‘ಮೋದಿ ಭಾರತದ ಕಿಂಗ್​ ಅಲ್ಲ’.. ಸುಬ್ರಮಣಿಯನ್ ಸ್ವಾಮಿ ಹೀಗಂದಿದ್ದೇಕೆ..?

‘ಮೋದಿ ಭಾರತದ ಕಿಂಗ್​ ಅಲ್ಲ’.. ಸುಬ್ರಮಣಿಯನ್ ಸ್ವಾಮಿ ಹೀಗಂದಿದ್ದೇಕೆ..?

ನವದೆಹಲಿ: ಬಿಜೆಪಿ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ತಾವು ಪ್ರಧಾನಿ ಮೋದಿ ಅವರ ಆರ್ಥಿಕ ಹಾಗೂ ವಿದೇಶಾಂಗ ನೀತಿಯ ಪ್ರಬಲ ವಿರೋಧಿ ಎಂದು ಹೇಳಿದ್ದಾರೆ.

ಟ್ವಿಟರ್​ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ಆರ್ಥಿಕ ಹಾಗೂ ವಿದೇಶಾಂಗ ನೀತಿಗಳ ಕಾರಣದಿಂದ ನಾನು ಪ್ರಧಾನಿ ಮೋದಿ ಅವರ ವಿರೋಧಿ. ಈ ಬಗ್ಗೆ ಯಾರೊಂದಿಗಾದರೂ ಚರ್ಚೆ ಮಾಡಲು ನಾನು ಸಿದ್ಧ. ನೀವು ಪಾರ್ಟಿಸಿಪೆಟರಿ ಪ್ರಜಾಪ್ರಭುತ್ವದ ಬಗ್ಗೆ ಕೇಳಿದ್ದೀರಾ? ಮೋದಿ ಭಾರತದ ಕಿಂಗ್ ಅಲ್ಲ ಎಂದು ಬರೆದುಕೊಂಡಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರಿಗೆ ಬೇಕಾಗಿದ್ದ ಸಚಿವ ಸ್ಥಾನವನ್ನು ನೀಡಿಲ್ಲ ಎಂಬ ಕಾರಣಕ್ಕೆ ಅವರು ಮೋದಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದೀರಾ ಎಂದು ಟ್ವಿಟರ್ ಬಳಕೆದಾರರು ಪ್ರಶ್ನೆ ಮಾಡಿದ್ದರು.

ಇದಕ್ಕೂ ಮುನ್ನ ಮೋದಿ ಸರ್ಕಾರ ವಿರುದ್ಧ ಟೀಕೆ ಮಾಡಿದ್ದ ಸುಬ್ರಮಣಿಯನ್​ ಸ್ವಾಮಿ ಅವರು, ಅಧಿಕಾರಶಾಹಿ ಜೋಡಿಯಾದ ಜೈಶಂಕರ್ ಮತ್ತು ದೋವಲ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಕ್ಕಾಗಿ ಈಗಲಾದರೂ ದೇಶದ ಕ್ಷಮೆ ಕೇಳುತ್ತಾರೆಯೇ? ಮೋದಿ ಅವರು ರಾಜಕಾರಣಿಗಳನ್ನು ನಂಬದ ಕಾರಣದ ಅವರಿಗೆ ಮುಕ್ತ ಅವಕಾಶ ನೀಡಿದ್ದರು. ಈಗ ನಾವು ನಮ್ಮ ಎಲ್ಲಾ ನೆರೆಹೊರೆಯ ರಾಷ್ಟ್ರಗಳೊಂದಿಗೆ ಗೊಂದಲದಲ್ಲಿದ್ದೇವೆ ಎಂದು ಸುಬ್ರಮಣಿಯನ್​ ಟ್ವೀಟ್​ ಮಾಡಿ ಪ್ರಶ್ನೆ ಮಾಡಿದ್ದರು.

Source: newsfirstlive.com Source link