ಶಾಂಪೈನ್​​ ಮುಚ್ಚಳ ಎಸೆದು ಇಂಗ್ಲೆಂಡ್​ ಫ್ಯಾನ್ಸ್ ಅನುಚಿತ ವರ್ತನೆ: ಕೊಹ್ಲಿ ರಿಪ್ಲೈ ಹೇಗಿತ್ತು ಗೊತ್ತಾ.?

ಶಾಂಪೈನ್​​ ಮುಚ್ಚಳ ಎಸೆದು ಇಂಗ್ಲೆಂಡ್​ ಫ್ಯಾನ್ಸ್ ಅನುಚಿತ ವರ್ತನೆ: ಕೊಹ್ಲಿ ರಿಪ್ಲೈ ಹೇಗಿತ್ತು ಗೊತ್ತಾ.?

ಲಾರ್ಡ್ಸ್​​​ನಲ್ಲಿ ನಡೆಯುತ್ತಿರುವ ಇಂಡೋ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ಅಭಿಮಾನಿಗಳು ಅನುಚಿತ ವರ್ತನೆ ತೋರಿದ್ದಾರೆ. ಮೂರನೇ ದಿನದಾಟದ 68ನೇ ಓವರ್​ನಲ್ಲಿ ಇಂಗ್ಲೆಂಡ್​ ಫ್ಯಾನ್ಸ್​​​ನ ನಾಚಿಕೆಗೇಡಿನ ಕೆಲಸವನ್ನ ಮಾಡಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ಅಭಿಮಾನಿಗಳು ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕೆ.ಎಲ್.ರಾಹುಲ್ ಮೇಲೆ ಬಿಯರ್ ಮತ್ತು ಶಾಂಪೇನ್ ಕಾರ್ಕ್​​ಗಳನ್ನು (ಮುಚ್ಚಳ) ಎಸೆದಿರುವುದು ಕಂಡು ಬಂದಿದೆ.

ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದಾಗ ಬೌಂಡರಿ ಗೆರೆಯಲ್ಲಿ ಬಿಯರ್ ಮತ್ತು ಶಾಂಪೇನ್ ಕಾರ್ಕ್​​ಗಳು (ಮುಚ್ಚಳಗಳು) ಬಿದ್ದಿದ್ದವು. ಬಳಿಕ ಅವುಗಳನ್ನು ಮುಟ್ಟಿ ನೋಡಿದ ರಾಹುಲ್ ಕೋಪಗೊಂಡು, ಫ್ಯಾನ್ಸ್​ ಇದ್ದ ಸ್ಟ್ಯಾಂಡ್​​ಗೆ ಎಸೆದಿದ್ದಾರೆ. ಬಳಿಕ ರಾಹುಲ್​​, ಕ್ಯಾಪ್ಟನ್​ ಕೊಹ್ಲಿಗೆ ಹೇಳಿದ್ರು. ಕೊಹ್ಲಿ ಕೂಡ ಅವುಗಳನ್ನು ಅವರಿಗೆ ಎಸೆದು ಬಿಡು ಎನ್ನುವ ಸೂಚನೆ ನೀಡಿದ್ರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದ್ದು, ನೆಟ್ಟಿಗರು ಇಂಗ್ಲೆಂಡ್​ ಫ್ಯಾನ್ಸ್​ ನಡೆಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಜನಾಂಗೀಯ ನಿಂದನೆ ಮಾಡಲಾಗಿತ್ತು. ಇದೀಗ ಮದ್ಯ ಬಾಟಲ್​ಗಳ ಮುಚ್ಚಳಗಳನ್ನು ಎಸೆದಿದ್ದಾರೆ. ಇದು ಅವರ ನಡೆ ಏನೆಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

 

Source: newsfirstlive.com Source link