ರಾಹುಲ್ ಗಾಂಧಿ ವಿರುದ್ಧ ಕೈಗೊಂಡ ಕ್ರಮಗಳೇನು? ಫೇಸ್​​​ಬುಕ್​​ಗೆ ಮಕ್ಕಳ ಹಕ್ಕು ಆಯೋಗದ ಸಮನ್ಸ್

ರಾಹುಲ್ ಗಾಂಧಿ ವಿರುದ್ಧ ಕೈಗೊಂಡ ಕ್ರಮಗಳೇನು? ಫೇಸ್​​​ಬುಕ್​​ಗೆ ಮಕ್ಕಳ ಹಕ್ಕು ಆಯೋಗದ ಸಮನ್ಸ್

ನವದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರೊಂದಿಗೆ ತೆಗೆಸಿಕೊಂಡಿದ್ದ ಪೋಟೋ ಪೋಸ್ಟ್ ಮಾಡುವ ಮೂಲಕ ರಾಹುಲ್​​ ಗಾಂಧಿಯವರು ಸೋಷಿಯಲ್​​ ಮೀಡಿಯಾದ ನಿಯಮಗಳನ್ನು ಗಾಳಿಗೆ ತೂರಿದ್ದರು. ಹಾಗಾಗಿ ರಾಹುಲ್​​ ಗಾಂಧಿಯವರ ಅಧಿಕೃತ ಟ್ವಿಟರ್​ ಖಾತೆಯನ್ನು ಒಂದಷ್ಟು ದಿನ ಸಸ್ಪೆಂಡ್​​ ಮಾಡಲಾಗಿತ್ತು. ಈ ಬೆನ್ನಲ್ಲೀಗ ಅತ್ಯಾಚಾರ ಸಂತ್ರಸ್ತೆ ಕುಟುಂಬದ ಪೋಟೋ ಪೋಸ್ಟ್​ ಮಾಡಿ ಸಾಮಾಜಿಕ ಜಾಲತಾಣದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ರಾಹುಲ್​​ ಗಾಂಧಿ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಫೇಸ್​​ಬುಕ್​​ ಸಂಸ್ಥೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಪ್ರಶ್ನೆ ಕೇಳಿದೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಟ್ವಿಟರ್ ಅಮಾನತು: ‘ನಮ್ಮ ನಾಯಕ ರಾಹುಲ್​’ ಹೆಸರಿನಲ್ಲಿ ಅಭಿಯಾನ ಶುರು

ರಾಹುಲ್​​ ಗಾಂಧಿ ವಿರುದ್ಧ ಕೈಗೊಂಡ ಕ್ರಮಗಳ ವರದಿ ಕೇಳಿರುವ ಆಯೋಗ, ಆಗಸ್ಸ್​​ 17ನೇ ತಾರೀಕಿನಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿ ಎಂದು ಫೇಸ್​​ಬುಕ್​​ ಇಂಡಿಯಾ ಮುಖ್ಯಸ್ಥ ಸತ್ಯ ಯಾದವ್​​ಗೆ ನೋಟಿಸ್​​​​​ ನೀಡಿದೆ. ಹಾಗಾಗಿ ಆಯೋಗದ ಮುಂದೆ ಹಾಜರಾಗಿ ಫೇಸ್​​ಬುಕ್​​ ಇಂಡಿಯಾ ಮುಖ್ಯಸ್ಥರು ರಾಹುಲ್​​ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಆಯೋಗಕ್ಕೆ ವರದಿ ನೀಡಬೇಕಾಗುತ್ತದೆ.

ಇನ್​ಸ್ಟಾಗ್ರಾಂ ಮತ್ತು ಫೇಸ್​​ಬುಕ್​​ನಲ್ಲಿ ರಾಹುಲ್​​ ಗಾಂಧಿಯವರು ಪೋಸ್ಟ್​​ ಮಾಡಿರುವ ಅಪ್ರಾಪ್ತ ಬಾಲಕಿ ಕುಟಂಬಸ್ಥರ ಫೋಟೋ ತೆಗೆದು ಹಾಕುವಂತೆ ಈ ಹಿಂದೆಯೇ ಸಂಬಂಧಿಸಿದ ಸಂಸ್ಥೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿತ್ತು. ಜೆಜೆ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇರೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.

ಇದನ್ನೂ ಓದಿ: ಲಾಕ್ ಆಗಿದ್ದ ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಓಪನ್.. ‘ಸತ್ಯಮೇವ ಜಯತೆ’ ಎಂದ ಕಾಂಗ್ರೆಸ್

Source: newsfirstlive.com Source link