ರೈತನಾಗಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಮೂಡಿಗೆರೆ ಶಾಸಕ ಕುಮಾರಸ್ವಾಮಿ

ರೈತನಾಗಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಮೂಡಿಗೆರೆ ಶಾಸಕ ಕುಮಾರಸ್ವಾಮಿ

ಚಿಕ್ಕಮಗಳೂರು: ನನ್ನ ಕ್ಷೇತ್ರದಲ್ಲಿನ ಕೆಲಸಗಳನ್ನು, ಸಮಸ್ಯೆಗಳನ್ನು, ಆದ್ಯತೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ, ನನ್ನ ಕ್ಷೇತ್ರಕ್ಕೆ ನ್ಯಾಯ ಒದಗಿಸಿ ಕೊಡಿ ಎಂದು ಒತ್ತಾಯಿಸಿ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೊನ್ನೆ ಮೊನ್ನೆ ವಿಧಾನಸೌಧದ ಮುಂದೆ ಏಕಾಂಗಿ ಧರಣಿ ನಡೆಸಿ ಸುದ್ದಿಯಲ್ಲಿದ್ದರು. ಅಲ್ಲಿಂದ ಸೀದಾ ಗದ್ದೆಗೆ ಇಳಿದಿರುವ ಅವರು ಇಂದು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ..

blank

ಹೌದು, ಶಾಸಕ ಎಂ.ಪಿ.ಕುಮಾರಸ್ವಾಮಿ ಭತ್ತದ ಗದ್ದೆಗಿಳಿದು ರೈತನಾಗಲು ಹೊರಟಿದ್ದಾರೆ. ಮೂಡಿಗೆರೆ ಪಟ್ಟಣದ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದ ದೇವರಗುಲ್ ಎಂಬಲ್ಲಿ ಭತ್ತದ ಗದ್ದೆಗಿಳಿದಿರುವ ಅವರು ಇತರ ಕೆಲಸಗಾರರೊಂದಿಗೆ ಸೇರಿ ಭತ್ತ ನಾಟಿಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮತ್ತೆ ಕಾಡಾನೆ ಪ್ರತ್ಯಕ್ಷ: ಸಲಗದ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕಮಗಳೂರು

blank

ಮತ್ತು ಗದ್ದೆಯಲ್ಲಿ ಸಲಾಕೆ ಹಿಡಿದು ಗದ್ದೆಯನ್ನು ಹದ ಮಾಡುತ್ತ, ಟ್ರಿಲ್ಲರ್​ ಚಾಲನೆ ಮಾಡಿ ಕೆಲಸದಲ್ಲಿ ತೊಡಗಿಸಿಕೊಂಡು ಖಷಿ ಪಟ್ಟಿದ್ದಾರೆ . ಈ ವೇಳೆ ಜಮೀನು ಮಾಲೀಕ ಸೇರಿದಂತೆ ಇತರರು ಶಾಸಕರಿಗೆ ಸಾಥ್​ ನೀಡಿದ್ದಾರೆ.

Source: newsfirstlive.com Source link