ಚೆಕ್ಕಿಂಗ್ ಮಾಡ್ತಿದ್ದ ಪೊಲೀಸ್ ಮೇಲೆ ಕಾರ್ ಹರಿಸಿದ ಚಾಲಕ.. ಸೆರೆಯಾಯ್ತು ಭಯಾನಕ ವಿಡಿಯೋ

ಚೆಕ್ಕಿಂಗ್ ಮಾಡ್ತಿದ್ದ ಪೊಲೀಸ್ ಮೇಲೆ ಕಾರ್ ಹರಿಸಿದ ಚಾಲಕ.. ಸೆರೆಯಾಯ್ತು ಭಯಾನಕ ವಿಡಿಯೋ

ನವದೆಹಲಿ: ದೇಶದಾದ್ಯಂತ ನಾಳೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಈ ಹಿನ್ನೆಲೆ ದೇಶದ ಮೂಲೆ ಮೂಲೆಯಲ್ಲೂ ನಾಳೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ಸಿಕ್ಕ ದಿನವನ್ನು ನೆನೆಯಲಾಗುತ್ತದೆ. ಸ್ವಾತಂತ್ರ್ಯ ದಿನದಂದ ಯಾವುದೇ ಅನಾಹುತಗಳು ನಡೆಯದಿರಲೆಂದು ಗಡಿಯಲ್ಲಿ ಸೈನಿಕರು ಹಾಗೂ ದೇಶದೊಳಗೆ ಪೊಲೀಸರು ಸಾಕಷ್ಟು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಪಂಜಾಬ್​ನ ಪಟಿಯಾಲದಲ್ಲೂ ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಂದು ಬಿಗಿಭದ್ರತೆ ಏರ್ಪಡಿಸಲಾಗಿದೆ. ರಸ್ತೆಯಲ್ಲಿ ಓಡಾಡುವ ಅನುಮಾನಾಸ್ಪದ ಕಾರ್​ಗಳನ್ನ ತಡೆದು ಪರಿಶೀಲನೆ ನಡೆಸಲಾಗ್ತಿದೆ. ಹೀಗೆ ಪರಿಶೀಲನೆ ನಡೆಸುವ ವೇಳೆ ಪಟಿಯಾಲದಲ್ಲಿ ಕಾರ್ ಚಾಲಕನೋರ್ವ ಪೊಲೀಸ್ ಮೇಲೆ ಕಾರ್ ಹರಿಇಸದ ಘಟನೆ ನಡೆದಿದೆ.

ಇದನ್ನೂ ಓದಿ: ಧ್ವಜಸ್ತಂಭಕ್ಕೆ ಬಾವುಟ ಕಟ್ಟುವಾಗ ಕ್ರೇನ್ ಪಲ್ಟಿ.. ಮೂವರು ಸಾವು.. ಓರ್ವನ ಸ್ಥಿತಿ ಗಂಭೀರ

ಕಾರ್​ನ ಅಡ್ಡಗಟ್ಟಿದ ಪೊಲೀಸ್ ಮೇಲೆ ಡ್ರೈವರ್ ಕಾರ್ ಹರಿಸಿದ್ದಾನೆ.. ಇದರಿಂದ ಪೊಲೀಸ್​ ಕಾರ್​ನ ಬಾನೆಟ್​ನಲ್ಲಿ ಸಿಲುಕಿಕೊಂಡಿದ್ದಾರೆ. ಕಾರ್ ಸ್ವಲ್ಪ ಮೂವ್ ಆದಂತೆಲ್ಲಾ ಕಾರ್​ನ ಎಡಭಾಗಕ್ಕೆ ಪೊಲೀಸ್ ಬಿದ್ದಿದ್ದಾರೆ. ಆದರೂ ಚಾಲಕ ಕಾರ್ ನಿಲ್ಲಿಸದೇ ವೇಗವಾಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

Source: newsfirstlive.com Source link