2% ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಆ.23 ರಿಂದ ಶಾಲೆ-ಕಾಲೇಜ್ ಓಪನ್..- ಬೊಮ್ಮಾಯಿ ಘೋಷಣೆ

2% ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಆ.23 ರಿಂದ ಶಾಲೆ-ಕಾಲೇಜ್ ಓಪನ್..- ಬೊಮ್ಮಾಯಿ ಘೋಷಣೆ

ಬೆಂಗಳೂರು: ಕೊರೊನಾ ಸ್ಥಿತಿಗತಿಗೆ ಸಂಬಂಧಿಸಿದಂತೆ ತಜ್ಞರ ಜೊತೆಗೆ ಸುದೀರ್ಘ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ.. ಕೋವಿಡ್​​ನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಅನ್ನೋದು ನಮ್ಮ ಮುಂದಿದೆ. ಒಂದನೇ ಅಲೆ ಕಡಿಮೆಯಾದಾಗ ದಿನಕ್ಕೆ 200-300 ಇರ್ತಿತ್ತು.. ಎರಡನೇ ಅಲೆ ಕಡಿಮೆಯಾದ ಮೇಲೂ 1800 ಕೇಸಸ್ ಬರ್ತಾ ಇದಾವೆ ಎಂದಿದ್ದಾರೆ.

ಮುಂದುವರೆದು ಯಾವ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಿದೆ ಅಲ್ಲಿ ಶಾಲೆಗಳನ್ನು ತೆರೆಯುವುದು ಬೇಡ..2 ಪರ್ಸೆಂಟ್​​ಗಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಶಾಲೆ ಪ್ರಾರಂಭ ಆದ ನಂತರ 2 ಪರ್ಸೆಂಟ್ ಮೇಲೆ ಹೋದ್ರೆ 1 ವಾರ ಶಾಲೆ ಕ್ಲೋಸ್ ಮಾಡಿ ಮತ್ತೆ ಓಪನ್ ಮಾಡುವ ಕುರಿತು ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ಹೇಳಿದ್ದೇನು..?

  1. ನಮ್ಮ ಮುಂದೆ 2 ನೇ ಅಲೆಯ ಸವಾಲು ಇನ್ನೂ ಇದೆ.
  2. ವಿದ್ಯಾರ್ಥಿಗಳ ಪೋಷಕರು ಲಸಿಕೆ ಪಡೆದಿರಬೇಕು.. ಶಾಲೆಯ ಶಿಕ್ಷಕ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು.
  3. ಜೀನೋಮ್ ಟೆಸ್ಟಿಂಗ್ ಲ್ಯಾಬ್​ಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ.
  4. ಜಿಲ್ಲಾವಾರು ಕೋವಿಡ್ ನಿರ್ವಹಣೆಗೆ ಸೂಚನೆ ನೀಡಿದ್ದೇವೆ.
  5. 14 ಲಕ್ಷದಷ್ಟು ವ್ಯಾಕ್ಸಿನ್ ನಮ್ಮ ರಾಜ್ಯದಲ್ಲಿ ಇದೆ.
  6. ಮಕ್ಕಳಿಗಾಗಿ ಐಸಿಯು, ಬೆಡ್ ತಯಾರಿಗೆ ಸೂಚನೆ ನೀಡಿದ್ದೇವೆ.
  7. ಸೆಪ್ಟೆಂಬರ್ 23 ರಂದು 9 ರಿಂದ 12 ನೇ ತರಗತಿವರೆಗೆ ಶಾಲೆ ತೆರೆಯಲು ಎಸ್​ಓಪಿ ತಯಾರಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡ್ತೇವೆ.
  8. ಕೇರಳ ಸರಿಯಾಗಿ ಕೊರೊನಾ ನಿಯಂತ್ರಣ ಮಾಡದಿರುವುದರಿಂದ ನಮಗೂ ತೊಂದರೆಯಾಗಿದೆ.

 

Source: newsfirstlive.com Source link