಿಜಯೇಂದ್ರ ಪ್ಲಾನ್ ಮಾಡಿದ್ದಾರಂತೆ.

ಬಸವರಾಜ ಬೊಮ್ಮಾಯಿ‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಲಾಗದೇ, ಸಚಿವರೂ ಆಗದಿದ್ದರೂ ಗುರಿ ಬಿಡದ ವಿಜಯೇಂದ್ರ ಅವರು ಹಂತ ಹಂತವಾಗಿ ಹಿಡಿತ ಸಾಧಿಸಲು ಮೈಸೂರಿನಲ್ಲಿ ನೆಲೆಯೂರಲು ಮುಂದಾಗಿದ್ದಾರಂತೆ. ಅರಮನೆ ನಗರಿಯಲ್ಲಿ ಮನೆ ಮಾಡುವ ಮೂಲಕ ಜೈತ್ರಯಾತ್ರೆ ಆರಂಭಿಸಲು ಮುಂದಾಗಿರುವ ವಿಜಯೇಂದ್ರ ತಂದೆಯ ಕರ್ಮಭೂಮಿಗಿಂತಲೂ ತಂದೆಯ ಜನ್ಮಭೂಮಿಯ ಭಾಗದಲ್ಲಿ ರಾಜಕೀಯವಾಗಿ ನೆಲೆಯೂರಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಭದ್ರನೆಲೆ ಇಲ್ಲದ ಹಳೇ ಮೈಸೂರಿನಲ್ಲಿ ಪಕ್ಷ ಭದ್ರಪಡಿಸಲು ವಿಜಯೇಂದ್ರ ಮುಂದಾಗಿದ್ದು ಮೈಸೂರಿನಲ್ಲಿ ಮನೆ ಮಾಡುವ ಬಗ್ಗೆ ಈಗಾಗಲೇ ಸ್ಥಳೀಯ ಆಪ್ತರಿಗೆ ಸಂದೇಶ ನೀಡಿದ್ದಾರಂತೆ. ಈ ಮೂಲಕ ರಾಜಕೀಯ ಕೇಂದ್ರ ಬೆಂಗಳೂರು ಹಾಗೂ ತನ್ನ ರಾಜಕೀಯ ಕಾರ್ಯಕ್ಷೇತ್ರ ಮೈಸೂರಿನ ನಡುವೆ ಓಡಾಡಿಕೊಂಡಿರಲು ಪ್ಲಾನ್ ಮಾಡಿದ್ದಾರಂತೆ. ಮನೆ ಮಾಡಿದ ನಂತರ ಹಳೇ ಮೈಸೂರು ಪ್ರವಾಸ ಆರಂಭಿಸಲಿದ್ದಾರಂತೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

Source: newsfirstlive.com Source link