ಮಾನ್ಸೂನ್ ಮಳೆಯಲ್ಲಿ ಡಾಲಿ-ರಚ್ಚು ಪ್ರೇಮ ಗೀತೆ

ಮಾನ್ಸೂನ್ ಮಳೆಯಲ್ಲಿ ಡಾಲಿ-ರಚ್ಚು ಪ್ರೇಮ ಗೀತೆ

ಮಾನ್ಸೂನ್ ಮಳೆ ಶುರುವಾದ್ರೆ ಗೊತ್ತಲ್ಲ ಹೆಂಗೆಲ್ಲ ಆಗುತ್ತೆ ಅಂತ. ಆದ್ರೆ ಈ ಬಾರಿ ಸ್ಯಾಂಡಲ್​ವುಡ್​ನಲ್ಲೊಂದು ಮಾನ್ಸೂನ್ ಶುರುವಾಗಿದೆ. ಆ ಮಾನ್ಸೂನ್​ ಮಳೆಯಲ್ಲಿ ನಟ ರಾಕ್ಷಸ ಡಾಲಿ ಧನಂಜಯ್, ಬುಲ್ ಬುಲ್ ರಚಿತಾ ರಾಮ್ ನಿಂತು ನೆನೆದು ಒದ್ದೆಯಾಗಿದ್ದಾರೆ. ಅದ್ಯಾಕೆ ಇಬ್ಬರು ಮಾನ್ಸೂನ್ ಮಳೆಯಲ್ಲಿ ನೆನೆದಿದ್ದಾರೆ ಅನ್ನೋದನ್ನ ನೆನೆಯೋಣ ಬನ್ನಿ..

blank

ಡಾಲಿ ಧನಂಜಯ್ ಮತ್ತು ಬುಲ್ ಬುಲ್ ರಚಿತಾ ಇಬ್ಬರ ಕೈಯಲ್ಲೂ ತಲಾ ಹತ್ತು ಸಿನಿಮಾಗಳಿವೆ. ತಿಂಗಳಿಗೊಂದು ಸಿನಿಮಾ ಬಂದ್ರೂ ರಚ್ಚು ಮತ್ತು ಡಾಲಿ ಸಿನಿ ಅಕೌಂಟ್ ಖಾಲಿಯಾಗಲ್ಲ. ಡಾಲಿ ಅನ್ನೋ ಸಿನಿಮಾದಲ್ಲಿ ಧನಂಜಯ್ ಮತ್ತು ರಚಿತಾ ಕಂಗೊಳಿಸುತ್ತಿರೋದು ನಮಗೆ ನಿಮಗೆಲ್ಲ ಗೊತ್ತಿತ್ತು. ಈಗ ಸುದ್ದಿ ಇಲ್ದಂಗೆ ಸದ್ದೇ ಮಾಡ್ದಂಗೆ ಹೊಸ ಸಿನಿಮಾದಲ್ಲಿ ನಟಿಸಿ ಗೆದ್ದಿದೆ ಡಾಲಿ-ರಚ್ಚು ಜೋಡಿ. ಯಾವುದು ಸಿನಿಮಾ ಅನ್ನೋದನ್ನ ನೀವೇ ಒಮ್ಮೆ ನೋಡಿ..

ಮಚ್ಚು, ಲಾಂಗ್, ಗನ್ ಹಿಡಿದು ಘರ್ಜಿಸುತ್ತಿದ್ದ ಡಾಲಿ, ಈ ಬಾರಿ ಮಾನ್ಸೂನ್ ಮಳೆಯಲ್ಲಿ ಪ್ರೇಮರಾಗ ಹಾಡ್ತಿದ್ದಾರೆ. ಅವರ ಜೊತೆ ಡಿಂಪಲ್ ಕ್ವೀನ್ ಕೂಡ ಕಂಗೊಳಿಸಿದ್ದಾರೆ.. ಅಷ್ಟಕ್ಕೂ ಈ ಸಿನಿಮಾದ ಹೆಸರು ಮಾನ್ಸೂನ್ ರಾಗ..

blank

ಮಾನ್ಸೂನ್ ಮಳೆಯಲ್ಲಿ ಡಾಲಿ-ರಚ್ಚು ಪ್ರೇಮ ಗೀತೆ
ಆ ರಾತ್ರಿ ಮಳೆಯಲ್ಲಿ ಪ್ರೇಮ-ವಿರಸ ಮತ್ತು ಯುದ್ಧ
ಇದು ಮಾನ್ಸೂನ್ ರಾಗ ಚಿತ್ರದ ಟೀಸರ್ ಝಲಕ್. ಸೈಲೆಂಟ್ ಆಗಿ ಸದ್ದೇ ಮಾಡದೇ, ಅರ್ಧದಷ್ಟು ಶೂಟಿಂಗ್ ಮಾಡಿ ಮುಗಿಸಿ, ಟೀಸರ್ ಲಾಂಚ್ ಮಾಡಿದೆ ಮಾನ್ಸೂನ್ ರಾಗ ಚಿತ್ರತಂಡ.. ಅಂದಹಾಗೆ ಚಿತ್ರಕ್ಕೆ ಮಾನ್ಸೂನ್ ರಾಗ ಅಂತ ಟೈಟಲ್ ಇಟ್ಟಿರೋ ಟೀಂ, ಶೀರ್ಷಿಕೆಗೆ ತಕ್ಕನಾಗಿ ಇಡೀ ಸಿನಿಮಾನ ಮಾನ್ಸೂನ್ ಮಳೆಯಲ್ಲೇ ಚಿತ್ರಿಸ್ತಿದೆಯಂತೆ. ಆಗುಂಬೆಯ ಸುತ್ತಮುತ್ತಲಿನ ಪ್ರಕೃತಿ ಸೊಬಗಿನಲ್ಲಿ ಮಾಡಿದೆ ಮತ್ತು ಮಾಡ್ತಿದೆ. ಈಗಾಗ್ಲೇ ಶೇಕಡಾ 60ರಷ್ಟು ಶೂಟಿಂಗ್ ಮುಗಿದಿದ್ದು, ಅತಿ ಶೀಘ್ರಂ ಪ್ರೇಕ್ಷಕರಿಗೆ ಮಾನ್ಸೂನ್ ರಾಗದ ಪ್ರೇಮದೃಶ್ಯಕಾವ್ಯದ ದರ್ಶನ ಪ್ರಾಪ್ತಿಯಾಗಲಿದೆ.

blank

ಎಸ್ ರವೀಂದ್ರನಾಥ್ ಕಲ್ಪನೆಯಲ್ಲಿ ಮಾನ್ಸೂರ್ ರಾಗ ಮೂಡಿ ಬರುತ್ತಿದೆ.. ಪುಷ್ಪಕ ವಿಮಾನ ಹಾಗೂ ಇನ್ಸ್ಪೆಕ್ಟರ್ ವಿಕ್ರಮ್ ಸಿನಿಮಾಗಳ ನಿರ್ಮಾಪಕ ವಿಖ್ಯಾತ್ ಈ ಚಿತ್ರದ ನಿರ್ಮಾಪಕ.. ಎಸ್. ಕೆ. ರಾವ್ ಕ್ಯಾಮೆರಾ ಸಿನಿಮಾಟೋಗ್ರಫಿ ಹಾಗೂ ಅನೂಪ್ ಸೀಳಿನ್ ಬ್ಯಾಗ್ರೌಂಡ್ ಮ್ಯೂಸಿಕ್ ಸಖತ್ ಇಂಪ್ರೆಸ್ಸಿವ್ ಆಗಿದೆ.. ರಚಿತಾ ರಾಮ್ ಹಾಗೂ ಧನಂಜಯ ಜೋಡಿ ಇಂಡಸ್ಟ್ರಿಗೆ ಫ್ರೆಶ್ ಕಾಂಬಿನೇಷನ್ ಆಗಿದ್ದು, ಇವ್ರ ಜೋಡಿ ತೆರೆಮೇಲೆ ಮೋಡಿ ಮಾಡೋ ಸೂಚನೆ ಕೊಟ್ಟಿದೆ.

Source: newsfirstlive.com Source link