ಸದ್ಯಕ್ಕೆ ಬಸ್​ ದರ ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಲ್ಲ: ಸಚಿವ ಶ್ರೀರಾಮುಲು

ಸದ್ಯಕ್ಕೆ ಬಸ್​ ದರ ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಲ್ಲ: ಸಚಿವ ಶ್ರೀರಾಮುಲು

ಬೆಂಗಳೂರು: ಸಾರಿಗೆ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಸಭೆ ಮಾಡಿರುವೆ, ನಷ್ಟದಲ್ಲಿ ಇರೋ ಸಂಸ್ಥೆ ಲಾಭದತ್ತ ಕೊಂಡೊಯ್ಯಬೇಕಿದೆ ಅಂತ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಶೇಕಡಾ 70 ರಷ್ಟು ಜನರು ಬಸ್ ಮೇಲೆ ಅವಲಂಬಿಸಿದ್ದಾರೆ, ಹೀಗಾಗಿ, ಸದ್ಯಕ್ಕೆ ಬಸ್​ ದರ ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಲ್ಲ. ಹಾಗಾಗಿ, ಹಳೇ ಬಸ್​ ಸ್ಕ್ರಾಪ್​ ನೀತಿಯನ್ನೇ ಪಾಲಿಸುತ್ತೀನಿ ಅಂತ ಸ್ಪಷ್ಟನೆ ನೀಡಿದ್ದಾರೆ. ಈಗಾಗ್ಲೆ, ಪ್ರಸಕ್ತ ಸಾಲಿನಲ್ಲಿ ಇಲಾಖೆ 510.24 ಕೋಟಿ ನಷ್ಟದಲ್ಲಿದೆ ಅಂತಲೂ ಹೇಳಿದ್ದಾರೆ.

ಇದನ್ನೂ ಓದಿ: ಕೆಎಸ್ಆರ್​ಟಿಸಿ ಬಸ್ ಮೀಟರ್ ಬೋರ್ಡ್​ನಲ್ಲಿ ಹೆಬ್ಬಾವು ಪ್ರತ್ಯಕ್ಷ

ಇನ್ನೂ, ಆನಂದಸಿಂಗ್ ಅಸಮಾಧಾನಗೊಂಡಿರುವ ವಿಚಾರದ ಬಗ್ಗೆ ಮಾತಾಡಿರೋ ಅವ್ರು, ಆನಂದ ಸಿಂಗ್ ಜೊತೆಗೆ ನಿನ್ನೆ ಮಾತನಾಡಿದ್ದೇನೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಗೆ ತೆರಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ, ಅವ್ರು 16‌ರಂದು ದೆಹಲಿಗೆ ತೆರಳಬಹುದು. ನನ್ನ ಪ್ರಯತ್ನ ಮಾಡೋದು ಮಾಡ್ತಿದ್ದೇನೆ, ಮುಖ್ಯಮಂತ್ರಿ ಮಾತನಾಡಿದ್ದಾರೆ ನೋಡೋಣ ಏನಾಗ್ತದೆ ಅಂತ ಹೇಳಿದ್ದಾರೆ. ಇನ್ನೂ, ಇಂದಿರಾ ಕ್ಯಾಂಟಿನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ, ಹಿರಿಯರು ಮಾತನಾಡ್ತಾರೆ. ಜನರಿಗೆ ಒಳ್ಳೆಯದಾದ್ರೆ ಸಾಕು ಅಂತ ಹೇಳಿದ್ದಾರೆ.

 

Source: newsfirstlive.com Source link