ಮನೆ ಕೆಲಸಕ್ಕೆಂದು ಸೇರಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಖತರ್ನಾಕ್​​ ಮಹಿಳೆ​​​

ಮನೆ ಕೆಲಸಕ್ಕೆಂದು ಸೇರಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಖತರ್ನಾಕ್​​ ಮಹಿಳೆ​​​

ಬೆಂಗಳೂರು: ಯಶವಂತಪುರದ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕದ್ದ ಕೆಲಸದಾಕೆಯನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕೃಷ್ಣಂಪಲ್ಲಿ ನಿವಾಸಿ ಪುಷ್ಪಾ ಎಂಬಾಕೆ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್​​ನಲ್ಲಿ ಕೆಲಸಕ್ಕೆಂದು ಸೇರಿಸಿಕೊಂಡಿದ್ದಳು. ಈಗ ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲಿ 378 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇನ್ನು, ಆರೋಪಿ ಪುಷ್ಪಾ ಕಡೆಯಿಂದ ಪೊಲೀಸರು 18 ಲಕ್ಷ ರೂ. ಮೌಲ್ಯದ 378 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ನನ್ನದು ಆಂಧ್ರಪ್ರದೇಶ. ನನ್ನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಹಾಗಾಗಿ ನಗರಕ್ಕೆ ಬಂದು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡುವ ನೆಪದಲ್ಲಿ ಚಿನ್ನ ಕದಿಯುತ್ತಿದ್ದೆ ಎಂದು ಪೊಲೀಸರ ಮುಂದೆ ಖತರ್ನಾಕ್​​ ಕಳ್ಳಿ ಬಾಯಿಬಿಟ್ಟಿದ್ದಾಳೆ.

ಎರಡು ತಿಂಗಳ ಹಿಂದೆ ಜೂನ್​​ 1ನೇ ತಾರೀಕಿನಿಂದ ಯಶವಂತಪುರದ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಈಕೆ ಕೆಲಸಕ್ಕೆ ಸೇರಿಕೊಂಡಿದ್ದಳು. ಮನೆ ಮಾಲೀಕರು ಎಲ್ಲಿ ಚಿನ್ನಾಭರಣ ಇಡುತ್ತಿದ್ದರು ಎಂದು ಗಮನಿಸಿದ್ದಳು. ಮಾಲೀಕರು ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಬೀರುವಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಳು.

ಇದನ್ನೂ ಓದಿ: ಮಗುವಿನ ನಿರೀಕ್ಷೆಯಲ್ಲಿ ಮಿಸ್ಟರ್​ ಆ್ಯಂಡ್​ ಮಿಸಸ್ ರಂಗೇಗೌಡ -ಹೇಗಿದೆ ಗೊತ್ತಾ ಅದ್ದೂರಿ ಸೀಮಂತದ ಕ್ಷಣಗಳು?

ಮನೆ ನಿರ್ವಹಣೆಗೆ ಕೂಲಿ ಸಾಕಾಗುತ್ತಿರಲಿಲ್ಲ

ಮಾಲೀಕರು ಮನೆ ಬಂದ ಮೇಲೆ ಬೀರು ನೋಡಿದಾಗ ಚಿನ್ನಾಭರಣ ಕಳುವಾದ ವಿಚಾರ ಬೆಳಕಿಗೆ ಬಂದಿದೆ. ಈಗ ಮನೆ ಮಾಲೀಕರ ದೂರಿನ ಅನ್ವಯ ಸಿಸಿಟಿವಿ ದೃಶ್ಯದ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಮನೆ ಕೆಲಸದಿಂದ ಬರುತ್ತಿದ್ದ ಕೂಲಿ ಸಾಕಾಗುತ್ತಿರಲಿಲ್ಲ. ಹಾಗಾಗಿ ಈ ಕೆಲಸ ಮಾಡಿದೆ ಎಂದು ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ತನಿಖೆ ಮುಂದವರಿಸಿದ್ದಾರೆ.

Source: newsfirstlive.com Source link