ಡ್ಯಾನ್ಸ್​ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಪವರ್​ ಸ್ಟಾರ್​!

ಡ್ಯಾನ್ಸ್​ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಪವರ್​ ಸ್ಟಾರ್​!

ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಬರ್ತಿರೋದು ಗೊತ್ತಿರುವ ವಿಚಾರ. ಇನ್ನೊಂದು ಖುಷಿ ವಿಚಾರ ಅಂದ್ರೆ ಡ್ಯಾನ್ಸ್ ಕಿಂಗ್​ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ ಶೋ ಲಾಂಚ್​ ಮಾಡಿರೋದು.

ಡ್ಯಾನ್ಸ್​ ಡ್ಯಾನ್ಸ್​ ಶೋ ಈಗಾಗಲೇ ಕ್ರೇಜ್​ ಮೂಡಿಸಿರುವ ರಿಯಾಲಿಟಿ ಶೋಗಳಲ್ಲಿ ಒಂದು.. ಕಳೆದ ಆವೃತ್ತಿಯಲ್ಲಿ ಗೆಸ್ಟ್​ ಆಗಿ ಬಂದಿದ್ದ ಅಪ್ಪು, ಈಗ ಕಾರ್ಯಕ್ರಮದ ಲಾಂಚ್​ ಮಾಡಿದ್ದು, ಡ್ಯಾನ್ಸ್​ ಮಾಡಲು ಸಿದ್ಧವಾಗಿರುವ ಪ್ರತಿಭೆಗಳಿಗೆ ಜೋಶ್​ ತುಂಬಿದಂತಾಗಿದೆ. ಈ ಬಗ್ಗೆ ವಾಹಿನಿ ಪ್ರೋಮೋ ರಿಲೀಸ್​ ಮಾಡಿದ್ದು, ಸಖತ್​ ಕಲರ್​ಫುಲ್​ ಆಗಿದೆ.. ಇನ್ನು ಅಪ್ಪುಗೆ ಡ್ಯಾನ್ಸ್​ ಮೂಲಕ ಧನ್ಯವಾದ ಅರ್ಪಿಸಲಾಗಿದ್ದು, ಡ್ಯಾನ್ಸ್​ ವೇದಿಕೆಯ ಪ್ರೀತಿ, ಅಭಿಮಾನಕ್ಕೆ ಪುನೀತ್​ ಎಮೋಷನಲ್​ ಆಗಿ ಮಾತ್ನಾಡಿದ್ದಾರೆ.

blank

​ಈ ಶೋ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಮೊದಲ ಬಾರಿಗೆ ಬಿಗ್​ಬಾಸ್​ ಸೀಸನ್​ 7ರ ವಿನ್ನರ್​ ಶೈನ್​ ಶೆಟ್ಟಿ ಈ ಶೋ ಹೋಸ್ಟ್​ ಮಾಡುತ್ತಿದ್ದು, ಸೂಪರ್​ ಟ್ಯಾಲೆಂಟೆಡ್​ ಕೊರಿಯೋಗ್ರಫರ್​ ಹಾಗೂ ನಿದೇರ್ಶಕರಾಗಿರುವ ಎ.ಹರ್ಷ ಮಾಸ್ಟರ್​ ಜಡ್ಜ್​ ಸೀಟ್​ನಲ್ಲಿದ್ದರೆ, ಇದೇ ಮೊದಲ ಬಾರಿಗೆ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವ್​ರಾಜ್, ನಟಿ ಹರಿಪ್ರಿಯಾ ಜಡ್ಜ್​ ಸೀಟ್​ನಲ್ಲಿ ಹೇಗೆ ಕಮಾಲ್​ ಮಾಡಲಿದ್ದಾರೆ ಎಂಬುವುದನ್ನ ನೋಡ್ಬೇಕು.

blank

ಡ್ಯಾನ್ಸ್​ ಡ್ಯಾನ್ಸ್​ ಪವರ್​ ಶೋಗೆ ಪವರ್​ ಸ್ಟಾರ್​ ಲಗ್ಗೆ ಇಟ್ಟಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಅಂದ್ಹಾಗೆ ಇದೇ ಆಗಸ್ಟ್​ 20 ರಂದು ಭರ್ಜರಿಯಾಗಿ ಲಾಂಚ್​ ಆಗಲಿದೆ ಡ್ಯಾನ್ಸ್​ ಡ್ಯಾನ್ಸ್​. ಕಳೆದ ಆವೃತ್ತಿಯಲ್ಲಿ ತಮ್ಮ ಡ್ಯಾನ್ಸ್​ ಅನುಭಗಳನ್ನ ಹಂಚಿಕೊಂಡು ಮಕ್ಕಳ ಜೊತೆ ಮಗು ಆಗಿದ್ದ ಅಪ್ಪು. ಈ ಬಾರಿ ಡ್ಯಾನ್ಸ್ ವೇದಿಕೆಯಲ್ಲಿ ಧೂಳ್​ ಎಬ್ಬಿಸಿದ್ದು, ಅಪ್ಪು ಡ್ಯಾನ್ಸ್​ ಕಣ್ತುಂಬಿಕೊಳ್ಳಲು ಅಗಸ್ಟ್​ 20 ರವರೆಗೆ ನೀವು ಕಾಯಲೇಬೇಕು.

blank

Source: newsfirstlive.com Source link