ಜೊತೆಜೊತೆಯಾಗಿ ಹೆಜ್ಜೆ ಹಾಕೋಕೆ ಸಜ್ಜಾಗಿದ್ದಾರೆ ಅನು-ಆರ್ಯ! ಹೇಗಿದೆ ಗೊತ್ತಾ ಮದುವೆ ಸಡಗರ?

ಜೊತೆಜೊತೆಯಾಗಿ ಹೆಜ್ಜೆ ಹಾಕೋಕೆ ಸಜ್ಜಾಗಿದ್ದಾರೆ ಅನು-ಆರ್ಯ! ಹೇಗಿದೆ ಗೊತ್ತಾ ಮದುವೆ ಸಡಗರ?

ಜೊತೆಜೊತೆಯಲಿ ವಿಭಿನ್ನ ಕಥಾ ಹಂದರದ ಧಾರಾವಾಹಿ. ಇಲ್ಲಿಯವರೆಗೂ ಸಾಕಷ್ಟು ಎಪಿಸೋಡ್​ಗಳನ್ನು ಕಂಪ್ಲೀಟ್​ ಮಾಡಿ ಯಶಸ್ವಿಯಾಗಿ ಮುನ್ನುಗ್ತಾಯಿದೆ.. ಟೈಟಲ್​ ಟ್ರ್ಯಾಕ್​ ನಿಂದನೆ ಸದ್ದು ಮಾಡಿದ ಈ ಧಾರಾವಾಹಿ ಹೊಸ ಟ್ವಿಸ್ಟ್​ಗಳೊಂದಿಗೆ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್​ ಹೊಡೆಸದಂತೆ ಭರ್ಜರಿಯಾಗಿ ಸಾಗ್ತಾಯಿದೆ.

ಇನ್ನು ಅನು ಸಿರಿಮನೆ ಹಾಗೂ ಆರ್ಯವರ್ಧನ್​ ಅವರ ಸ್ನೇಹ ತದನಂತರದ ಪ್ರೀತಿ ಜನಕ್ಕೆ ತುಂಬಾನೆ ಇಷ್ಟವಾಗಿದೆ.. ಪ್ರೀತಿಗೆ ಯಾವುದೇ ಅಂತರವಿಲ್ಲ ಎಂಬುದನ್ನು ಈ ಧಾರಾವಾಹಿ ಅರ್ಥ ಮಾಡಿಸಿದೆ.

blank

ಇದೀಗ ಪ್ರೇಕ್ಷಕರು ಇಷ್ಟು ದಿನ ಅನು ಆರ್ಯ ಮದುವೆಯಾಗುತ್ತಾ ಇಲ್ವಾ ಎಂಬ ಪ್ರಶ್ನೆಯನ್ನು ತಲೆಯಲ್ಲಿಟ್ಟುಕೊಂಡು ಧಾರಾವಾಹಿಯನ್ನ ವೀಕ್ಷಿಸ್ತಾಯಿದ್ರು..ಇದೀಗ ಆ ಕುತೂಹಲಕ್ಕೆ ಕೊಂಚ ಮಟ್ಟಿಗೆ ಬ್ರೇಕ್​ ಬಿದ್ದಿದೆ.

ಒಂದಿಷ್ಟು ಅಡೆ ತಡೆಗಳ ಮಧ್ಯದಲ್ಲಿ ಎಂಗೇಜ್​ಮೆಂಟ್​ ಆಗುತ್ತದೆ.. ನಂತರ ಕೂಡ ಸೋ ಕಾಲ್ಡ್​ ವಿಲನ್ಸ್​ ಅವರ ಪ್ರೀತಿಯನ್ನ ಮುರಿಯಲು ಸಾಕಷ್ಟು ಪ್ರಯತ್ನವನ್ನು ಮಾಡ್ತಾರೆ. ಆದ್ರೇ ಅದು ಯಾವುದು ಕೂಡ ವರ್ಕ್​ ಆಗಲ್ಲಾ.. ದಿನದಿಂದ ದಿನಕ್ಕೆ ಅನು ಆರ್ಯ ಪ್ರೀತಿ ಜಾಸ್ತಿಯಾಗ್ತಾನೆಯಿತ್ತು.

blank

ಇದೀಗ ನೀವೆಲ್ಲಾ ಕಾಯ್ತಿದ್ದ ಅನು ಆರ್ಯ ಮದುವೆ ಸಡಗರ ಶುರುವಾಗಿದೆ. ಭರ್ಜರಿ ಮಂಟಪ, ಬಣ್ಣ ಬಣ್ಣದ ಹೂಗಳಿಂದ ಅಲಂಕಾರ, ಎಲ್ಲಿ ನೋಡಿದರೂ ಕಂಗೊಳಿಸುವಂತಹ ಲೈಟಿಂಗ್ಸ್..​ ಸಖತ್​ ಆಗಿ ರೆಡಿಯಾಗಿರುವ ನಮ್ಮ ನಟನಟಿಯರು.. ಒಂದೇ ಮಾತಿನಲ್ಲಿ ಹೇಳ್ಬೇಕು ಅಂದ್ರೆ ಬೇರೆ ಲೋಕಕ್ಕೆ ಹೋಗಿದ್ದಿವೇನೂ ಅನ್ನುವ ಫೀಲ್​ ಕೊಡುವಂತಿದೆ.

ಇನ್ನೂ ಆ ಶಾಸ್ತ್ರ ಈ ಶಾಸ್ತ್ರ ಅಂತಾ ಎರಡೂ ಕುಟುಂಬ ಕೂಡ ಬ್ಯುಸಿಯಾಗಿದೆ.. ಆದ್ರೆ ಈ ಮಧ್ಯದಲ್ಲಿ ಏನಾದ್ರು ಟ್ವಿಸ್ಟ್​ ಇರಬಹುದಾ ಎಂಬ ಕುತೂಹಲ ಕೂಡ ಕಾಡ್ತಾಯಿದೆ.. ಅದರಲ್ಲೂ ಈ ಧಾರಾವಾಹಿಯ ನಿರ್ದೇಶಕರಾದ ಅರೂರ್​ ಜಗದೀಶ್​ ಅವರು ಇದು ಟ್ರೈಲರ್​ ಅಷ್ಟೇ ಸಿನಿಮಾ ಇನ್ನು ಮುಂದೆ ಶುರುವಾಗತ್ತೆ ಅಂತಾ ಬೇರೆ ಹೇಳಿದ್ದಾರೆ.. ಹಾಗಾಗಿ ಕ್ಯೂರಿಯಾಸಿಟಿ ಜಾಸ್ತಿನೇ ಇದೆ.

Source: newsfirstlive.com Source link