ಗುರು-ಶಿಷ್ಯನ ಭೇಟಿಗೆ ಮತ್ತೆ ಕಾಲ ಸನ್ನಿಹಿತ; ಹೊಸ ನಿರೀಕ್ಷೆಯಲ್ಲಿ ಜಮೀರ್​

ಗುರು-ಶಿಷ್ಯನ ಭೇಟಿಗೆ ಮತ್ತೆ ಕಾಲ ಸನ್ನಿಹಿತ; ಹೊಸ ನಿರೀಕ್ಷೆಯಲ್ಲಿ ಜಮೀರ್​

ಬೆಂಗಳೂರು: ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಕೊಂಚ ದೂರ ಉಳಿದಿದ್ದ ಗುರು-ಶಿಷ್ಯರು ಮತ್ತೆ ಒಂದಾಗುವ ಕಾಲ ಹತ್ತಿರವಾಗಿದೆ. ಹೌದು ಇದೇ ಭಾನುವಾರ (ನಾಳೆ) ಮಾಜಿ ಸಚಿವ ಜಮೀರ್ ಅಹಮ್ಮದ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.

ಜಮೀರ್ ಅರಮನೆಗೆ ಸಿದ್ದರಾಮಯ್ಯ..!
ಇ.ಡಿ. ದಾಳಿ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಜಮೀರ್​ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯರಗೆ ಜಮೀರ್​ ಮೇಲಿದ್ದ ಪ್ರೀತಿ ಕೊಂಚ ಕಮ್ಮಿಯಾಗಿದೆ ಅಂತಾ ಹೇಳಲಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಮಾಧ್ಯಮಗಳ ಎದುರೇ ಜಮೀರ್ ಕರೆ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ.. ‘ಎಲ್ಲಿದಿಯಪ್ಪ ನೀನು, ಆಯ್ತು ಬಾ ಪಾ ಮಾತನಾಡ್ತೇನೆ. ನಾನೇಕೆ ಅನುಮಾನ ಬೀಳಲಿ, ಮನೆಗೆ ಬಾ ಮಾತನಾಡೋಣ, ಇಲ್ಲಿ ಮಾಧ್ಯಮದವರು ಇದ್ದಾರೆ’ ಅಂತ ಹೇಳಿ ಚಟಾಕಿ ಹಾರಿಸಿದ್ದರು.

ಸಿದ್ದರಾಮಯ್ಯರ ವಾದ ಏನಾಗಿತ್ತು..? 
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಒಮ್ಮೆ ‌ಪ್ರೀತಿ ಹುಟ್ಟಿದ್ರೆ ಕಡಿಮೆಯಾಗಲ್ಲ, ಜಮೀರ್ ಮೇಲೆ ಪ್ರೀತಿ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಜಮೀರ್ ಅಹಮ್ಮದ್ ಖಾನ್ ಅರಮನೆಗೆ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಇ.ಡಿ.‌ ದಾಳಿ ಬಳಿಕ ಇದುವರೆಗೂ ಸಿದ್ದರಾಮಯ್ಯನವರ ಭೇಟಿಯನ್ನ ಜಮೀರ್ ಮಾಡಿರಲಿಲ್ಲ.

ಗುರು-ಶಿಷ್ಯನ ಭೇಟಿಗೆ ಮತ್ತೆ ಕಾಲ ಸನ್ನಿಹಿತ; ಹೊಸ ನಿರೀಕ್ಷೆಯಲ್ಲಿ ಜಮೀರ್​

ಜಮೀರ್ ಅಹಮ್ಮದ್ ಖಾನ್ ಸ್ವತಃ ಸಿದ್ದರಾಮಯ್ಯರ ಭೇಟಿಗೆ ಯತ್ನಿಸಿದರೂ ಸಹ ಇಡಿ ದಾಳಿ ಬೆನ್ನಲ್ಲೇ ಭೇಟಿ ಬೇಡ ಅಂತಾ ವಿರೋಧ ಪಕ್ಷದ ನಾಯಕರು ಸೂಚಿಸಿದ್ದರಂತೆ. ನೀನು ನಾನಿದ್ದಲ್ಲಿಗೆ ಬರೋದು ಬೇಡ. ಇಂತಹ ಸಂದರ್ಭದಲ್ಲಿ ನಾನೇ ಬಂದರೆ ಸರಿ, ಹೀಗಾಗಿ ನಾನೇ ಭಾನುವಾರ ನಿನ್ನ ಮನೆಗೆ ಬರ್ತೀನಿ ಎಂದು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.

blank

ಗುರುಗಳ ಆಗಮನದ ಸುದ್ದಿ ಕೇಳಿ ಜಮೀರ್ ಅಹಮ್ಮದ್ ಖಾನ್ ಖುಷಿಯಲ್ಲಿ ತೇಲಾಡಿದ್ದಾರಂತೆ. ಅದರಂತೆ ನಾಳೆ ಭಾನುವಾರ ಮಧ್ಯಾಹ್ನ ಜಮೀರ್ ಮನೆಗೆ ಸಿದ್ದರಾಮಯ್ಯ ಭೇಟಿಕೊಡಲಿದ್ದಾರೆ. ಮತ್ತೆ ಗುರು-ಶಿಷ್ಯರ ಮರು ಸಮಾಗಮ ಆಗಲಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link