ಪತಿ ಬರ್ತ ಡೇ ಆಚರಿಸಲು ಮಾಲ್ಡೀವ್ಸ್​ಗೆ ಹೋರಟ ಕರೀನಾ ಫ್ಯಾಮಿಲಿ- ಕೊರನಾ 3ನೇ ಅಲೆ ಭೀತಿ

ಮುಂಬೈ: ಬಾಲಿವುಡ್‍ನ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಕೊರೊನಾ ಸಮಯದಲ್ಲಿ ಹೋಗಿರುವುದು ಸಖತ್ ಸುದ್ದಿಯಾಗಿದೆ.

ನಟ ಸೈಫ್ ಅಲಿ ಖಾನ್ 52ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ, ಅವರ ಜನ್ಮದಿನವನ್ನು ಆಚರಿಸಲು ಮಾಲ್ಡೀವ್ಸ್​ಗೆ  ಕುಟಂಬ ಸಮೇತ ಕರೀನಾ ತೆರಳಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣವೊಂದರಿಂದ ಈ ಜೋಡಿ ಮಾಲ್ಡೀವ್ಸ್‍ಗೆ ತೆರಳಿದೆ. ಮಕ್ಕಳಾದ ಜೇಹ್ ಮತ್ತು ತೈಮೂರ್ ಕೂಡಾ ಜೊತೆಯಲ್ಲಿದ್ದರು.

 

View this post on Instagram

 

A post shared by Viral Bhayani (@viralbhayani)

ಇತ್ತೀಚೆಗೆ ಕರೀನಾ ಮತ್ತು ಸೈಫ್ ಜೋಡಿ ತಮ್ಮ ಮಕ್ಕಳಿಗೆ ಇಟ್ಟ ಹೆಸರಿನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ತಮ್ಮ ಮೊದಲ ಮಗನಿಗೆ ತೈಮೂರ್ ಎಂದು ನಾಮಕರಣ ಮಾಡಿದ್ದ ಕರೀನಾ- ಸೈಫ್, ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದರು. ಇದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಟೀಕೆಗಳೂ ವ್ಯಕ್ತವಾಗಿದ್ದವು.

 

View this post on Instagram

 

A post shared by Viral Bhayani (@viralbhayani)

ಕರೀನಾ ಹೆಸರಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಪರೋಕ್ಷವಾಗಿ ಉತ್ತರಿಸಿದ್ದರು ನಾನು ತುಂಬಾ ಸಕಾರಾತ್ಮಕ ವ್ಯಕ್ತಿ. ಕೋವಿಡ್‍ನಂತಹ ಸಮಯದಲ್ಲಿ ಸಾಧ್ಯವಾದಷ್ಟು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡಲು ಬಯಸುತ್ತೇನೆ. ಯಾವುದೇ ರೀತಿಯ ನಕಾರಾತ್ಮಕತೆಯ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಕರೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Source: publictv.in Source link