ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಭೀತಿ; ಕೇವಲ 5 ದಿನದಲ್ಲಿ 242 ಮಕ್ಕಳಿಗೆ ಸೋಂಕು

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಭೀತಿ; ಕೇವಲ 5 ದಿನದಲ್ಲಿ 242 ಮಕ್ಕಳಿಗೆ ಸೋಂಕು

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ನಗರದ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ ಮೂರನೇ ಅಲೆಯ ಟಾರ್ಗೆಟ್​​ ಮಕ್ಕಳೇ ಎನ್ನುತ್ತಿದ್ದ ತಜ್ಞರ ಅಭಿಪ್ರಾಯ ನಿಜವಾಗುತ್ತಿದ್ಯಾ? ಎಂಬ ಅನುಮಾನ ಶುರುವಾಗಿದೆ. ಕಳೆದೊಂದು ವಾರದಿಂದ ಮಕ್ಕಳಿಗೆ ತೀವ್ರ ರೀತಿಯಲ್ಲಿ ಕೊರೊನಾ ಸೋಂಕು ಹರಡುತ್ತಿದೆ.

ಅತ್ತ ಸಿಲಿಕಾನ್ ಸಿಟಿಯಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೆ, ಇತ್ತ ಮಕ್ಕಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ ಐದು‌ ದಿನಗಳಲ್ಲಿ 200ಕ್ಕೂ ಅಧಿಕ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಕಮೀಷನರ್​​ ಗೌರವ್ ಗುಪ್ತಾ ಅವರೇ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಗೌರವ್​​ ಗುಪ್ತಾ, ಇದುವರೆಗೂ 9 ವರ್ಷದೊಳಗಿನ 106 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 9 ರಿಂದ 19 ವರ್ಷದೊಳಗಿನ 136 ಮಕ್ಕಳಿಗೆ ಸೋಂಕು ತಗಲಿದೆ. ಒಟ್ಟು 5 ದಿನಗಳಲ್ಲಿ 242 ಮಕ್ಕಳಲ್ಲಿ ಪಾಸಿಟಿವ್​ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 3ನೇ ಅಲೆ ಮುನ್ನವೇ ಮಕ್ಕಳಲ್ಲೂ ಪತ್ತೆಯಾದ ಕೊರೋನಾ ಸೋಂಕು; ಆತಂಕದಲ್ಲಿ ಪೋಷಕರು

Source: newsfirstlive.com Source link