400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ತಾಲಿಬಾನ್‌ ವಶಕ್ಕೆ.. ಅಫ್ಘಾನ್​ ಸರ್ಕಾರದ ಪತನಕ್ಕೆ ಕೌಂಟ್​ಡೌನ್​ ಸ್ಟಾರ್ಟ್​!

400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ತಾಲಿಬಾನ್‌ ವಶಕ್ಕೆ.. ಅಫ್ಘಾನ್​ ಸರ್ಕಾರದ ಪತನಕ್ಕೆ ಕೌಂಟ್​ಡೌನ್​ ಸ್ಟಾರ್ಟ್​!

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ಇಡೀ ಅಫ್ಘಾನ್‌ ಸರ್ಕಾರವೇ ನಡುಗಿ ಹೋಗಿದೆ. ಕಂದಹಾರ್‌, ಲಷ್ಕರ್‌ ಗಾವ್‌, ಘಾಜ್ನಿ.. ಅಂತಹ ದೊಡ್ಡ ದೊಡ್ಡ ನಗರಗಳನ್ನೇ ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಹಾಗಾದ್ರೆ ಅಫ್ಘಾನ್‌ ಸರ್ಕಾರ ಪತನವಾಗುತ್ತಾ? ತಾಲಿಬಾನಿಗಳ ಜೊತೆ ಶಾಂತಿ ಮಾತುಕತೆ ನಡೆಯುತ್ತಾ ?.

ಸುಮಾರು ಎರಡು ದಶಕಗಳ ಕಾಲ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ನೆಲೆ ನಿಂತಿತ್ತು. ತಾಲಿಬಾನಿ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿತ್ತು. ತಾಲಿಬಾನಿಗಳ ನೆಲೆ ನಾಶಪಡಿಸಿತ್ತು. ಸಾವಿರಾರು ಉಗ್ರರನ್ನು ಸಾಯಿಸಿತ್ತು. ಇದೇ ಕಾರಣಕ್ಕೆ ಅಫ್ಘಾನ್‌ ಜನ ನೆಮ್ಮದಿಯಿಂದ ಜೀವಿಸುತ್ತಿದ್ರು. ಆದ್ರೆ, ಆಮೆರಿಕ ಸೇನೆ ಯಾವಾಗ ಅಫ್ಘಾನ್‌ನಿಂದ ಹಿಂದಕ್ಕೆ ಸರಿಯಿತೋ ಆವಾಗಲೇ ನೋಡಿ ತಾಲಿಬಾನಿಗಳ ಅಟ್ಟಹಾಸ ಆರಂಭವಾಗಿದ್ದು. ಅಲ್ಲಿಯವರೆಗೂ ರೆಕ್ಕೆ ಇಲ್ಲದ ಹಕ್ಕಿಯಂತಿದ್ದ ತಾಲಿಬಾನಿಗಳು ಅಮೆರಿಕ ಸೇನೆ ವಾಪಸ್‌ ಆಗುತ್ತಲೇ ರೆಕ್ಕೆ ಬಂದ ರಣಹದ್ದುಗಳಾಗಿದ್ದಾರೆ.

blank

ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ ತಾಲಿಬಾನಿಗಳು ನಡೆದಿದ್ದೇ ದಾರಿಯಾಗಿದೆ. ತಾಲಿಬಾನಿಗಳ ಅಟ್ಟಹಾಸಕ್ಕೆ ಸ್ವತಃ ಅಲ್ಲಿಯ ಸರ್ಕಾರವೇ ಅಕ್ಷರಶಃ ಹೈರಾಣಾಗಿ ಬಿಟ್ಟಿದೆ. ಇನ್ನೇನು ಅಫ್ಘಾನ್‌ ಸರ್ಕಾರ ಪತನಕ್ಕೆ ಕೌಂಟ್‌ಡೌನ್‌ ಸ್ಟಾರ್ಟ್‌ ಆಗಿ ಬಿಟ್ಟಿದೆ.
ಮನೆಯೊಂದರಿಂದ ತಾಲಿಬಾನಿ ಉಗ್ರರು ಗನ್‌ಗಳನ್ನು ತಂದು ವಾಹನಕ್ಕೆ ತುಂಬುತ್ತಿದ್ದಾರೆ. ಅಲ್ಲಿರುವುದು ಒಂದೆರಡು ಗನ್‌ಗಳಲ್ಲ. ನೂರಾರು ಗನ್‌ಗಳ ರಾಶಿಯೇ ಇರುತ್ತದೆ. ನಮ್ಮ ದೇಶದಲ್ಲಿ ಮಕ್ಕಳ ಆಟಿಕೆಗಳನ್ನೂ ಆ ರೀತಿ ತುಂಬುವುದಿಲ್ಲ.

ಕಂದಹಾರ್‌, ಲಷ್ಕರ್‌ ಗಾವ್‌, ಹೆರಾತ್‌, ಘಜ್ನಿ ತಾಲಿಬಾನಿಗಳ ವಶಕ್ಕೆ
ತಾಲಿಬಾನಿಗಳ ಆಕ್ರಮಣಕ್ಕೆ ಬೆಚ್ಚಿದ ಅಫ್ಘಾನ್‌ ಸರ್ಕಾರ
ಕಂದಹಾರ್‌ ಬಗ್ಗೆ ಭಾರತಕ್ಕಿರುವ ಕಹಿ ಅನುಭವ ಏನು?

ಆನೆ ನಡೆದಿದ್ದೇ ದಾರಿ ಅನ್ನುವಂತೆ ತಾಲಿಬಾನಿಗಳು ನಡೆಯುತ್ತಿದ್ದಾರೆ. ತಾಲಿಬಾನಿಗಳ ಓಟಕ್ಕೆ ಅಫ್ಘಾನ್‌ ಸರ್ಕಾರ ಬ್ರೇಕ್‌ ಹಾಕಲು ಸಾಧ್ಯವೇ ಆಗುತ್ತಿಲ್ಲ. ಯಾಕೆಂದ್ರೆ ತಾಲಿಬಾನಿಗಳು ಒಂದೊಂದೆ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ. ಅದರಲ್ಲಿಯೂ ಕಂದಹಾರ್‌, ಹೆರಾತ್‌, ಲಷ್ಕರ್‌ ಗಾವ್‌, ಘಜ್ನಿ ನಗರಗಳನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಲೇ ಅಫ್ಘಾನ್‌ ಸರ್ಕಾರ ನಡುಗಿಹೋಗಿದೆ..

ಅಫ್ಘಾನ್‌ನ ಎರಡನೇ ಅತಿ ದೊಡ್ಡ ನಗರ ಕಂದಹಾರ್‌ ಆಗಿತ್ತು. ಇಲ್ಲಿ ನಡೆಯುವ ಪ್ರಮುಖ ವಾಣಿಜ್ಯ ಚಟುವಟಿಕೆಗಳೇ ಸರ್ಕಾರಕ್ಕೆ ಆದಾಯದ ಮೂಲವಾಗಿತ್ತು. ಇದೀಗ ಕಂದಹಾರ್‌ ಸಂಪೂರ್ಣ ತಾಲಿಬಾನಿಗಳ ವಶಕ್ಕೆ ಸಿಲುಕಿರುವುದು ಅಫ್ಘಾನ್‌ ಸರ್ಕಾರವನ್ನು ಬೆಚ್ಚಿ ಬೀಳಿಸಿದೆ. ಸರ್ಕಾರಕ್ಕೆ ಕ್ಷಣಗಣನೆ ಎಣಿಸುವಂತೆ ಮಾಡಿ ಬಿಟ್ಟಿದೆ.

blank

ಇದೇ ಕಂದಹಾರ್‌ ಬಗ್ಗೆ ಭಾರತಕ್ಕೊಂದು ಕಹಿ ಅನುಭವಿದೆ. ಅದನ್ನು ಈ ಕ್ಷಣದಲ್ಲಿ ನಿಮಗೆ ಹೇಳಲೇಬೇಕು. ಅದೇನಂದ್ರೆ, 1999ರಲ್ಲಿ ನೇಪಾಳದಿಂದ ಭಾರತಕ್ಕೆ ಬರುತ್ತಿದ್ದ ವಿಮಾನವನ್ನು ಉಗ್ರರು ಅಪಹರಿಸಿಸುತ್ತಾರೆ. ಹಾಗೆ ಅಪಹರಿಸಿದ ವಿಮಾನವನ್ನು ಕಂದಹಾರ್‌ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಗುತ್ತಾರೆ. ವಿಮಾನದಲ್ಲಿದ್ದ 188 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತಾರೆ. ವಿಮಾನದಲ್ಲಿರೋ 188 ಜನರನ್ನು ಬಿಡಬೇಕು ಅಂದ್ರೆ, ಭಾರತದ ಜೈಲಿನಲ್ಲಿರೋ ಉಗ್ರಗಾಮಿಗಳನ್ನು ಬಿಡಬೇಕು ಅಂತ ಆಗ್ರಹ ಮಾಡುತ್ತಾರೆ.

ಅಂದಿನ ವಾಜಪೇಯಿ ಸರ್ಕಾರ ಜನರ ರಕ್ಷಣೆಗೆ ಬೇರೆ ದಾರಿ ಇಲ್ಲದೇ ಉಗ್ರರನ್ನು ಬಿಟ್ಟು ಜನರ ರಕ್ಷಣೆ ಮಾಡುತ್ತದೆ. ಅಂದು ಬಿಡುಗಡೆಯಾದ ಮುಷ್ತಾತ್‌ ಲತ್ರಮ್‌, ಮೌಲಾನಾ ಮಸೂರ್‌ ಅಜರ್‌, ಶೇಕ್‌ ಉಮರ್‌ ಎಂಬ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ರಾಜಾರೋಶವಾಗಿ ಓಡಾಡುತ್ತಿದ್ದಾರೆ.

blank

ಇನ್ನು ಹೆರಾತ್‌ ಅಫ್ಘಾನಿಸ್ತಾನ್‌ನ ಮೂರನೇ ದೊಡ್ಡ ನಗರವಾಗಿದ್ರೆ, ಲಷ್ಕರ್‌ ಗಾವ್‌ ಪ್ರಮುಖ ವಾಣಿಜ್ಯ ಚಟುವಟಿಕೆಯ ನಗರವಾಗಿತ್ತು. ಅದರಲ್ಲಿಯೂ ಘಜ್ನಿಯನ್ನು ತಾಲಿಬಾನಿಗಳು ವಶಪಡಿಸಿಕೊಂಡಿರೋದು ಅಫ್ಘಾನ್‌ ಸರ್ಕಾರಕ್ಕೆ ದೊಡ್ಡ ಭಯವನ್ನೇ ಹುಟ್ಟಿಸಿದೆ. ಯಾಕೆಂದ್ರೆ, ಘಜ್ನಿ ಇರೋದು ಅಫ್ಘಾನ್‌ ರಾಜಧಾನಿ ಕಾಬುಲ್‌ನಿಂದ 150 ಕಿಲೋ ಮೀಟರ್‌ ದೂರದಲ್ಲಿ. ಹೀಗಾಗಿ ಶೀಘ್ರವೇ ಕಾಬುಲ್‌ಗೂ ತಾಲಿಬಾನಿಗಳು ಲಗ್ಗೆ ಇಡುವ ಸಾಧ್ಯತೆ ಇದೆ.

ಕಾಬುಲ್‌ ರಕ್ಷಣೆಯೇ ಅಫ್ಘಾನ್‌ಗೆ ದೊಡ್ಡ ಸವಾಲು
ಬೇರೆಡೆಯಿಂದ ಕಾಬುಲ್‌ಗೆ ಬಂದ ಮಿಲಿಟರಿ ಸಿಬ್ಬಂದಿ
ಕಾಬುಲ್‌ ತಾಲಿಬಾನ್‌ ವಶವಾದ್ರೆ ಅಫ್ಘಾನ್‌ ಸರ್ಕಾರ ಪತನ?

ಈಗಾಗಲೇ ಕಂದಹಾರ್‌, ಘಜ್ನಿ, ಹೆರಾತ್‌.. ಸೇರಿದಂತೆ ದೊಡ್ಡ ದೊಡ್ಡ ನಗರಗಳೇ ತಾಲಿಬಾನಿಗಳ ವಶಕ್ಕೆ ಸಿಲುಕಿವೆ. ಅಲ್ಲಿಯ ಮಿಲಿಟರಿ, ಪೊಲೀಸ್‌ ಸಿಬ್ಬಂದಿ ಕೂಡ ತಾಲಿಬಾನಿಗಳಿಗೆ ಶರಣಾಗಿ ಬಿಟ್ಟಿದ್ದಾರೆ. ಇದೀಗ ತಾಲಿಬಾನಿಗಳ ಕಣ್ಣು ಬಿದ್ದಿರೋದು ಕಾಬುಲ್‌ ಮೇಲೆ. ಹೌದು, ಕಾಬುಲ್‌ ಅಫ್ಘಾನಿಸ್ತಾನದ ರಾಜಧಾನಿ.

ಸರ್ಕಾರದ ಆಡಳಿತ ಯಂತ್ರ ಇರುವುದೇ ಇಲ್ಲಿ. ಹೀಗಾಗಿ ಒಮ್ಮೆ ತಾಲಿಬಾನಿಗಳು ಕಾಬುಲ್‌ ವಶಪಡಿಸಿಕೊಂಡ್ರೆ ಅಫ್ಘಾನ್‌ ಸರ್ಕಾರ ಪತನವಾಗುವುದು ಖಚಿತ. ಅಮೆರಿಕ ಗುಪ್ತಚರ ಸಂಸ್ಥೆ 30 ದಿನದಲ್ಲಿ ಕಾಬುಲ್‌ ತಾಲಿಬಾನಿಗಳ ವಶವಾಗುವ ಸಾಧ್ಯತೆ ಇದೆ, 90 ದಿನದಲ್ಲಿ ಸಂಪೂರ್ಣ ಅಫ್ಘನ್‌ ತಾಲಿಬಾನಿಗಳ ವಶವಾಗುತ್ತೆ ಅಂತ ತಿಳಿಸಿತ್ತು. ಆದ್ರೆ, ತಾಲಿಬಾನಿಗಳ ವೇಗ ನೋಡಿದ್ರೆ, ಶೀಘ್ರವೇ ಕಾಬುಲ್‌ ತಾಲಿಬಾನಿಗಳ ವಶವಾಗುವ ಸಾಧ್ಯತೆ ಇದೆ. ಒಮ್ಮೆ ಹಾಗೇನಾದ್ರೂ ಆದ್ರೆ ಅಫ್ಘಾನ್‌ ಸರ್ಕಾರ ಪತನವಾಗುತ್ತೆ.

ಶಾಂತಿ ಮಾತುಕತೆಗೆ ಆಹ್ವಾನಿಸಿದ ಅಫ್ಘಾನ್‌
ಮಾತುಕತೆಗೆ ತಾಲಿಬಾನಿ ಮುಖಂಡರು ಬರುತ್ತಾರಾ?
400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ತಾಲಿಬಾನ್‌ ವಶಕ್ಕೆ

ಬಹುತೇಕ ಪ್ರದೇಶಗಳಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದೇ ಅಫ್ಘಾನ್‌ ಸೈನಿಕರೆ ಶರಣಾಗಿ ಬಿಟ್ಟಿದ್ದಾರೆ. ಅಂತಹ ಪ್ರದೇಶದಲ್ಲಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಅಫ್ಘಾನ್‌ ಸರ್ಕಾರ ನೋಡೇ ಬಿಡೋಣ ಅಂತ ಹೋರಾಟಕ್ಕೆ ಇಳಿದಿತ್ತು. ಆದ್ರೆ, ಪರಿಸ್ಥಿತಿ ಸರಿಯಿಲ್ಲ, ತಾಲಿಬಾನಿಗಳೇ ಮೇಲುಗೈ ಸಾಧಿಸುತ್ತಿದ್ದಾರೆ, ಇಡೀ ಅಫ್ಘಾನ್‌ ತಾಲಿಬಾನಿಗಳ ವಶವಾಗುವ ಕಾಲ ಶೀಘ್ರದಲ್ಲೇ ಬರುತ್ತೆ ಅನ್ನೋದು ಅಫ್ಘನ್‌ ಸರ್ಕಾರಕ್ಕೆ ಅರ್ಥವಾಗಿ ಬಿಟ್ಟಿದೆ. ಯಾಕಂದ್ರೆ, ಈಗಾಗಲೇ 400 ಜಿಲ್ಲೆಗಳಲ್ಲಿ 230 ಜಿಲ್ಲೆಗಳು ಸಂಪೂರ್ಣವಾಗಿ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಅಂದ್ರೆ ಮೂರನೇ ಎರಡು ಭಾಗ ತಾಲಿಬಾನಿಗಳ ವಶವಾಗಿದೆ. ಇದೇ ಕಾರಣಕ್ಕೆ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಅಫ್ಘಾನ್‌ ಸರ್ಕಾರ ಮುಂದೆ ಇಟ್ಟಿದೆ.

ಕತಾರ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಾ?
ತಾಲಿಬಾನಿಗಳ ಜೊತೆ ಅಧಿಕಾರ ಹಂಚಿಕೆಯಾಗುತ್ತಾ?

ಅಫ್ಘಾನ್‌ ಸರ್ಕಾರದ ಆಹ್ವಾನವನ್ನು ತಾಲಿಬಾನಿ ಮುಖಂಡರು ಒಪ್ಪುತ್ತಾರಾ ಅನ್ನೋದೇ ಪ್ರಶ್ನೆಯಾಗಿ ಬಿಟ್ಟಿದೆ. ಒಮ್ಮೆ ಮಾತುಕತೆಗೆ ಬಂದ್ರೆ ಏನಾಗಬಹುದು? ಅರ್ಧ ಅಫ್ಘಾನ್‌ ಆಡಳಿತವನ್ನು ತಾಲಿಬಾನಿಗಳಿಗೆ ನೀಡಲಾಗುತ್ತಾ? ಇಲ್ಲವೇ ಹಿಂಸಾಚಾರ ಬೇಡ ಅಂತ ತಾಲಿಬಾನಿಗಳಿಗೆ ಸಂಪೂರ್ಣ ಆಡಳಿತ ಬಿಟ್ಟುಕೊಡಲಾಗುತ್ತಾ? ಇಂತಹ ಪ್ರಶ್ನೆಗಳು ಎದುರಾಗಿವೆ. ಈಗಾಗಲೇ ತಾಲಿಬಾನಿಗಳಿಗೆ ತಾವೇ ಮೇಲುಗೈ ಸಾಧಿಸುತ್ತೇವೆ ಅನ್ನೋದು ಅರ್ಥವಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ತಾಲಿಬಾನಿಗಳು ಶಾಂತಿ ಮಾತುಕತೆಗೆ ಅಥವಾ ಅಧಿಕಾರ ಹಂಚಿಕೆಗೆ ಒಪ್ಪವ ಸಾಧ್ಯತೆ ಇಲ್ಲ.

blank

ಭಾರತ ನೀಡಿದ ಹೆಲಿಕಾಪ್ಟರ್‌ ಕೂಡ ತಾಲಿಬಾನಿಗಳ ವಶಕ್ಕೆ
ಅಫ್ಘನ್‌ನಲ್ಲಿ ಅನೇಕ ಅಭಿವೃದ್ಧಿ ಕೈಗೊಂಡಿದ್ದ ಭಾರತ

ಈ ಫೋಟೋವನ್ನು ಒಮ್ಮೆ ನೋಡಿ, ಇದು ಎಂಐ-24ವಿ ಹೆಲಿಕಾಪ್ಟರ್‌. ಇದು ಭಾರತ ಮೂಲದ್ದು. 2019ರಲ್ಲಿ ಭಾರತ ಸರ್ಕಾರ ಅಫ್ಫಾನ್‌ಗೆ ನಾಲ್ಕು ಹೆಲಿಕಾಪ್ಟರ್‌ಗಳನ್ನು ನೀಡಿತ್ತು. ಅದರಲ್ಲಿ ಒಂದು ಹೆಲಿಕಾಪ್ಟರ್‌ ತಾಲಿಬಾನಿಗಳ ಕೈಗೆ ಸೇರಿದೆ. ಇತ್ತೀಚೆಗೆ ಕುಂಜುಜ್‌ ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಸಂದರ್ಭದಲ್ಲಿಯೇ ಹೆಲಿಕಾಪ್ಟರ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಭಾರತ ಸರ್ಕಾರ ಅಫ್ಘಾನ್‌ನಲ್ಲಿ ನೀರಾವರಿ ಸೌಲಭ್ಯ, ವಿದ್ಯುತ್‌ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಲು ನೆರವು ನೀಡಿತ್ತು. ಜೊತೆಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಆದರೆ, ಅಫ್ಘಾನ್​ನಲ್ಲಿ ಸದ್ಯ ಅರಾಜಕತೆ ತಾಂಡವವಾಡುತ್ತಿದ್ದು, ಇದು ಮುಂದೆ ಇನ್ನೆಂಥಾ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸುತ್ತೋ ಗೊತ್ತಿಲ್ಲ.

ತಾಲಿಬಾನಿಗಳು ಒಂದೊಂದೆ ನಗರಗಳನ್ನು ವಶಕ್ಕೆ ಪಡೆಯುತ್ತಿದ್ದು, ಅಫ್ಘಾನ್‌ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಹೀಗಾಗಿ ಅಫ್ಘಾನ್‌ ಸರ್ಕಾರ ಮುಂದಿಟ್ಟಿರೋ ಶಾಂತಿ ಮಾತುಕತೆಯನ್ನು ತಾಲಿಬಾನಿಗಳು ಒಪ್ಪುವ ಸಾಧ್ಯತೆ ಇಲ್ಲ.

 

Source: newsfirstlive.com Source link