ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ: ಸಿ.ಟಿ. ರವಿ

ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ: ಸಿ.ಟಿ. ರವಿ

ಚಿಕ್ಕಮಗಳೂರು: ಯಾರಿಗೆ ತಂದೆ ಯಾರೆಂದು ಅನುಮಾನವಿರುತ್ತೋ ಅವರು ಸಾವರ್ಕರ್ ಯಾರೆಂದು ಕೇಳುತ್ತಾರೆ, ಅಂತ, ಜಿಲ್ಲೆಯಲ್ಲಿ ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಯೋಗ್ಯತೆಗಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತಿಯಾ’ -ಗುಬ್ಬಿ ಶಾಸಕ, ಬಿಜೆಪಿ ಸಂಸದರ ಮಧ್ಯೆ ವಾಕ್​ ಸಮರ

ಎರಡು ಕರಿನೀರಿನ ಶಿಕ್ಷೆಗೆ ಒಳಗಾದವರು ವೀರ ಸಾವರ್ಕರ್.. ಎರಡು ಜೀವವಾಧಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಸಾವರ್ಕರ್. ಅವರ ಬಗ್ಗೆ ಗೊತ್ತಿಲ್ಲದವರಿಗೆ ತಮ್ಮ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ. ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಅವರ ಹೆಸರನ್ನ ಬಳಸಿಕೊಳ್ಳುತ್ತಿದ್ದಾರೆ. ನೆಹರೂ ನೂರಾರು ಫೋಟೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿವೆ. ಅಟಲ್ ಜೀ ಅವರದ್ದು ಆ ರೀತಿ ಒಂದು ತೋರಿಸಲಿ ಅಂತ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

ಅಟಲ್ ಜೀ ಬದುಕಿದ್ದಾಗಲೂ ವಿವಾದಕ್ಕೆ ಒಳಗಾಗಲಿಲ್ಲ.. ಈಗ ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಹೆಸರು ಬಳಕೆ ಮಾಡ್ತಿದ್ದಾರೆ. ನೆಹರೂ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಚಿತ್ರಗಳನ್ನ ಕಾಂಗ್ರೆಸ್ ಸಮರ್ಥಿಸುತ್ತಿದೆ. ವಸ್ತು ನಿಷ್ಠ ಸಮರ್ಥನೆಗೆ ವಿಷಯ ಇಲ್ಲದಾಗ ನಿಂದನೆಗೆ ಇಳಿಯುತ್ತಾರೆ. ಈಗ ಕಾಂಗ್ರೆಸ್ ಇಳಿದಿರುವುದು ನಿಂದನೆಗೆ, ಆ ನಿಂದನೆಗೆ ಎಲ್ಲರ ಹೆಸರು ಬಳಕೆ ಮಾಡ್ತಾರೆ. ಈಗಿರುವುದು ಹಳೇ ಕಾಂಗ್ರೆಸ್ ಅಲ್ಲ, ಇದು, ಇಟಲಿ ಕಾಂಗ್ರೆಸ್ ಅಂತ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Source: newsfirstlive.com Source link