ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತವಾಗಿ ಜೊಲ್ಲೆಗೆ ಮುಜರಾಯಿ ಖಾತೆ ನೀಡಲಾಗಿದೆ: ಸತೀಶ್​ ಜಾರಕಿಹೋಳಿ

ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತವಾಗಿ ಜೊಲ್ಲೆಗೆ ಮುಜರಾಯಿ ಖಾತೆ ನೀಡಲಾಗಿದೆ: ಸತೀಶ್​ ಜಾರಕಿಹೋಳಿ

ಬೆಳಗಾವಿ: ಭ್ರಷ್ಟಾಚಾರವನ್ನು ಬಿಜೆಪಿಯ ಎಲ್ಲರೂ ಸಮರ್ಥನೆ ಮಾಡಿಕೊಳ್ಳುತ್ತಾರೆ, ಬಿಜೆಪಿಯಲ್ಲಿರುವವರೆಲ್ಲಾ ಸೇರಿ ಭ್ರಷ್ಟಾಚಾರವನ್ನು ಹಂಚಿಕೊಂಡು ಇರುತ್ತಾರೆ ಅಂತ ಶಶಿಕಲಾ ಜೊಲ್ಲೆಯನ್ನ ಸರ್ಕಾರ ಸಮರ್ಥನೆ ಮಾಡಿದ ವಿಚಾರದ ಬಗ್ಗೆ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ಜೊಲ್ಲೆ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಈಶ್ವರಪ್ಪ​ ನಾಚಿಕೆಗೇಡಿನ ಹೇಳಿಕೆ

ಭ್ರಷ್ಟಾಚಾರದ ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತ ಖಾತೆ ನೀಡಲಾಗಿದೆ. ಭ್ರಷ್ಟಾಚಾರ ಆರೋಪವನ್ನು ತನಿಖೆ ಮಾಡಬೇಕಿತ್ತು.. ಮಾಡಿಲ್ಲ. ಯಾರಾದ್ರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ತಡವಾಗಿಯೇ ಆದ್ರೂ ಕೋರ್ಟ್​ನಿಂದ ತನಿಖೆ ಆಗಿಯೇ ಆಗುತ್ತದೆ. ಮರಳಿ ಶಶಿಕಲಾ ಜೊಲ್ಲೆಗೆ ತತ್ತಿ ಖಾತೆ ನೀಡದಿರುವುದು ಸಂತೋಷದ ವಿಚಾರ. ಆದ್ರೆ, ದೇವರ ಜಪ ಮಾಡಲಿ ಎಂದು ಬೇರೆ ಖಾತೆ ಕೊಟ್ಟಿದ್ದಾರೆ. ತತ್ತಿ ಖಾತೆಯಲ್ಲಿ ಮಾಡಿದ ತಪ್ಪನ್ನು ಇಲ್ಲಿ ಪ್ರಾಯಶ್ಚಿತ್ತ ಮಾಡಲು ಮುಜರಾಯಿ ಖಾತೆ ನೀಡಿದ್ದಾರೆ. ಗುಡಿಗಳನ್ನ ಚನ್ನಾಗಿ ನೋಡಿಕೊಳ್ಳಲಿ, ಪೂಜೆ ಮಾಡಿಸಲಿ ಅಂತ ಅವ್ರಿಗೆ ಈ ಖಾತೆ ಕೊಟ್ಟಿದ್ದಾರೆ.

ಇದನ್ನೂ ಓದಿ:ನಿನ್ನೆ ಈಶ್ವರಪ್ಪ.. ಇಂದು ಮತ್ತೊಬ್ಬ ಸಚಿವ; ಕಳಂಕಿತ ಸಚಿವೆ ಜೊಲ್ಲೆ ಪರ ಹೆವಿ ಬ್ಯಾಟಿಂಗ್

ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವು ಚಿಂತೆ ಇತ್ತು. ಎಗ್ ಖಾತೆ ಸಾಕು ಮುಂದೆ ಏನಾದ್ರೂ ಅನಾಹುತ ಮಾಡಬಾರದು ಅಂತ ಸಿಎಂ ಮುಜರಾಯಿ ಖಾತೆ ನೀಡಿ ಒಳ್ಳೆ ಕೆಲಸ ಮಾಡಿದ್ದಾರೆ. ಗುರುವಾರ ಬಂತಮ್ಮಾ.. ರಾಯರ ನೆನೆಯಮ್ಮ ಅಂತ ಶಶಿಕಲಾ ಜೊಲ್ಲೆಗೆ ಪಾಪ ಮಾಡಿದೀಯಾ. ರಾಯರ ನೆನೆಯಮ್ಮ ಅಂತ ಗುಡಿಗಳಿಗೆ ಅನುದಾನ ಕೊಡಿ, ಸ್ವಚ್ಚಗೊಳಿಸಿ ಅಂತ ಖಾತೆ ಕೊಟ್ಟಿದ್ದಾರೆ
ಇದೇ ಶಶಿಕಲಾ ಜೊಲ್ಲೆಯವರಿಗೆ ದೊಡ್ಡ ಶಿಕ್ಷೆ ಅಂತ ಹೇಳಿದ್ದಾರೆ.

Source: newsfirstlive.com Source link