ನನ್ನ ಸ್ಪೀಡ್​​ಗೆ ತಕ್ಕಂತೆ ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ; ಅಧಿಕಾರಿಗಳಿಗೆ ರೇಣುಕಾಚಾರ್ಯ ವಾರ್ನಿಂಗ್​​

ನನ್ನ ಸ್ಪೀಡ್​​ಗೆ ತಕ್ಕಂತೆ ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ; ಅಧಿಕಾರಿಗಳಿಗೆ ರೇಣುಕಾಚಾರ್ಯ ವಾರ್ನಿಂಗ್​​

ದಾವಣಗೆರೆ: ನನ್ನ ಸ್ಪೀಡ್​​​ಗೆ ತಕ್ಕಂತೆ ಕೆಲಸ ಮಾಡಿ, ಇಲ್ಲಂದ್ರೆ ಕ್ಷೇತ್ರ ಖಾಲಿ ಮಾಡಿ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಧಿಕಾರಿಗಳಿಗೆ ಖಡಕ್​​​ ಎಚ್ಚರಿಕೆ ನೀಡಿದ್ದಾರೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಹೀಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಅವಾಜ್​​ ಹಾಕಿದ್ದಾರೆ.

ಹೊನ್ನಾಳಿ ಕ್ಷೇತ್ರದ ಅಧಿಕಾರಿಗಳು ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಕೂಡಲೇ ಜಾಗ ಖಾಲಿ ಮಾಡಬೇಕು. ಕ್ಷೇತ್ರದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿದಾಗ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಿ ಎಂದು ಆದೇಶಿಸಿದ್ದೆ. ಎಲ್ಲಿ ಮಾಡಿದ್ದೀರಿ ತೋರಿಸಿ ಎಂದು ಸಚಿವ ಬೈರತಿ ಬಸವರಾಜ್​​ ಮುಂದೆಯೇ ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ನಾನು ದೆಹಲಿಯಲ್ಲೇ ಇರಲಿ, ಬೆಂಗಳೂರಿನಲ್ಲೇ ಇರಲಿ. ನಿಮ್ಮ ಕೆಲಸ ನೀವು ಮಾಡಬೇಕು. ನನಗೆ ಅವಳಿ ತಾಲೂಕಿನ ಬಗ್ಗೆ ಎಲ್ಲಾ ಮಾಹಿತಿ ಬರುತ್ತಿದೆ. ನಾನು ಹೇಳಿದ 15 ದಿನವಾದರೂ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿಲ್ಲ. ನನ್ನ ಸ್ಪೀಡ್​​ಗೆ ತಕ್ಕಂತೆ ಕೆಲಸ ಮಾಡಬಹುದು, ಇಲ್ಲದೆ ಹೋದಲ್ಲಿ ಜಾಗ ಖಾಲಿ ಮಾಡಬಹುದು ಎಂದು ಅಧಿಕಾರಿಗಳಿಗೆ ವಾರ್ನ್​​ ಮಾಡಿದ್ದಾರೆ.

ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ಬೊಮ್ಮಾಯಿಗೆ ಅಗ್ರೆಸಿವ್ ಇಮೇಜ್ -ಬಿಜೆಪಿ ಆಡ್ತಿದ್ಯಾ ಡಬಲ್ ಗೇಮ್?

Source: newsfirstlive.com Source link